ಗೋವಾದ ಯುವಕರಿಗೆ ಟಿಎಂಸಿ ಚುನಾವಣಾ ಭರವಸೆ: ಮೇಲಾಧಾರವಿಲ್ಲದೆ ₹20 ಲಕ್ಷದವರೆಗೆ ಸಾಲ, ಸರ್ಕಾರ ಗ್ಯಾರಂಟಿ

ಈ ಯೋಜನೆಯು ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಯುವಕರಿಗೆ ಅಥವಾ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಅಥವಾ ಬಲಪಡಿಸಲು ಹಣಕಾಸಿನ ನೆರವು ಪಡೆಯುವ ಗುರಿಯನ್ನು ಹೊಂದಿದೆ ಎಂದು ಟಿಎಂಸಿ ಹೇಳಿದೆ.

ಗೋವಾದ ಯುವಕರಿಗೆ ಟಿಎಂಸಿ ಚುನಾವಣಾ ಭರವಸೆ: ಮೇಲಾಧಾರವಿಲ್ಲದೆ ₹20 ಲಕ್ಷದವರೆಗೆ ಸಾಲ, ಸರ್ಕಾರ ಗ್ಯಾರಂಟಿ
Yuva Shakti Card
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 02, 2022 | 8:02 PM

ಪಣಜಿ: ತೃಣಮೂಲ ಕಾಂಗ್ರೆಸ್ (TMC) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (MGP) ಮೈತ್ರಿಕೂಟವು ವಿಧಾನಸಭೆ ಚುನಾವಣೆಗೆ ಮುನ್ನ ತನ್ನ ಎರಡನೇ ಪ್ರಮುಖ ಭರವಸೆಯಾದ ‘ಯುವ ಶಕ್ತಿ ಕಾರ್ಡ್’ (Yuva Shakti Card) ಅನ್ನು ಭಾನುವಾರ ಪ್ರಕಟಿಸಿದೆ. 18 ಮತ್ತು 45 ರ ನಡುವಿನ ವಯಸ್ಸಿನ ಗೋವಾದ ಯುವಜನತೆಯನ್ನು ಗುರಿಯಾಗಿಸಿರುವ ಈ ಯೋಜನೆಯಲ್ಲಿ ಸರ್ಕಾರ ಗ್ಯಾರಂಟಿಯಾಗಿದ್ದು, 4 ಶೇಕಡಾ ಬಡ್ಡಿಯಲ್ಲಿ 20 ಲಕ್ಷ ರೂ ಸಾಲ ನೀಡಲಿದೆ. ಭಾನುವಾರ ಯೋಜನೆಯನ್ನು ಘೋಷಿಸಿದ ಗೋವಾ ಟಿಎಂಸಿ ನಾಯಕ ಕಿರಣ್ ಕಂಡೋಲ್ಕರ್ (Kiran Kandolkar), ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಯುವಕರನ್ನು ಹೊಂದಿದ್ದಾರೆ ಎಂದು ಹೇಳಿದರು. “ಗೋವಾದಲ್ಲಿ 18 ರಿಂದ 45 ವರ್ಷದೊಳಗಿನ ಜನಸಂಖ್ಯೆ 7.5 ಲಕ್ಷ. ಅವರ ತಂದೆ-ತಾಯಿಯರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದ ಕಾರಣ ಹೆಚ್ಚಿನ ಬಾರಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಪೋಷಕರು ಸಾಲವನ್ನು ತೆಗೆದುಕೊಳ್ಳಲು ತಮ್ಮ ಮನೆಯನ್ನು ಅಡಮಾನವಿಡುತ್ತಾರೆ ಮತ್ತು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಮೂಲಕ ಆ ಭಾರವನ್ನು ಹೊರುತ್ತಾರೆ. ಕೆಲವೊಮ್ಮೆ ಪೂರ್ವಿಕರ ಮನೆಗಳು ಕುಟುಂಬದ ವಿವಿಧ ಸದಸ್ಯರ ಹೆಸರಿನಲ್ಲಿದ್ದು ಒಂದು ಮಗುವಿನ ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಅಡಮಾನ ಇಡುವುದು ಕಷ್ಟವಾಗುತ್ತದೆ. ಸಾಲ ಪಡೆಯಲು ಜನರು ಜಾಮೀನುದಾರರನ್ನು ಹುಡುಕಬೇಕು. ಆದರೆ ಈ ಯೋಜನೆಯಲ್ಲಿ ಯಾವುದೇ ಮೇಲಾಧಾರ ಇರುವುದಿಲ್ಲ. ಸರಕಾರವೇ ಜಾಮೀನು ನೀಡಲಿದೆ,” ಎಂದರು.

