ನವದೆಹಲಿ: ಭಾರತದಲ್ಲಿ ಕೊವಿಡ್-19 ವೈರಸ್ ಒಮಿಕ್ರಾನ್ ರೂಪಾಂತರದ (Omicron variant) ಹೊಸ ಉಪ ವಂಶಾವಳಿಯಾಗಿರುವ ಬಿಎ 2.75 ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದೆ. ಕಳೆದ ಎರಡು ವಾರಗಳಲ್ಲಿ ಜಾಗತಿಕವಾಗಿ ವರದಿಯಾದ ಕೊವಿಡ್-19 ಪ್ರಕರಣಗಳು ಸುಮಾರು ಶೇ. 30ರಷ್ಟು ಹೆಚ್ಚಾಗಿದೆ ಎಂದು ಡಬ್ಲುಹೆಚ್ಓ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಯುರೋಪ್ ಮತ್ತು ಅಮೆರಿಕಾದಲ್ಲಿ BA.4 ಮತ್ತು BA.5 ಪ್ರಕರಣಗಳು ಕಾಣಿಸಿಕೊಂಡಿವೆ. ಭಾರತದಂತಹ ದೇಶಗಳಲ್ಲಿ BA 2.75ನ ಹೊಸ ಉಪ ವಂಶಾವಳಿಯನ್ನು ಸಹ ಪತ್ತೆಹಚ್ಚಲಾಗಿದೆ. ನಾವು ಆ ಬಗ್ಗೆ ಗಮನವಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ BA 2.75 ಮೊದಲ ಕೇಸ್ ಪತ್ತೆಯಾದ ನಂತರ ಇನ್ನೂ 10 ದೇಶಗಳಲ್ಲಿ ಈ ಉಪ-ರೂಪಾಂತರಿ ವೈರಸ್ ತಳಿ ಪತ್ತೆಯಾಗಿದೆ.
ಇದನ್ನೂ ಓದಿ: COVID-19: ಭಾರತದೊಳಗೆ ಬರುವ ಪ್ರತಿ ವಿಮಾನದ ಶೇ. 2ರಷ್ಟು ಜನರಿಗೆ ರ್ಯಾಂಡಮ್ ಕೊವಿಡ್ ಟೆಸ್ಟ್ ಕಡ್ಡಾಯ
ಜೂನ್ 27ರಿಂದ ಜುಲೈ 3ರವರೆಗೆ ಜಗತ್ತಿನಾದ್ಯಂತ 4.6 ಮಿಲಿಯನ್ ಕೊವಿಡ್ ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ವಾರದಂತೆಯೇ ಇದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಈ ವಾರದ ಕೊವಿಡ್ ಸೋಂಕಿನಿಂದ ಸಾವಿನ ಸಂಖ್ಯೆ ಶೇ. 12ರಷ್ಟು ಕಡಿಮೆಯಾಗಿದೆ. ಈ ವಾರ 8100ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.
.@doctorsoumya explains what we know about the emergence of a potential Omicron sub-variant [referred as BA.2.75] ⬇️#COVID19 pic.twitter.com/Eoinq7hEux
— World Health Organization (WHO) (@WHO) July 5, 2022
ಒಟ್ಟು 83 ದೇಶಗಳಲ್ಲಿ ಬಿಎ.5 ತಳಿ ಪತ್ತೆಯಾಗಿದೆ. 73 ದೇಶಗಳಲ್ಲಿ ಪತ್ತೆಯಾಗಿರುವ ಬಿಎ.4 ಜಾಗತಿಕ ಮಟ್ಟದಲ್ಲಿಯೂ ಏರಿಕೆಯಾಗುತ್ತಿದ್ದರೂ ಬಿಎ.5ರಷ್ಟು ಏರಿಕೆ ಪ್ರಮಾಣ ಹೆಚ್ಚಾಗಿಲ್ಲ. ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಕೇಸುಗಳ ಹೆಚ್ಚಳ ಕಂಡುಬಂದಿದೆ.