COVID-19: ಭಾರತದೊಳಗೆ ಬರುವ ಪ್ರತಿ ವಿಮಾನದ ಶೇ. 2ರಷ್ಟು ಜನರಿಗೆ ರ್ಯಾಂಡಮ್ ಕೊವಿಡ್ ಟೆಸ್ಟ್ ಕಡ್ಡಾಯ
ಆರ್ಟಿ-ಪಿಸಿಆರ್ ಮೂಲಕ ಭಾರತಕ್ಕೆ ಒಳಬರುವ ಪ್ರತಿ ವಿಮಾನದಲ್ಲಿ ಶೇ. 2ರಷ್ಟು ಪ್ರಯಾಣಿಕರ ರ್ಯಾಂಡಮ್ ತಪಾಸಣೆಯನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಕಣ್ಗಾವಲು ವಹಿಸಲು ಸೂಚಿಸಲಾಗಿದೆ.
ನವದೆಹಲಿ: ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಸತತವಾಗಿ 10,000ಕ್ಕೂ ಹೆಚ್ಚು ಕೊವಿಡ್-19 ಪ್ರಕರಣಗಳು (COVID-19 Cases) ವರದಿಯಾಗಿವೆ. ಬೇರೆ ದೇಶಗಳಿಂದ ಬರುವ ಪ್ರತಿ ವಿಮಾನದಲ್ಲಿ ಇರುವ ಶೇ. 2ರಷ್ಟು ಪ್ರಯಾಣಿಕರಿಗೆ ರ್ಯಾಂಡಮ್ RT-PCR ಟೆಸ್ಟ್ ಮಾಡಲು ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ. ಈ ಮೂಲಕ ಕೊರೊನಾವೈರಸ್ (Coronavirus) ಪರೀಕ್ಷೆಗಳನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಜೂನ್ 9ರಂದು ಕೇಂದ್ರ ಸರ್ಕಾರ ಹೊರಡಿಸಿದ ಕೊವಿಡ್-19 ಸಂದರ್ಭದಲ್ಲಿ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರದ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಉಲ್ಲೇಖಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪತ್ರದ ಮೂಲಕ ಸಲಹೆಯನ್ನು ನೀಡಿದ್ದಾರೆ. ರಾಜ್ಯಗಳು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಂಕ್ಷಿಪ್ತವಾಗಿ ತಿಳಿಸಿರುವ ರಾಜೇಶ್ ಭೂಷಣ್, ಆರ್ಟಿ-ಪಿಸಿಆರ್ ಮೂಲಕ ಭಾರತಕ್ಕೆ ಒಳಬರುವ ಪ್ರತಿ ವಿಮಾನದಲ್ಲಿ ಶೇ. 2ರಷ್ಟು ಪ್ರಯಾಣಿಕರ ರ್ಯಾಂಡಮ್ ತಪಾಸಣೆಯನ್ನು ಒಳಗೊಂಡಿರುವ ಅಂತಾರಾಷ್ಟ್ರೀಯ ಪ್ರಯಾಣಿಕರ ಕಣ್ಗಾವಲು ವಹಿಸಲು ಸೂಚಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: India Covid Update: ಭಾರತದಲ್ಲಿ ಇಂದು ಒಂದೇ ದಿನ 17,336 ಹೊಸ ಕೊವಿಡ್ ಕೇಸ್ ಪತ್ತೆ; ಕರ್ನಾಟಕದಲ್ಲಿ ಹೆಚ್ಚಿದ ಕೊರೊನಾ ಭೀತಿ
ಎಲ್ಲಾ ಆರೋಗ್ಯ ಸೌಲಭ್ಯಗಳು ಇನ್ಫ್ಲುಯೆನ್ಸ್ ಲೈಕ್ ಇಲ್ನೆಸ್ (ಐಎಲ್ಐ) ಪ್ರಕರಣಗಳನ್ನು ವರದಿ ಮಾಡಬೇಕು. ಈ ಡೇಟಾವನ್ನು ವಿಶ್ಲೇಷಿಸಲು ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್ಒ) ಜವಾಬ್ದಾರರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ. ಶೇ. 5ರಷ್ಟು ಐಎಲ್ಐ ಪ್ರಕರಣಗಳನ್ನು ಆರ್ಟಿ-ಪಿಸಿಆರ್ ಮೂಲಕ ಪರೀಕ್ಷಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.