TV Somanathan: ಸಂಪುಟ ಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ಟಿವಿ ಸೋಮನಾಥನ್ ನೇಮಕ

Cabinet Secretary: ಐಎಎಸ್ ಅಧಿಕಾರಿ ಟಿವಿ ಸೋಮನಾಥನ್ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನರೇಂದ್ರ ಮೋದಿ ಸರ್ಕಾರ ನೇಮಿಸಿದೆ.

TV Somanathan: ಸಂಪುಟ ಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ಟಿವಿ ಸೋಮನಾಥನ್ ನೇಮಕ
ಟಿವಿ ಸೋಮನಾಥನ್
Follow us
ನಯನಾ ರಾಜೀವ್
|

Updated on:Aug 10, 2024 | 6:57 PM

ಐಎಎಸ್ ಅಧಿಕಾರಿ ಟಿವಿ ಸೋಮನಾಥನ್ ಅವರನ್ನು ಸಂಪುಟ ಕಾರ್ಯದರ್ಶಿಯಾಗಿ ನರೇಂದ್ರ ಮೋದಿ ಸರ್ಕಾರ ನೇಮಿಸಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ರಾಜೀವ್ ಗೌಬಾ ಅವರಿಗೆ ಸಂಪುಟ ಕಾರ್ಯದರ್ಶಿಯಾಗಿ ಎರಡನೇ ಬಾರಿ ವಿಸ್ತರಣೆ ಮಾಡಲಾಗಿಲ್ಲ.

ಸ್ವಾಮಿನಾಥನ್ ತಮಿಳುನಾಡು ಕೇಡರ್​ನ 1987 ಬ್ಯಾಚ್​ನ ಐಎಎಸ್​ ಅಧಿಕಾರಿ. 2021ರಿಂದ ಸ್ವಾಮಿನಾಥನ್ ಅವರು ಹಣಕಾಸು ಕಾರ್ಯದರ್ಶಿ ಹುದ್ದೆಯನ್ನು ನೋಡಿಕೊಳ್ಳುತ್ತಿದ್ದರು. ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಲ್ಲಿ ಅವರು ಅತ್ಯಂತ ಹಿರಿಯರಾಗಿದ್ದರು.

ಟಿವಿ ಸೋಮನಾಥನ್ ಅವರು ಆಡಳಿತಾತ್ಮಕ ಸೇವೆಗಳಲ್ಲಿ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಹಣಕಾಸು ಸಚಿವಾಲಯಕ್ಕೆ ಸೇರುವ ಮೊದಲು ಅವರು ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೇ ಬಜೆಟ್ ಮೇಕಿಂಗ್ ತಂಡದಲ್ಲೂ ಅವರಿದ್ದರು.

ಸಂಪುಟ ಕಾರ್ಯದರ್ಶಿಯ ಜವಾಬ್ದಾರಿ ಏನು? ಸಂಪುಟ ಕಾರ್ಯದರ್ಶಿಯು ಸರ್ಕಾರದ ಪ್ರಮುಖ ನೀತಿಗಳು ಹಾಗೂ ಸಾಮಾಜಿಕ ವಲಯದ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸುವ ಹಾಗೂ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

ಈ ಹುದ್ದೆ ಸೃಷ್ಟಿಯಾಗಿದ್ದು ಹೇಗೆ? ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲು ವೈಸರಾಯ್ ಅವರ ಕಾರ್ಯಕಾರಿ ಮಂಡಳಿಯಲ್ಲಿ ವೈಸರಾಯ್ ಅವರ ಖಾಸಗಿ ಕಾರ್ಯದರ್ಶಿ ನೇತೃತ್ವದ ಸೆಕ್ರೇಟರಿಯೇಟ್​ ಇತ್ತು. ಈ ಮೊದಲು ಕಾರ್ಯಕಾರಿ ಮಂಡಳಿಗೆ ಸಂಬಂಧಿಸಿದ ಕಾರ್ಯವನ್ನು ನೋಡಿಕೊಳ್ಳುವುದು ಈ ಕಾರ್ಯದರ್ಶಿಯ ಪಾತ್ರವಾಗಿತ್ತು. ಆದರೆ ಷರತ್ತಿನಡಿಯಲ್ಲಿ ವಿವಿಧ ಇಲಾಖೆಗಳ ಕೆಲಸಗಳು ಹೆಚ್ಚಾದಂತೆ ಸಚಿವಾಲಯದ ಕೆಲಸವು ಹೆಚ್ಚು ಸಂಕೀರ್ಣವಾಯಿತು.

