Maharashtra: ಕೊವಿಡ್ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಕಠಿಣ ನಿಯಮ ಜಾರಿ: ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 02, 2022 | 8:09 PM

ಬೀಚ್‌ಗಳು, ಉದ್ಯಾನಗಳು ಮತ್ತು ಬೀದಿಗಳಲ್ಲಿ ಸಾಮಾಜಿಕ ಅಂತರ ಮತ್ತು ನಿಯಮಿತ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯು ಹೇಳಿದೆ

Maharashtra: ಕೊವಿಡ್ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಕಠಿಣ ನಿಯಮ ಜಾರಿ: ಸಾರ್ವಜನಿಕ ಸಮಾರಂಭಗಳಿಗೆ ನಿರ್ಬಂಧ
ಪ್ರಾತಿನಿಧಿಕ ಚಿತ್ರ
Follow us on

ಮುಂಬೈ: ಕೊವಿಡ್ ಸೋಂಕು ಮತ್ತೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಹಲವು ನಿರ್ಬಂಧಗಳನ್ನು ವಿಧಿಸಿದೆ. ಒಳಾಂಗಣ ಸಭಾಂಗಣಗಳಲ್ಲಿ ಅರ್ಧದಷ್ಟು ಜನರಿಗೆ ಮಾತ್ರ ಅವಕಾಶವಿದೆ. ನಾಗರಿಕರು ಸಾರ್ವಜನಿಕ ಸ್ಥಳಗಳಾದ ಬೀಚ್‌ಗಳು, ಉದ್ಯಾನಗಳು ಮತ್ತು ಬೀದಿಗಳಲ್ಲಿ ಸಾಮಾಜಿಕ ಅಂತರ ಮತ್ತು ನಿಯಮಿತ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯು ಹೇಳಿದೆ. ರೆಸ್ಟೊರೆಂಟ್‌ಗಳು, ಜಿಮ್‌ಗಳು ಮತ್ತು ಸಿನಿಮಾ ಥಿಯೇಟರ್‌ಗಳಲ್ಲಿ ಒಟ್ಟು ಸಾಮರ್ಥ್ಯದ ಅರ್ಧದಷ್ಟು ಜನರಿಗೆ ಮಾತ್ರವೇ ಪ್ರವೇಶಾವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ.

ಮದುವೆಗಳು, ಸಾಮಾಜಿಕ, ರಾಜಕೀಯ ಅಥವಾ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ, ಪಾಲ್ಗೊಳ್ಳುವವರ ಗರಿಷ್ಠ ಸಂಖ್ಯೆಯನ್ನು 50 ವ್ಯಕ್ತಿಗಳಿಗೆ ಸೀಮಿತಗೊಳಿಸಲಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ 20 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಗೇಟ್‌ ವೇ ಆಫ್ ಇಂಡಿಯಾ, ಮರೈನ್ ಡ್ರೈವ್, ಗಿರ್‌ಗಾಂವ್ ಚೌಪಾಟಿ ಮತ್ತು ಜುಹು ಚೌಪಾಟಿಯಂತಹ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ಹೆಚ್ಚು ಜನರು ಸೇರುವುದನ್ನು ಮುಂಬೈ ಮಹಾನಗರಪಾಲಿಕೆಯು ನಿರ್ಬಂಧಿಸಿದೆ.

ಈ ಹಿಂದೆ ಹೊರಾಂಗಣದಲ್ಲಿ ನಡೆಯುವ ಸಮಾರಂಭಗಳಲ್ಲಿ ಗರಿಷ್ಠ 250 ಜನರು ಪಾಲ್ಗೊಳ್ಳಲು ಅವಕಾಶವಿತ್ತು. ಒಳಾಂಗಣದಲ್ಲಿ 100 ಮಂದಿ ಪಾಲ್ಗೊಳ್ಳಬಹುದಿತ್ತು. ಮುಂಬೈಗೆ ಹೊಂದಿಕೊಂಡಂತೆ ಇರುವ ಖಂಡಾಲ, ಲೋನಾವಳ ಮತ್ತು ಇತರ ಗಿರಿಧಾಮಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿಯೂ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಕೊರೊನಾ ಅತಂಕವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರು, ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಮಕ್ಕಳು ಹೆಚ್ಚಾಗಿ ಮನೆಯಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೆ ಕೊವಿಡ್ 19 ನಿಯಂತ್ರಿತ ಕಠಿಣ ನಿಯಮಗಳು ಜಾರಿ
ಇದನ್ನೂ ಓದಿ: ಕೊರೊನಾ ವೈರಸ್ 13ನೇ ರೂಪಾಂತರಿಗೆ ಒಮಿಕ್ರಾನ್ ಹೆಸರು ಯಾಕೆ ಬಂತು, ಅದರ ಹಿನ್ನೆಲೆ ಏನು ಅಂತ ಗೊತ್ತಾ?