ಕೊರೊನಾ ವೈರಸ್​ 19 ಬಗೆಯ ರೂಪಾಂತರ ಪತ್ತೆ

| Updated By: ganapathi bhat

Updated on: Apr 06, 2022 | 11:13 PM

ಹೊಸ ಸ್ವರೂಪದ ಕೊರೊನಾ ವೈರಾಣು ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಾಂಡ್, ಹರ್ಯಾಣ, ಗುಜರಾತ್ ಮತ್ತು ದೆಹಲಿಯಲ್ಲೂ ಇದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ವೈರಸ್​ 19 ಬಗೆಯ ರೂಪಾಂತರ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊರೊನಾ ವೈರಾಣುವಿನ 19 ವಿಧದ ರೂಪಾಂತರಗಳನ್ನು ಭಾರತೀಯ ಸಂಶೋಧಕರು ಪತ್ತೆಹಚ್ಚಿದ್ದಾರೆ. ಮನುಷ್ಯ ದೇಹದ ರೋಗನಿರೋಧಕ ಶಕ್ತಿಯಿಂದ ತಪ್ಪಿಸಿಕೊಳ್ಳುವ ಶಕ್ತಿಯನ್ನೂ ಒಂದು ವೈರಾಣು ಪಡೆದುಕೊಂಡಿದೆ. ಅಂತಹ ವೈರಸ್​ನ ಹರಡುವಿಕೆ ಪ್ರಮಾಣ ಆಂಧ್ರಪ್ರದೇಶದಲ್ಲಿ ಹೆಚ್ಚಾಗಿದೆ ಎಂದೂ ತಿಳಿದುಬಂದಿದೆ.

ವಂಶವಾಹಿಯಲ್ಲಿ ಬದಲಾವಣೆ ಆಗಿರುವ ಈ ವೈರಾಣುವನ್ನು N440K ಎನ್ನಲಾಗಿದೆ. ಆಂಧ್ರಪ್ರದೇಶದಲ್ಲಿ, 272 ಕೋವಿಡ್-19 ಪ್ರಕರಣಗಳ ಪೈಕಿ ಶೇ 34ರಷ್ಟಲ್ಲಿ N440K ಕಂಡುಬಂದಿದೆ. ಈ ಸ್ವರೂಪದ ಕೊರೊನಾ ವೈರಾಣು ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣದಲ್ಲೂ ಇದೆ ಎಂದು ಮೂಲಗಳು ತಿಳಿಸಿವೆ. ಕೊವಿಡ್-19 ಮರುಕಳಿಸಿರುವ ನೋಯ್ಡಾದ ಒಬ್ಬ ವ್ಯಕ್ತಿಯಲ್ಲಿ ಈ ಹೊಸ ಸ್ವರೂಪದ ಕೊರೊನಾ ವೈರಾಣು ಕಂಡುಬಂದಿರುವ ಬಗ್ಗೆ ಮಾಹಿತಿ ಇದೆ.

ದೇಶದ ಕೊವಿಡ್-19 ಕಾರ್ಯಪಡೆ, ಕೊರೊನಾ ವೈರಸ್​ನ ರೂಪಾಂತರ ಪತ್ತೆಹಚ್ಚುವ ಬಗ್ಗೆ ಶನಿವಾರ ಯೋಜನೆ ಹಾಕಿಕೊಂಡಿತ್ತು. ರಾಷ್ಟ್ರದ ಶೇ 5ರಷ್ಟು ಕೊರೊನಾ ಕೇಸ್​ಗಳನ್ನು ಈ ಸಂಶೋಧನೆಯಲ್ಲಿ ಬಳಸುವ ಬಗ್ಗೆ ತಿಳಿಸಲಾಗಿದೆ. ಇಂಗ್ಲೆಂಡ್ ಹಾಗೂ ಅಮೆರಿಕಾಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಬಗ್ಗೆ ಕಡಿಮೆ ಅಧ್ಯಯನಗಳು ಆಗಿವೆ. ಇಂಗ್ಲೆಂಡ್​ನಲ್ಲಿ 1.57 ಲಕ್ಷದಷ್ಟು ಪ್ರಕರಣಗಳ ಅಧ್ಯಯನವಾಗಿದ್ದರೆ, ಅಮೆರಿಕಾದಲ್ಲಿ 50 ಸಾವಿರದಷ್ಟು ಪ್ರಕರಣಗಳನ್ನು ಸಂಶೋಧನೆ ಮಾಡಲಾಗಿದೆ.

ಈಗ ಪತ್ತೆಹಚ್ಚಲಾಗಿರುವ ಹೊಸ ಸ್ವರೂಪದ ಕೊರೊನಾ ವೈರಾಣುವಿನ ವೈದ್ಯಕೀಯ ಗುಣಲಕ್ಷಣಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ. ಅದಕ್ಕಾಗಿ ಇನ್ನಷ್ಟು ಮಾಹಿತಿ, ವಿಶ್ಲೇಷಣೆಗಳನ್ನು ಕಲೆಹಾಕಬೇಕಾಗಿದೆ. ಅವುಗಳ ಮೇಲೆ ಲಸಿಕೆಯ ಪರಿಣಾಮ, ಪ್ರಭಾವಗಳನ್ನೂ ತಿಳಿಯಲಾಗುತ್ತಿದೆ.

N440K ಸ್ವರೂಪದ ಕೊರೊನಾ ವೈರಾಣು ಹೊರತುಪಡಿಸಿ, ಇತರ ರೂಪಾಂತರಗಳು ಆಂಧ್ರಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಾಂಡ್, ಹರ್ಯಾಣ, ಗುಜರಾತ್ ಮತ್ತು ದೆಹಲಿಯಲ್ಲಿ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲೂ ಶುರುವಾಯ್ತಾ ರೂಪಾಂತರಿ ಕೊರೊನಾ ಆತಂಕ? ಬ್ರಿಟನ್​ನಿಂದ ಬಂದ ನಾಲ್ವರಿಗೆ ಪಾಸಿಟಿವ್

Published On - 4:02 pm, Mon, 28 December 20