ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3.62 ಲಕ್ಷ ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು, 4,120 ಮಂದಿ ಮೃತಪಟ್ಟಿದ್ದಾರೆ.ಮಹಾರಾಷ್ಟ್ರದಲ್ಲಿ ಸತತ ನಾಲ್ಕನೇ ದಿನ ಕೊವಿಡ್ ಪ್ರಕರಣಗಳ ಸಂಖ್ಯೆ50,000 ದಾಟಿದ್ದು ಕೇರಳದಲ್ಲಿ 43,000 ಮತ್ತು ತಮಿಳುನಾಡಿನಲ್ಲಿ 30,000 ದಾಟಿದೆ. ಮಹಾರಾಷ್ಟ್ರ ದಲ್ಲಿ 843 ಕೊವಿಡ್ ರೋಗಿಗಳು ಸಾವಿಗೀಡಾಗಿದ್ದು ಕರ್ನಾಟಕದಲ್ಲಿ ಮೃತಪಟ್ಟವರ ಸಂಖ್ಯೆ 517 ಆಗಿದೆ.ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37.10 ಲಕ್ಷಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಒಟ್ಟು ಕೊರೊನಾವೈರಸ್ ರೋಗಿಗಳ ಸಂಖ್ಯೆ 2,37,03,665 ಕ್ಕೇರಿದೆ . ಈವರೆಗೆ 1,97,34,823 ಮಂದಿ ಚೇತರಿಸಿಕೊಂಡಿದ್ದಾರೆ.ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525 ಆಗಿದ್ದು 2,58,317 ಮಂದಿ ಸಾವಿಗೀಡಾಗಿದ್ದಾರೆ. ಈವರೆೆಗೆ 17,72,14,256 ಮಂದಿಗೆ ಲಸಿಕೆ ನೀಡಲಾಗಿದೆ.
India reports 3,62,727 new #COVID19 cases, 3,52,181 discharges and 4,120 deaths in the last 24 hours, as per Union Health Ministry
Total cases: 2,37,03,665
Total discharges: 1,97,34,823
Death toll: 2,58,317
Active cases: 37,10,525Total vaccination: 17,72,14,256 pic.twitter.com/2hCw318J4T
— ANI (@ANI) May 13, 2021
ದೇಶದಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದಂತೆ ಹಲವಾರು ರಾಜ್ಯಗಳು ಲಸಿಕೆ ಅಭಾವ ಎದುರಿಸುತ್ತಿವೆ. ಏಳು ರಾಜ್ಯಗಳು 18- 44ರ ವಯಸ್ಸಿನ ಜನರಿಗೆ ಶೇ85ರಷ್ಟು ಲಸಿಕೆಗಳನ್ನು ನೀಡಿದೆ.ಈ ಪೈಕಿ ಮೇ 1- ಮೇ12ರ ವರೆಗೆ 34.66 ಲಕ್ಷ ಡೋಸ್ ಲಸಿಕೆಗಳನ್ನು ನೀಡಿದೆ. ಶೇ 85ಕ್ಕಿಂತ ಹೆಚ್ಚು ಡೋಸ್ ಲಸಿಕೆ ವಿತರಣೆ ಮಾಡಿರುವ ಏಳು ರಾಜ್ಯಗಳು: ಮಹಾರಾಷ್ಟ್ರ (6.25 ಲಕ್ಷ), ರಾಜಸ್ಥಾನ (5.49 ಲಕ್ಷ), ದೆಹಲಿ (4.71 ಲಕ್ಷ), ಗುಜರಾತ್ (3.86 ಲಕ್ಷ), ಹರ್ಯಾಣ (3.55 ಲಕ್ಷ), ಬಿಹಾರ (3.02 ಲಕ್ಷ), ಮತ್ತು ಉತ್ತರ ಪ್ರದೇಶ (2.65 ಲಕ್ಷ).
ಎರಡು ದಿನಗಳ ಕುಸಿತದ ನಂತರ ಗುರುವಾರ ಭಾರತದಲ್ಲಿ ಸಕ್ರಿಯ ಪ್ರಕರಣವು ಮತ್ತೆ ಏರಿಕೆಕಂಡಿದೆ. ಬುಧವಾರ, ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 37,04,099 ಆಗಿದ್ದು ಗುರುವಾರ 6,426 ಪ್ರಕರಣಗಳು ಹೆಚ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೇಶದಲ್ಲಿ ಆಮ್ಲಜನಕ ಮತ್ತು ಔಷಧಿಗಳ ಲಭ್ಯತೆಯನ್ನು ಪರಿಶೀಲಿಸುವ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ಎರಡನೇ ಅಲೆಯ ಹೊತ್ತಲ್ಲಿ ಆಮ್ಲಜನಕದ ಪೂರೈಕೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನ ಮಂತ್ರಿಗೆ ತಿಳಿಸಲಾಯಿತಿ 1,50,000 ಯುನಿಟ್ ಆಕ್ಸಿಕೇರ್ ಸಿಸ್ಟಮ್ ಅನ್ನು ಖರೀದಿಸಲು ಪಿಎಂ-ಕೇರ್ಸ್ ನಿಧಿಯಿಂದ ರೂ322.5 ಕೋಟಿಗಳನ್ನು ಕೇಂದ್ರ ಸರ್ಕಾರ ಅನುಮತಿಸಿದೆ.
ಭಾರತವು ಇಲ್ಲಿಯವರೆಗೆ ಕೇವಲ 2.5 ಪ್ರತಿಶತದಷ್ಟು ಜನರಿಗೆ ಲಸಿಕೆ ನೀಡಿದೆ. ದೇಶದಲ್ಲಿ ನೀಡಲಾಗುವ ಕೊವಿಡ್ ಲಸಿಕೆ ಡೋಸ್ ಒಟ್ಟು ಸಂಖ್ಯೆ ಪ್ರಸ್ತುತ 17.70 ಕೋಟಿಗಳಷ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಲಸಿಕೆಗಳ ಕೊರತೆಯನ್ನು ಹಲವಾರು ರಾಜ್ಯಗಳು ವರದಿ ಮಾಡಿವೆ. ದಕ್ಷಿಣದಲ್ಲಿ, 18 ರಿಂದ 44 ವರ್ಷದೊಳಗಿನವರಿಗೆ ಕೊವಿಡ್ ಲಸಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಕರ್ನಾಟಕ ಹೇಳಿದೆ. ನೆರೆ ರಾಜ್ಯಗಳಾದ ತೆಲಂಗಾಣ ಈ ಮಧ್ಯೆ, 13 ಲಕ್ಷ ಡೋಸ್ ಲಸಿಕೆಗಳನ್ನು (10 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 3 ಲಕ್ಷ ಕೋವಾಕ್ಸಿನ್) ಡೋಸ್ಗಳನ್ನು ಕೇಂದ್ರದಿಂದ ತಕ್ಷಣ ಬಿಡುಗಡೆ ಮಾಡಲು ಕೋರಿದೆ.
ಇದನ್ನೂ ಓದಿ: 1 ಕೋಟಿ ರೂ. ದೇಣಿಗೆ ನೀಡಿದ ಸೂರ್ಯ-ಕಾರ್ತಿ; ಕೊವಿಡ್ ಸಂಕಷ್ಟದಲ್ಲಿ ನೆರವಾದ ಸ್ಟಾರ್ ಕಲಾವಿದರು
Published On - 10:45 am, Thu, 13 May 21