Covid 19: ಈ ನಗರದಲ್ಲಿ ಮಾಸ್ಕ್​ ಇಲ್ಲದೆ ಎಲ್ಲೆಂದರಲ್ಲಿ ಓಡಾಡಿದ್ರೆ 500 ರೂ. ದಂಡ

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ಯಾಗುತ್ತಿದ್ದು, ಕೆಲವು ರಾಜ್ಯಗಳು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಚೆನ್ನೈನಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಒಂದೊಮ್ಮೆ ಮಾಸ್ಕ್​ ಧರಿಸದೇ ಇದ್ದಲ್ಲಿ 500 ರೂ. ದಂಡ ವಿಧಿಸಲಾಗುವುದು ಎಂದು ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ತಿಳಿಸಿದೆ

Covid 19: ಈ ನಗರದಲ್ಲಿ ಮಾಸ್ಕ್​ ಇಲ್ಲದೆ ಎಲ್ಲೆಂದರಲ್ಲಿ ಓಡಾಡಿದ್ರೆ 500 ರೂ. ದಂಡ
Mask
TV9kannada Web Team

| Edited By: Nayana Rajeev

Jul 06, 2022 | 10:16 AM

ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆ ಯಾಗುತ್ತಿದ್ದು, ಕೆಲವು ರಾಜ್ಯಗಳು ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ. ಚೆನ್ನೈನಲ್ಲಿ ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಒಂದೊಮ್ಮೆ ಮಾಸ್ಕ್​ ಧರಿಸದೇ ಇದ್ದಲ್ಲಿ 500 ರೂ. ದಂಡ ವಿಧಿಸಲಾಗುವುದು ಎಂದು ಎಂದು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ತಿಳಿಸಿದೆ.

ಬುಧವಾರದಿಂದ ಈ ಕಾನೂನು ಜಾರಿಗೊಳ್ಳಲಿದೆ, ಕಳೆದ ಎರಡು ವಾರಗಳಿಂದ ಚೆನ್ನೈನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಚಿತ್ರಮಂದಿರ, ಮಾಲ್​ಗಳಲ್ಲಿ ಜುಲೈ 6ರಿಂದ ಮಾಸ್ಕ್​ನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸದೇ ಇದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.

ಮಾರ್ಕೆಟ್, ಮಾಲ್​, ಚಿತ್ರಮಂದಿರ, ಕಮರ್ಷಿಯಲ್ ಬಿಲ್ಡಿಂಗ್​ಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಮಾಸ್ಕ್​ ಕಡ್ಡಾಯಗೊಳಿಸಲಾಗಿದೆ. ತಮಿಳುನಾಡಿನಲ್ಲಿ 2662 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 1060 ಪ್ರಕರಣಗಳು ಚೆನ್ನೈ ನಗರವೊಂದರಲ್ಲೇ ಕಂಡುಬಂದಿತ್ತು, ಹೀಗಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಇತರೆ ಮಾಹಿತಿ -ಕ್ವಾರಂಟೀನ್​ನಲ್ಲಿರುವ ಕೊರೊನಾ ಸೋಂಕಿತರನ್ನು ಆರೋಗ್ಯಾಧಿಕಾರಿಗಳು ಮಾನಿಟರ್ ಮಾಡಲಿದ್ದಾರೆ, ಟೆಲಿ ಕೌನ್ಸೆಲಿಂಗ್ ಸೆಂಟರ್​ಗಳನ್ನು ಸ್ಥಳೀಯ ಆಡಳಿತ ತೆರೆದಿದೆ. -ಇನ್ನೂ ಕೆಲವು ತಂಡಗಳು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಧರಿಸಿದ್ದಾರೋ ಇಲ್ಲವೋ ಎಂಬುದರ ಮೇಲೆ ನಿಗಾ ಇಡಲಿದೆ. -ನಗರದಲ್ಲಿ ಬೂಸ್ಟರ್​ ಡೋಸ್​ಗಳನ್ನು ನೀಡುವ ಕಾರ್ಯವೂ ಪ್ರಗತಿಯಲ್ಲಿದೆ

ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 16,159 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 28 ಮಂದಿ ಮೃತಪಟ್ಟಿದ್ದಾರೆ. ಹೊಸದಾಗಿ ಕೊರೊನಾ ಸೋಂಕು ತಗುಲಿದವರಲ್ಲಿ ಬಹುತೇಕರು ಕೊರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದಿದ್ದರೆ ಇನ್ನೂ ಕೆಲವರು ಬೂಸ್ಟರ್ ಡೋಸ್​ಗಳನ್ನು ಪಡೆದಿದ್ದಾರೆ.

ಸಕ್ರಿಯ ಪ್ರಕರಣಗಳು 737ಪ್ರಕರಣಗಳು ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 115212 ಇದೆ. ಪಾಸಿಟಿವಿಟಿ ದರ ಶೇ.3.56ರಷ್ಟಿದೆ. ದೇಶದಲ್ಲಿ ಒಂದೇ ದಿನದಲ್ಲಿ 9.95,810ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಇದುವರೆಗೂ ಒಟ್ಟು 1,98,20,86,763ಮಂದಿಗೆ ಕೊರೊನಾ ಲಸಿಕೆ ಹಾಕಲಾಗಿದೆ.

ಕೋವಿಡ್​ನಿಂದ ಸಾವನ್ನಪ್ಪಿರುವವರ ಸಂಖ್ಯೆ 52,52270ಕ್ಕೆ ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 15,394ಮಂದಿ ಗುಣಮುಖರಾಗಿರುವುದರಿಂದಿಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 42907327ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಜನವರಿ 16 ರಂದು ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್​ ಕೊರೊನಾ ಲಸಿಕೆಯ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada