ಬಿಹಾರದಲ್ಲಿ ಆ್ಯಸಿಡ್​ನಿಂದ ವಿರೂಪಗೊಂಡ ಸ್ಥಿತಿಯಲ್ಲಿ ಮೂವರ ಶವ ಪತ್ತೆ

|

Updated on: Aug 10, 2024 | 7:10 PM

ಆ್ಯಸಿಡ್​ನಿಂದ ವಿರೂಪಗೊಂಡಿರುವ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿದೆ. ದಂಪತಿ ಹಾಗೂ 10 ವರ್ಷದ ಮಗಳ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಮೂವರು ರಕ್ತದಮಡುವಿನಲ್ಲಿ ಬಿದ್ದಿದ್ದರು, ಕತ್ತು ಸೀಳಿತ್ತು ಜತೆಗೆ ಆ್ಯಸಿಡ್ ಸುರಿದು ಮುಖವನ್ನು ವಿರೂಪಗೊಳಿಸಲಾಗಿತ್ತು

ಬಿಹಾರದಲ್ಲಿ ಆ್ಯಸಿಡ್​ನಿಂದ ವಿರೂಪಗೊಂಡ ಸ್ಥಿತಿಯಲ್ಲಿ ಮೂವರ ಶವ ಪತ್ತೆ
ಜನರು
Image Credit source: India Today
Follow us on

ಆ್ಯಸಿಡ್​ನಿಂದ ವಿರೂಪಗೊಂಡಿರುವ ಸ್ಥಿತಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆಯಾಗಿದೆ. ದಂಪತಿ ಹಾಗೂ 10 ವರ್ಷದ ಮಗಳ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ. ಮೂವರು ರಕ್ತದಮಡುವಿನಲ್ಲಿ ಬಿದ್ದಿದ್ದರು, ಕತ್ತು ಸೀಳಿತ್ತು ಜತೆಗೆ ಆ್ಯಸಿಡ್ ಸುರಿದು ಮುಖವನ್ನು ವಿರೂಪಗೊಳಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿರುವ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಂಡ ಬಳಿಕ ನಿಜವಾದ ಸಂಗತಿ ಹೊರಬರಬಹುದು ಎಂದು ಅಂದಾಜಿಸಲಾಗಿದೆ.

ಮೃತರನ್ನು 40 ವರ್ಷದ ಸಂಜೀವನ್ ಮಹತೋ, ಅವರ ಪತ್ನಿ ಸಂಜಿತಾ ಮತ್ತು ಅವರ 10 ವರ್ಷದ ಮಗಳು ಸಪ್ನಾ ಎಂದು ಗುರುತಿಸಲಾಗಿದ್ದು, ಅವರೆಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ 7 ವರ್ಷದ ಮಗ ಅಂಕುಶ್ ಕುಮಾರ್ ಸ್ಥಿತಿ ಚಿಂತಾಜನಕವಾಗಿದ್ದು, ಪ್ರಾಥಮಿಕ ಚಿಕಿತ್ಸೆ ನಂತರ ಬೇಗುಸರಾಯ್ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮನೀಶ್ ಅವರು ತಮ್ಮ ತಂಡದೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಸಮಗ್ರ ತನಿಖೆ ನಡೆಸಿದರು. ಫಾರೆನ್ಸಿಕ್ ತಜ್ಞರು ಮತ್ತು ಶ್ವಾನ ದಳವನ್ನು ಸಹ ಸಹಾಯಕ್ಕಾಗಿ ಕರೆಸಲಾಗಿದೆ.