ಈ ಯೋಜನೆಯು ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಯುವಕರಿಗೆ ಅಥವಾ ತಮ್ಮ ವ್ಯವಹಾರಗಳನ್ನು ಸ್ಥಾಪಿಸಲು ಅಥವಾ ಬಲಪಡಿಸಲು ಹಣಕಾಸಿನ ನೆರವು ಪಡೆಯುವ ಗುರಿಯನ್ನು ಹೊಂದಿದೆ ಎಂದು ಟಿಎಂಸಿ ಹೇಳಿದೆ.  ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಮಾತನಾಡಿ, ಈ ಯೋಜನೆಯನ್ನು ಪಡೆಯುವ ವ್ಯಕ್ತಿ ಗೋವಾದವರಾಗಿರಬೇಕು ಎಂಬುದನ್ನು ಬಿಟ್ಟರೆ ವಿದ್ಯಾರ್ಥಿಯು ಉನ್ನತ ಶಿಕ್ಷಣವನ್ನು ಎಲ್ಲಿ ಪಡೆಯಬಹುದು ಅಥವಾ ಅವರ ವ್ಯವಹಾರವನ್ನು ಎಲ್ಲಿ ಸ್ಥಾಪಿಸಬಹುದು ಎಂಬುದಕ್ಕೆ ಯೋಜನೆಯು ಯಾವುದೇ ನಿರ್ಬಂಧವನ್ನು ಹೊಂದಿಲ್ಲ.  ಇದರರ್ಥ ವಿದೇಶದಲ್ಲಿ ಅಥವಾ ಇತರ ರಾಜ್ಯಗಳಲ್ಲಿ ಶಿಕ್ಷಣವನ್ನು ಪಡೆಯಲು ಬಯಸುವ ಗೋವಾದ ವಿದ್ಯಾರ್ಥಿಗಳು ಯಾವುದೇ ಆದಾಯ ಕಡಿತವನ್ನು ಹೊಂದಿರದ ಸಾರ್ವತ್ರಿಕ ಕವರೇಜ್ ಯೋಜನೆಯನ್ನು ಸಹ ಪಡೆಯಬಹುದು ಎಂದು ಅವರು ಹೇಳಿದರು.

ಎಂಜಿಪಿಯ ಹಿರಿಯ ಮುಖಂಡ ಹಾಗೂ ಶಾಸಕ ಧವಲೀಕರ್ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ರಾಜ್ಯದಲ್ಲಿ ಆರ್ಥಿಕ ನಿರ್ವಹಣೆ ಮೂರನೇ ದರ್ಜೆಯದ್ದಾಗಿದ್ದು, ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಯುವ ಶಕ್ತಿ ಮತ್ತು ಗೃಹ ಲಕ್ಷ್ಮಿಯಂತಹ ಯೋಜನೆಗಳು ಮಾತ್ರವಲ್ಲದೆ, ಸರ್ಕಾರವು ಪ್ರತಿ ಗೋವಾ ಜನರ ಪ್ರತಿಯೊಂದು ಅಗತ್ಯವನ್ನು ಪರಿಹರಿಸಲು ಸಾಧ್ಯವಾಗುತ್ತದೆ.

