ಹೀಗೆ ಲಕ್ಷಾಂತರ ಜನರ ಜೀವ ಹೋಗುತ್ತಿರುವುದು ಕೇಂದ್ರ ಸರ್ಕಾರದಿಂದ ನಿರ್ಲಕ್ಷ್ಯದಿಂದ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ

ಫೇಸ್​ಬುಕ್ ಪೋಸ್ಟ್ ಮೂಲಕ ಯಾರು ಹೊಣೆ? (Zimmedaar Kaun?) ಎಂಬ ಅಭಿಯಾನ ಶುರು ಮಾಡಿದ ಪ್ರಿಯಾಂಕಾ ಗಾಂಧಿ, ದೇಶದಲ್ಲಿ ಕೊರೊನಾ ಸಂದರ್ಭವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೀಗೆ ಲಕ್ಷಾಂತರ ಜನರ ಜೀವ ಹೋಗುತ್ತಿರುವುದು ಕೇಂದ್ರ ಸರ್ಕಾರದಿಂದ ನಿರ್ಲಕ್ಷ್ಯದಿಂದ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ
ಪ್ರಿಯಾಂಕಾ ಗಾಂಧಿ
Follow us
Lakshmi Hegde
|

Updated on:May 25, 2021 | 7:59 PM

ದೆಹಲಿ: ಕೊವಿಡ್ 19 ಸೋಂಕಿನ ಎರಡನೇ ಅಲೆಯಲ್ಲಿ ಲೆಕ್ಕವಿಲ್ಲದಷ್ಟು ಜನರ ಪ್ರಾಣ ಹೋಗಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಆರೋಪಿಸಿದ್ದಾರೆ. ಆಡಳಿತದಲ್ಲಿ ಇರುವವರು ತಮ್ಮ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಫೇಸ್​ಬುಕ್ ಪೋಸ್ಟ್ ಮೂಲಕ ಯಾರು ಹೊಣೆ? (Zimmedaar Kaun?) ಎಂಬ ಅಭಿಯಾನ ಶುರು ಮಾಡಿದ ಪ್ರಿಯಾಂಕಾ ಗಾಂಧಿ, ದೇಶದಲ್ಲಿ ಕೊರೊನಾ ಸಂದರ್ಭವನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಪರಿಸ್ಥಿತಿಗೆ ಯಾರು ಹೊಣೆ? ಎಂಬ ಪ್ರಶ್ನೆಯನ್ನು ನಾನು ಈ ದೇಶದ ಕೋಟ್ಯಂತರ ಜನರ ಪರವಾಗಿ ಕೇಳುತ್ತಿದ್ದೇನೆ ಎಂದೂ ಹೇಳಿದ್ದಾರೆ.

ಹಿಂದಿಯಲ್ಲಿ ಫೇಸ್​​ಬುಕ್​ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕಾ ಗಾಂಧಿ, ಕೊವಿಡ್​ 19 ಸೋಂಕಿನಿಂದಾಗಿ ಜನರು ಪರದಾಡುವಂತಾಗಿದೆ. ಆಸ್ಪತ್ರೆಗಳಲ್ಲಿ ಬೆಡ್​, ಆಕ್ಸಿಜನ್​, ಔಷಧಗಳು, ಲಸಿಕೆಗಳ ಅಲಭ್ಯತೆ ಉಂಟಾಗಿದೆ. ಈಗಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸರ್ಕಾರ ಜನರ ಪ್ರಾಣ ಉಳಿಸಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತದೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ ಸರ್ಕಾರ ಮೌನಕ್ಕೆ ಜಾರಿ, ತನ್ನಪಾಡಿಗೆ ತಾನು ಇದ್ದುಬಿಟ್ಟಿತು. ಇದೊಂದು ತುಂಬ ನೋವಿನ ಸಂಗತಿ ಎಂದಿದ್ದಾರೆ.

ಲಸಿಕೆ ರಫ್ತು, 2020ರಲ್ಲಿ ಆಮ್ಲಜನಕ ರಫ್ತು ಪ್ರಮಾಣವನ್ನು ದ್ವಿಗುಣಗೊಳಿಸಿದ್ದು, ಜನಸಂಖ್ಯೆಗೆ ಅನುಗುಣವಾಗಿ ಲಸಿಕೆಗೆ ಆದೇಶ ನೀಡದೆ ಇರುವುದು.. ಹೀಗೆ ವಿವಿಧ ವಿಚಾರಗಳಲ್ಲಿ ಸರ್ಕಾರ ಎಡವಿದೆ. ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.

ಇದನ್ನೂ ಓದಿ: Corona Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ಮಸಣದಲ್ಲಿ ಗಂಡ ಹೆಣ ಬೇಯಿಸುತ್ತಿದ್ದರೆ ಹೆಂಡತಿ ಒಲೆಮೇಲೆ ಕಣ್ಣೀರು ಕುದಿಸಬೇಕೆ?

Karnataka Covid Update: ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ; ಮರಣ ಪ್ರಮಾಣದಲ್ಲಿ ಸುಧಾರಣೆ ಇಲ್ಲ

Published On - 7:58 pm, Tue, 25 May 21