ಕೊರೊನಾ ಹೊಡೆತಕ್ಕೆ ಶೇಕಡಾ 30ರಷ್ಟು ಚಿನ್ನದ ಬೇಡಿಕೆ ಕುಸಿತ
ದೆಹಲಿ: ಮಹಾಮಾರಿ ಕೊರೊನಾ ಹೊಡೆತದಿಂದಾಗಿ ಆರ್ಥಿಕತೆ ಕುಸಿದಿತ್ತು. ಜನ ಜೀವನ ತತ್ತರಿಸಿತ್ತು. ಈ ನಡುವೆ ಗ್ರಾಹಕರ ಬೇಡಿಕೆ, ಬೆಲೆ ಏರಿಕೆಯಿಂದಾಗಿ ಹಳದಿ ಲೋಕ ಚಿನ್ನದ ಬೇಡಿಕೆ ಸಹ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಚಿನ್ನದ ಬೇಡಿಕೆ ಶೇಕಡಾ 30 ರಷ್ಟು ಕುಸಿದಿದೆ ಎಂದು ವಿಶ್ವ ಗೋಲ್ಡ್ ಕೌನ್ಸಿಲ್ (WGC) ವರದಿಯಲ್ಲಿ ತಿಳಿಸಿದೆ. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಶೇ. 30ರಷ್ಟು ಕುಸಿದಿದೆ. ಈ ವರ್ಷದ ಕ್ಯೂ3 ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ […]
ದೆಹಲಿ: ಮಹಾಮಾರಿ ಕೊರೊನಾ ಹೊಡೆತದಿಂದಾಗಿ ಆರ್ಥಿಕತೆ ಕುಸಿದಿತ್ತು. ಜನ ಜೀವನ ತತ್ತರಿಸಿತ್ತು. ಈ ನಡುವೆ ಗ್ರಾಹಕರ ಬೇಡಿಕೆ, ಬೆಲೆ ಏರಿಕೆಯಿಂದಾಗಿ ಹಳದಿ ಲೋಕ ಚಿನ್ನದ ಬೇಡಿಕೆ ಸಹ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಭಾರತದಲ್ಲಿ ಚಿನ್ನದ ಬೇಡಿಕೆ ಶೇಕಡಾ 30 ರಷ್ಟು ಕುಸಿದಿದೆ ಎಂದು ವಿಶ್ವ ಗೋಲ್ಡ್ ಕೌನ್ಸಿಲ್ (WGC) ವರದಿಯಲ್ಲಿ ತಿಳಿಸಿದೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ ಶೇ. 30ರಷ್ಟು ಕುಸಿದಿದೆ. ಈ ವರ್ಷದ ಕ್ಯೂ3 ತ್ರೈಮಾಸಿಕದಲ್ಲಿ ಭಾರತದಲ್ಲಿ ಚಿನ್ನದ ಬೇಡಿಕೆ 86.6 ಟನ್ ಆಗಿದ್ದರೆ, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 123.9 ಟನ್ ಆಗಿತ್ತು. ಮೌಲ್ಯದ ದೃಷ್ಟಿಯಿಂದ ಈ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇ. 4ರಷ್ಟು ಇಳಿಕೆಯಾಗಿದ್ದು, 2019ರ ಇದೇ ತ್ರೈಮಾಸಿಕದಲ್ಲಿ 41,300 ಕೋಟಿ ರೂ, ಈ ತ್ರೈಮಾಸಿಕದಲ್ಲಿ 39,510 ಕೋಟಿ ರೂ.ಗಳಾಗಿದೆ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದ ಬೇಡಿಕೆ ಹಿಂದಿನ ತ್ರೈಮಾಸಿಕಕ್ಕಿಂತ ಹೆಚ್ಚಾಗಿತ್ತು. 64 ಟನ್‌ಗಳೊಂದಿಗೆ ಹಿಂದಿನ ತ್ರೈಮಾಸಿಕದಲ್ಲಿ ಬೇಡಿಕೆ ಶೇ. 70ರಷ್ಟು ಕುಸಿದಿತ್ತು. ಈ ತ್ರೈಮಾಸಿಕದಲ್ಲಿ ಹೆಚ್ಚಿನ ಬೇಡಿಕೆ ಇತ್ತು, ಕೊರೊನಾ ಲಾಕ್ ಡೌನ್, ಆಗಸ್ಟ್‌ನಲ್ಲಿ ಬೆಲೆ ಏರಿಕೆ ಖರೀದಿಗೆ ಹಿನ್ನೆಡೆಯಾಯಿತು ಎಂದು ಭಾರತದ ಡಬ್ಲ್ಯುಜಿಸಿ ವ್ಯವಸ್ಥಾಪಕ ನಿರ್ದೇಶಕ ಸೋಮಸುಂದರಂ ತಿಳಿಸಿದ್ದಾರೆ.
