ದೆಹಲಿ: ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್ಫಂಗಸ್ ಅಥವಾ ಕಪ್ಪುಶಿಲೀಂದ್ರ)ನ್ನು ಅಂಟುರೋಗ (ಸಾಂಕ್ರಾಮಿಕ)ವೆಂದು ಘೋಷಿಸುವಂತೆ ಕೇಂದ್ರಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಮತ್ತಿತರ ಆರೋಗ್ಯ ವಿಮಾ ಯೋಜನೆಯಡಿ ಈ ರೋಗಕ್ಕೆ ಚಿಕಿತ್ಸೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಕಾಯಿಲೆಯನ್ನು ಎಪಿಡೆಮಿಕ್ ಕಾಯ್ದೆಯಡಿ ಸಾಂಕ್ರಾಮಿಕ ಎಂದು ಘೋಷಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಹೀಗಿದ್ದಮೇಲೆ ಈ ಕಾಯಿಲೆಯ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳ ಉತ್ಪಾದನೆ, ಪೂರೈಕೆಗಳೆಲ್ಲ ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಹಾಗೇ, ಅಗತ್ಯ ಇರುವ ರೋಗಿಗಳಿಗೆ ಚಿಕಿತ್ಸೆ, ಆರೈಕೆಯನ್ನು ಉಚಿತವಾಗಿ ನೀಡಬೇಕು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಕಾಯಿಲೆ ಚಿಕಿತ್ಸೆಗೆ ಲಿಪೊಸಾರ್ನಲ್ ಆಂಫೊಟೆರಿಸಿನ್-ಇ 1 ಔಷಧ ಅತ್ಯಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಈ ಔಷಧಿಯ ತೀವ್ರ ಕೊರತೆ ಇರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ, ಈ ರೋಗವನ್ನು ಇನ್ನೂ ಆಯುಷ್ಮಾನ್ ಭಾರತ್ ಸೇರಿ ಯಾವುದೇ ರೀತಿಯ ಆರೋಗ್ಯ ವಿಮೆ ಯೋಜನೆಯಡಿ ಸೇರಿಸಲಾಗಿಲ್ಲ. ದೇಶದಲ್ಲಿ ದಿನೇದಿನೆ ಬ್ಲ್ಯಾಕ್ ಫಂಗಸ್ನಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅವರಿಗೆ ಅನುಕೂಲವಾಗುವಂತೆ ಕೂಡಲೇ ಯೋಜನೆ ರೂಪಿಸಿ ಎಂದು ಮನವಿ ಮಾಡುತ್ತೇನೆ ಎಂದೂ ಬರೆದಿದ್ದಾರೆ.
ಭಾರತದಲ್ಲಿ ಕೊರೊನಾದಿಂದ ಗುಣಮುಖರಾದವರಲ್ಲಿ ಕಪ್ಪುಶಿಲೀಂದ್ರದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರೂ ಎಚ್ಚರಿಕೆ ನೀಡಿದ್ದಾರೆ. ಈ ಬ್ಲ್ಯಾಕ್ ಫಂಗಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಬೇಕು. ಹೊಸ ಸವಾಲಿನ ವಿರುದ್ಧ ಹೋರಾಡಲು ಸಿದ್ಧರಾಗಬೇಕು ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ದಯವಿಟ್ಟು ಜೀವಂತ ಕೋಳಿಗಳಿಗೆ ಮುತ್ತು ಕೊಡಬೇಡಿ: ಅಮೆರಿಕ ಆರೋಗ್ಯ ಸಂಸ್ಥೆ
ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?
Cover Mucormycosis in Ayushman Bharat urged by Sonia Gandhi in letter which is write to PM Modi