ಇನ್ಮುಂದೆ ಶಾಲೆಗಳಲ್ಲಿ ಮಕ್ಕಳು ಗುಡ್ ಮಾರ್ನಿಂಗ್ ಬದಲು ಜೈ ಹಿಂದ್ ಹೇಳ್ಬೇಕಂತೆ!
ಇನ್ನುಮುಂದೆ ಶಾಲೆಗಳಲ್ಲಿ ಗುಡ್ ಮಾರ್ನಿಂಗ್ ಬದಲು ಮಕ್ಕಳು ಜೈ ಹಿಂದ್ ಎಂದು ಹೇಳುವಂತೆ ಸರ್ಕಾರ ಸೂಚನೆ ನೀಡಿದೆ. ಹರ್ಯಾಣದ ನಯಾಬ್ ಸೈನಿ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಹ ಹರ್ಯಾಣದಲ್ಲಿ ಶಾಲೆಗಳಲ್ಲಿ ಆಗಸ್ಟ್ 15ರಿಂದ ಮಕ್ಕಳು ಜೈಹಿಂದ್ ಎಂದೇ ಹೇಳಬೇಕು. ಈ ರೀತಿ ಹೇಳುವುದರಿಂದ ಮಕ್ಕಳಿಗೆ ದೇಶದ ಬಗ್ಗೆ ಗೌರವ ಹೆಚ್ಚುತ್ತದೆ ಎಂಬುದು ಸರ್ಕಾರದ ನಂಬಿಕೆಯಾಗಿದೆ. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಈ ಸುತ್ತೋಲೆಯನ್ನು ಹೊರಡಿಸಿದೆ. ಹರ್ಯಾಣ ಸರ್ಕಾರವು ಪ್ರಾರಂಭಿಸಿರುವ ಈ ಹೆಜ್ಜೆಯು ಮಕ್ಕಳಲ್ಲಿ ದೇಶಭಕ್ತಿಯನ್ನು […]
ಇನ್ನುಮುಂದೆ ಶಾಲೆಗಳಲ್ಲಿ ಗುಡ್ ಮಾರ್ನಿಂಗ್ ಬದಲು ಮಕ್ಕಳು ಜೈ ಹಿಂದ್ ಎಂದು ಹೇಳುವಂತೆ ಸರ್ಕಾರ ಸೂಚನೆ ನೀಡಿದೆ. ಹರ್ಯಾಣದ ನಯಾಬ್ ಸೈನಿ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಹ ಹರ್ಯಾಣದಲ್ಲಿ ಶಾಲೆಗಳಲ್ಲಿ ಆಗಸ್ಟ್ 15ರಿಂದ ಮಕ್ಕಳು ಜೈಹಿಂದ್ ಎಂದೇ ಹೇಳಬೇಕು.
ಈ ರೀತಿ ಹೇಳುವುದರಿಂದ ಮಕ್ಕಳಿಗೆ ದೇಶದ ಬಗ್ಗೆ ಗೌರವ ಹೆಚ್ಚುತ್ತದೆ ಎಂಬುದು ಸರ್ಕಾರದ ನಂಬಿಕೆಯಾಗಿದೆ. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಈ ಸುತ್ತೋಲೆಯನ್ನು ಹೊರಡಿಸಿದೆ. ಹರ್ಯಾಣ ಸರ್ಕಾರವು ಪ್ರಾರಂಭಿಸಿರುವ ಈ ಹೆಜ್ಜೆಯು ಮಕ್ಕಳಲ್ಲಿ ದೇಶಭಕ್ತಿಯನ್ನು ತುಂಬುವುದಾಗಿದೆ.
ಶಾಲಾ ಶಿಕ್ಷಣ ನಿರ್ದೇಶನಾಲಯವು ಈ ಸುತ್ತೋಲೆಯನ್ನು ಎಲ್ಲಾ ಜಿಲ್ಲಾ ಶಿಕ್ಷಣಾಧಿಕಾರಿಗಳು, ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಜಿಲ್ಲಾ ಬ್ಲಾಕ್ ಶಿಕ್ಷಣಾಧಿಕಾರಿಗಳು, ಬ್ಲಾಕ್ ಪ್ರಾಥಮಿಕ ಶಿಕ್ಷಣಾಧಿಕಾರಿಗಳು, ಮುಖ್ಯೋಪಾಧ್ಯಾಯರಿಗೆ ಕಳುಹಿಸಿದ್ದಾರೆ.
ಮತ್ತಷ್ಟು ಓದಿ: ನುಂಗಲಾರದ ತುತ್ತು: ಶಾಲೆಯಲ್ಲಿ ಮಕ್ಕಳಿಗೆ ಅನ್ನದ ಜತೆ ಮೆಣಸಿನ ಪುಡಿ ಬೆರೆಸಿದ ಊಟ
ಗುಡ್ ಮಾರ್ನಿಂಗ್ ಬದಲು ಜೈ ಹಿಂದ್ ಹೇಳುವುದುರಿಂದ ವಿದ್ಯಾರ್ಥಿಗಳು ರಾಷ್ಟ್ರೀಯ ಏಕತೆಯ ಮನೋಭಾವದಿಂದ ಪ್ರೇರಿತರಾಗಬಹುದು ಎಂದು ಹೇಳಲಾಗಿದೆ. ಸರ್ಕಾರಿ ಶಾಲೆಗಳಲ್ಲಿ, ವಿದ್ಯಾರ್ಥಿಗಳು ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಅಥವಾ ತರಗತಿಗೆ ಶಿಕ್ಷಕರು ಆಗಮಿಸಿದಾಗ ಗುಡ್ ಮಾರ್ನಿಂಗ್ ಬದಲಿಗೆ ಜೈ ಹಿಂದ್ ಎಂದು ಸ್ವಾಗತಿಸುತ್ತಾರೆ.
ಜೈ ಹಿಂದ್ ಘೋಷಣೆಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ನೀಡಿದ್ದರು. ಸ್ವಾತಂತ್ರ್ಯದ ನಂತರ, ಜೈ ಹಿಂದ್ ಅನ್ನು ಭಾರತೀಯ ಸಶಸ್ತ್ರ ಪಡೆಗಳು ಸೆಲ್ಯೂಟ್ ಆಗಿ ಅಳವಡಿಸಿಕೊಂಡವು, ಇದು ಸಾರ್ವಭೌಮತ್ವ ಮತ್ತು ಭದ್ರತೆಗೆ ರಾಷ್ಟ್ರದ ನಿರಂತರ ಬದ್ಧತೆಯನ್ನು ಸಂಕೇತಿಸುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