ಟಿಎಂಸಿ-ಎಂಜಿಪಿ ಸರ್ಕಾರಕ್ಕೆ ಅದನ್ನು ಮಾಡುವ ಸಾಮರ್ಥ್ಯವಿದೆ ಎಂದು ಅವರು ಹೇಳಿದರು. ಟೌಕ್ಟೇ ಚಂಡಮಾರುತ ಅಪ್ಪಳಿಸಿದಾಗ ನಷ್ಟ ಅನುಭವಿಸಿದ ರಾಜ್ಯದ ಕೃಷಿಕರು ಹಾಗೂ ಸಣ್ಣ ವ್ಯಾಪಾರಸ್ಥರು ಮತ್ತೆ ಮೇಲೆದ್ದು ಬರಲು ಯುವಶಕ್ತಿ ಕಾರ್ಡ್ ಸಹಕಾರಿಯಾಗಲಿದೆ ಎಂದರು.

“ಇದು ಕ್ರೆಡಿಟ್ ಯೋಜನೆ. ಗೋವಾದ ಯುವಕರು ನೀರವ್ ಮೋದಿ ಅಥವಾ ಮೆಹುಲ್ ಚೋಕ್ಸಿ ಅಲ್ಲ. ನಾವು ನಿರೀಕ್ಷಿಸುತ್ತಿದ್ದೇವೆ ಮತ್ತು ಗೋವಾದ ಯುವಕರು ತಾವು ತೆಗೆದುಕೊಳ್ಳುವ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಾರೆ ಎಂದು ನಮಗೆ ತಿಳಿದಿದೆ. ಬಜೆಟ್ ವೆಚ್ಚದಲ್ಲಿ, 35,000 ಕೋಟಿ ಗೋವಾದ ಹಣವನ್ನು ಗಣಿಗಾರಿಕೆ ಕಂಪನಿಗಳ ಗುಂಪೇ ಕದಿಯುತ್ತದೆ. ಇದು ಶಾ ಆಯೋಗದ ವರದಿಯಲ್ಲಿದೆ ಮತ್ತು ಇದನ್ನು ಸುಪ್ರೀಂಕೋರ್ಟ್ ಗಮನಿಸಿದೆ. ಈ ಯೋಜನೆಗೆ ಗರಿಷ್ಠ ಹಣ 1,100 ಕೋಟಿ ರೂ. ಭ್ರಷ್ಟಾಚಾರ ಬಯಲಿಗೆಳೆದು ಹಣ ವಾಪಸ್ ಪಡೆದರೆ ಇನ್ನೂ ಸಾಕಷ್ಟು ಮಾಡಬಹುದಿತ್ತು. ಇದು ಬಹಳ ಚಿಕ್ಕ ಭಾಗವಾಗಿದೆ ಎಂದು ಗೋಖಲೆ ಹೇಳಿದರು.

ವಿಧಾನಸಭೆ ಚುನಾವಣೆಗೆ ಮುನ್ನ ಟಿಎಂಸಿ ಘೋಷಿಸಿದ ಎರಡನೇ ಪ್ರಮುಖ ಯೋಜನೆ ಇದಾಗಿದೆ. ಮೊದಲನೆಯದು ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ಮನೆಯಲ್ಲಿ ಒಬ್ಬ ಮಹಿಳೆ ಸರ್ಕಾರದಿಂದ ತಿಂಗಳಿಗೆ 5,000 ರೂ.ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಗೃಹ ಲಕ್ಷ್ಮಿ ಯೋಜನೆಯು ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ನೋಂದಣಿಗಳನ್ನು ಕಂಡಿದೆ ಮತ್ತು ಯುವ ಶಕ್ತಿ ಯೋಜನೆಗಾಗಿ ನೋಂದಣಿಗಳು ಭಾನುವಾರದಿಂದ ಪ್ರಾರಂಭವಾದವು. ಟಿಎಂಸಿ ನಾಯಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊ, ಮಾದರಿ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲು ಹೆಚ್ಚು ಹೆಚ್ಚು ಜನರು ನೋಂದಾಯಿಸಲು ಕೇಳಿಕೊಂಡರು.

ಇದನ್ನೂ ಓದಿ: ಧ್ಯಾನ್ ಚಂದ್ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ; ಈ ವಿಶ್ವವಿದ್ಯಾಲಯವು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದಾಗಲಿದೆ: ನರೇಂದ್ರ ಮೋದಿ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