ಶುಕ್ರವಾರ ರಾತ್ರಿ ಮಹತೋ ಕುಟುಂಬವು ಪೂಜೆಯನ್ನು ಆಚರಿಸಿತು ಮತ್ತು ಮಧ್ಯರಾತ್ರಿಯ ಸುಮಾರಿಗೆ ಮಲಗುವ ಮೊದಲು ಸಿಹಿ ಹಂಚಿದ್ದರು, ಶನಿವಾರ ಬೆಳಗ್ಗೆ 7 ಗಂಟೆಯಾದರೂ ಮನೆಯವರು ಬಾಗಿಲು ತೆರೆಯದಿದ್ದಾಗ, ನೆರೆಹೊರೆಯವರು ಅವರನ್ನು ಪರೀಕ್ಷಿಸಲು ಹೋದರು ಆದರೆ ಬಾಗಿಲು ಮುಚ್ಚಿರುವುದು ಕಂಡುಬಂತು.

ಅವರು ಇನ್ನೂ ಮಲಗಿದ್ದಾರೆ ಎಂದು ಭಾವಿಸಿ, ನೆರೆಹೊರೆಯವರು ಹೊರಟುಹೋದರು. ಆದರೆ, 30 ನಿಮಿಷಗಳ ನಂತರವೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ನೆರೆಹೊರೆಯವರು ಮತ್ತೆ ಒಳಗೆ ಇಣುಕಿ ನೋಡಿದಾಗ, ಕುಟುಂಬವು ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ.

ಮತ್ತಷ್ಟು ಓದಿ: ಚಿಕನ್​​ ಕರಿ ಕೇಳಿದ ಗಂಡನ ಮೆದುಳು ಹೊರಬರುವಂತೆ ಇಟ್ಟಿಗೆಯಿಂದ ಹೊಡೆದು ಕೊಂದ ಪತ್ನಿ

ಸ್ಥಳೀಯ ನಿವಾಸಿ ಭೋಲಾ ದಾಸ್ ಕೊಲೆಗೆ ಕಾರಣ ಎಂದು ಸಂತ್ರಸ್ತರ ಕುಟುಂಬ ಶಂಕಿಸಿದೆ. ಸಂಜೀವನ್ ಮಹ್ತೋ ಭೋಲಾ ಎಂಬಾತನಿಂದ ಜಮೀನು ಖರೀದಿಸಿದ್ದು, ಎರಡು ಕುಟುಂಬಗಳ ನಡುವೆ ವಿವಾದಕ್ಕೆ ಕಾರಣವಾಗಿತ್ತು. ಭೋಲಾ ದಾಸ್ ಮಹತೋ ಕುಟುಂಬದ ವಿರುದ್ಧ ಮೊಕದ್ದಮೆ ಹೂಡಿದ್ದರು. ಭೋಲಾ ದಾಸ್ ದಾಳಿಗೆ ಸಂಚು ರೂಪಿಸಿದ ಎಂದು ಸಂಬಂಧಿಕರು ನಂಬಿದ್ದಾರೆ.

ತನಿಖೆಗಾಗಿ ಶ್ವಾನದಳವನ್ನು ಕರೆಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಯ ಹಿಂದಿನ ನಿಖರವಾದ ಉದ್ದೇಶವು ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ತನಿಖೆ ನಡೆಯುತ್ತಿದೆ.

ಸಂಜೀವನ್ ಮಹತೋ ಅವರ ಮೊದಲ ಪತ್ನಿ ಸುಮಾರು 20 ವರ್ಷಗಳ ಹಿಂದೆ ಅವರನ್ನು ತೊರೆದಿದ್ದರು, ನಂತರ ಅವರು ಸರಿಸುಮಾರು 12 ವರ್ಷಗಳ ಹಿಂದೆ ಮರುಮದುವೆಯಾದರು ಎಂದು ಎಸ್ಪಿ ಮನೀಶ್ ಬಹಿರಂಗಪಡಿಸಿದ್ದಾರೆ. ಅವನಿಗೆ ಮೊದಲ ಮದುವೆಯಿಂದ 20 ವರ್ಷದ ಮಗನಿದ್ದಾನೆ, ಅವನು ತನ್ನ ಅಜ್ಜಿಯರೊಂದಿಗೆ ಹತ್ತಿರದ ಮನೆಯಲ್ಲಿ ವಾಸಿಸುತ್ತಿದ್ದಾನೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 7:10 pm, Sat, 10 August 24