ಈ ಖಾಸಗಿ ಕಾರ್ಯದರ್ಶಿಯನ್ನು ಸೆಕ್ರೆಟರಿಯೇಟ್​ ಕಾರ್ಯದರ್ಶಿ ಎಂದು ಕರೆಯಲಾಯಿತು. ಈ ಹುದ್ದೆಯು ಕಾಲಾನಂತರದಲ್ಲಿ ಹೆಚ್ಚು ಶಕ್ತಿಯುತವಾಯಿತು ಮತ್ತು ಇಲಾಖೆಗಳ ಕೆಲಸವನ್ನು ಸಮನ್ವಯಗೊಳಿಸಲು ಸಚಿವಾಲಯದ ಪ್ರಮುಖ ಪಾತ್ರವಾಯಿತು, 1946 ರಲ್ಲಿ ಸೆಕ್ರೆಟರಿಯೇಟ್ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಆಯಿತು ಮತ್ತು ಕಾರ್ಯದರ್ಶಿ ಸಂಪುಟ ಕಾರ್ಯದರ್ಶಿಯಾದರು.

ದೇಶದ ಪ್ರಮುಖ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ನಿರ್ವಹಿಸುವುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ವಿವಿಧ ಸಚಿವಾಲಯಗಳ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು ಸಂಪುಟ ಕಾರ್ಯದರ್ಶಿಯ ಕಾರ್ಯಗಳಲ್ಲಿ ಒಂದಾಗಿದೆ. ಕ್ಯಾಬಿನೆಟ್ ಕಾರ್ಯದರ್ಶಿಯ ವೇತನವು ಕೇಂದ್ರ ಸಚಿವರಿಗಿಂತ ಎರಡು ಪಟ್ಟು ಹೆಚ್ಚಿರುತ್ತದೆ.

ಸಂಪುಟ ಕಾರ್ಯದರ್ಶಿಯ ಮೂಲ ವೇತನ 2,50000 ರೂ. ಇದಲ್ಲದೇ ತುಟ್ಟಿ ಭತ್ಯೆ, ವೈದ್ಯಕೀಯ ಭತ್ಯೆ, ಪ್ರಯಾಣ ಭತ್ಯೆ, ಮನೆ ಬಾಡಿಗೆ ಭತ್ಯೆ ಸೇರಿದಂತೆ 5 ಲಕ್ಷ 60 ಸಾವಿರ ರೂ. ಇನ್ನು ಕೇಂದ್ರ ಸಚಿವರ ಬಗ್ಗೆ ಹೇಳುವುದಾದರೆ ಪ್ರತಿ ತಿಂಗಳು ಮೂಲ ವೇತನ 1 ಲಕ್ಷ ರೂ., ಇದರೊಂದಿಗೆ ಕ್ಷೇತ್ರ ಭತ್ಯೆ 70 ಸಾವಿರ, ಕಚೇರಿ ಭತ್ಯೆ 60 ಸಾವಿರ, ಆತಿಥ್ಯ ಭತ್ಯೆ 2000 ರೂ. ಇದು ಒಟ್ಟು 2 ಲಕ್ಷ 32 ಸಾವಿರ ರೂ. ಇರಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 6:09 pm, Sat, 10 August 24

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