ಮಾಧ್ಯಮದವರನ್ನು ಕೊವಿಡ್ ವಾರಿಯರ್ಸ್ ಎಂದು ಗುರುತಿಸಿದರೆ ಸಾಲದು, ಅವರಿಗೂ ಪರಿಹಾರ ನೀಡಬೇಕು: ಸಿಎಂಗೆ ಮಾಜಿ ಸಿಎಂ ಪತ್ರ
ಕರ್ನಾಟಕದಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಹಲವು ಪತ್ರಕರ್ತರು ಕೊವಿಡ್ 19 ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಪತ್ರಕರ್ತರನ್ನು ಮುಂಚೂಣಿ ವಾರಿಯರ್ಸ್ ಎಂದು ಘೋಷಿಸಲಾಗಿದೆ.
ಬೆಂಗಳೂರು: ಮಾಧ್ಯಮದವರನ್ನೂ ಮುಂಚೂಣಿಯಲ್ಲಿರುವ ಕೊವಿಡ್ 19 ವಾರಿಯರ್ಸ್ ಎಂದು ಗುರುತಿಸಿ, ಅವರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಘೋಷಣೆ ಮಾಡಿದ್ದಾರೆ. ಇದೀಗ ಈ ವಿಚಾರವಾಗಿ ಯಡಿಯೂರಪ್ಪನವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಪತ್ರ ಬರೆದು, ಮಾಧ್ಯಮದವರನ್ನು ಕೇವಲ ಫ್ರಂಟ್ಲೈನ್ ವರ್ಕರ್ಸ್ ಎಂದು ಗುರುತಿಸಿದರೆ ಸಾಲದು, ಅವರಿಗೆ ಪರಿಹಾರವನ್ನೂ ನೀಡಬೇಕು ಎಂದು ಒತ್ತಾಯಿಸಿದ್ದರು.
ಉಳಿದ ಮುಂಚೂಣಿ ಕೊವಿಡ್ ವಾರಿಯರ್ಸ್ಗೆ ಸಿಗುವ ಎಲ್ಲ ಸೌಲಭ್ಯಗಳೂ ಮಾಧ್ಯಮದವರಿಗೂ ಸಿಗುವಂತಾಗಬೇಕು ಎಂದು ಸಿದ್ದರಾಮಯ್ಯನವರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಮಾಧ್ಯಮದವರು ಮೃತಪಟ್ಟರೆ ಪರಿಹಾರ ಕಲ್ಪಿಸಿ. ಅವರ ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವಂತಾಗಲಿ ಎಂಬ ವಿಚಾರವನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರ್ನಾಟಕದಲ್ಲಿ ಸೇರಿ ಬಹುತೇಕ ರಾಜ್ಯಗಳಲ್ಲಿ ಹಲವು ಪತ್ರಕರ್ತರು ಕೊವಿಡ್ 19 ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಒಡಿಶಾದಲ್ಲಿ ಪತ್ರಕರ್ತರನ್ನು ಮುಂಚೂಣಿ ವಾರಿಯರ್ಸ್ ಎಂದು ಘೋಷಿಸಿ, ಆರ್ಥಿಕ ನೆರವು ನೀಡುವುದಾಗಿಯೂ ಅಲ್ಲಿನ ಸರ್ಕಾರ ಪ್ರಕಟಿಸಿದೆ.
ಇದನ್ನೂ ಓದಿ: ದೇಶದಲ್ಲಿ ತೀವ್ರವಾಗುತ್ತಿದೆ ಕೊವಿಡ್ 19; ಇಂದು ಮತ್ತೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