ಕರ್ನಾಟಕ ಜುಯೆಲರ್ಸ ಅಸೋಸಿಯೇಶನ್ ಅಧ್ಯಕ್ಷ ಮತ್ತು ಜೆ ಡಿ ಎಸ್ ನಾಯಕ, ಟಿ.ಎ. ಶರವಣ ಅವರ ಪ್ರಕಾರ, ಚಿನ್ನ ಖರೀದಿ ಮೇಲೆ ಕೊರೋನಾ ಭಾರಿ ಪರಿಣಾಮ ಬೀರಿದೆ. ಮಾರ್ಚ್ ತಿಂಗಳಿನಲ್ಲಿ ಒಂದು ಗ್ರಾಂ ಚಿನ್ನದ ಬೆಲೆ ರೂ. 3,500 ಇತ್ತು. ಈಗ ಅದು ರೂ. 4,500 ಇದೆ. ಈ ಮಧ್ಯೆ ಚಿನ್ನದ ಬೆಲೆ ರೂ 5,000 ದಾಟಿ ಮೇಲೆ ಹೋಗಿತ್ತು. ಚಿನ್ನದ ಬೆಲೆಯಲ್ಲಿ ಸುಮಾರು 40 ಪ್ರತಿಶತ ಏರಿಕೆ ಕಂಡಿದ್ದೇವೆ. ಏಪ್ರಿಲ್ ತಿಂಗಳಿನಲ್ಲಿ ಅಕ್ಷಯ ತೃತೀಯಾ ಇತ್ತು. ಆ ಸಂದರ್ಭದಲ್ಲಿ ಪ್ರತಿ ವರ್ಷ ಚಿನ್ನದ ವ್ಯವಹಾರ ಚೆನ್ನಾಗಿ ಆಗುತ್ತಿತ್ತು. ಈ ಬಾರಿ ಲಾಕ್ ಡೌನ್ ನಿಂದಾಗಿ ನಮಗೆ ವ್ಯಾಪಾರ ಆಗಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಖಂಡಿತವಾಗಿ 20-30 ಪ್ರತಿಶತ ವ್ಯಾಪಾರ ಕಡಿಮೆ ಆಗಿರೋದು ನಿಜ. ಅವರ ಪ್ರಕಾರ, ಅಕ್ಟೋಬರ್ ತಿಂಗಳಿನಲ್ಲಿ ವ್ಯಾಪಾರದಲ್ಲಿ ಚೇತರಿಕೆ ಕಂಡಿದೆ. ನವೆಂಬರ್ ನಲ್ಲಿ ಧನ್ತೇರಸ್ ಇದೆ, ಆಗ ವ್ಯಾಪಾರ ಜಾಸ್ತಿ ಆಗುವ ಸಾಧ್ಯತೆ ಇದೆ, ಎಂದು ಅವರು ಹೇಳಿದರು.
Published On - 5:27 pm, Fri, 30 October 20