Covid variant BF.7: ಹೊಸ ವರ್ಷಾಚರಣೆ ವೇಳೆ ದೈಹಿಕ ಅಂತರಕ್ಕೆ ಒತ್ತು ನೀಡಬೇಕು: ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸೂಚನೆ

| Updated By: Digi Tech Desk

Updated on: Dec 23, 2022 | 8:11 PM

Covid New Year Guidelines: ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 ಭೀತಿ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

Covid variant BF.7: ಹೊಸ ವರ್ಷಾಚರಣೆ ವೇಳೆ ದೈಹಿಕ ಅಂತರಕ್ಕೆ ಒತ್ತು ನೀಡಬೇಕು: ಎಲ್ಲಾ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಹತ್ವದ ಸೂಚನೆ
ಕೇಂದ್ರ ಸಚಿವ ಮನ್​ ಸುಖ್ ಮಾಂಡವಿಯಾ
Follow us on

ನವದೆಹಲಿ: ಕೊರೊನಾ ಒಮಿಕ್ರಾನ್ ರೂಪಾಂತರಿ ತಳಿ BF.7 (Covid Variant BF.7) ಭೀತಿ ಹಿನ್ನೆಲೆ ಹೊಸ ವರ್ಷಾಚರಣೆ ವೇಳೆ ದೈಹಿಕ ಅಂತರಕ್ಕೆ ಒತ್ತು ನೀಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಬೇಕು ಎಂದು ಎಲ್ಲ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ (Union Health Department) ಮಾರ್ಗಸೂಚಿ ಹೊರಡಿಸಿದೆ. ಕೊರೊನಾ ಪರೀಕ್ಷೆ ಹೆಚ್ಚಿಸುವುದು, ಪಾಸಿಟಿವ್ ಬಂದರೆ ಚಿಕಿತ್ಸೆ ನೀಡಬೇಕು. ಜನರು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಲು ಪ್ರೆರೇಪಿಸಬೇಕು ಎಂದು ಎಲ್ಲ ಸಚಿವಾಲಯ ಸೂಚಿಸಿದೆ.

ಹಿಂದಿನ ಕೊರೊನಾ ಸಂಕಷ್ಟದಲ್ಲಿ ಕೆಲಸ ಮಾಡಿದಂತೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು. ವಿದೇಶಿ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲು ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ.

ಇದನ್ನೂ ಓದಿ:  ದೇಶದಲ್ಲಿ ಪ್ರತಿನಿತ್ಯ 50 ಲಕ್ಷ ಕೋವಿಡ್​ ಕೇಸ್ ಪತ್ತೆ: ಜಗತ್ತಿನಾದ್ಯಂತ 10 ಲಕ್ಷ ಜನ ಕೊರೊನಾದಿಂದ ಸಾವನ್ನಪ್ಪುವ ಸಾಧ್ಯತೆ – ಸಚಿವ ಕೆ. ಸುಧಾಕರ

ಸೋಂಕಿನ ಲಕ್ಷಣ ಕಂಡು ಬಂದರೇ ಕೊರೊನಾ ಟೆಸ್ಟ್ ಕಡ್ಡಾಯ ಮಾಡಬೇಕು. ಅಲ್ಲದೆ ಏರ್​ಪೋರ್ಟ್​ಗಳಲ್ಲಿ ಪ್ರಯಾಣಿಕರಿಗೆ ಱಂಡಮ್ ಟೆಸ್ಟ್ ಮಾಡಬೇಕೆಂದು ತಿಳಿಸಿದೆ. ಹಾಗೇ, ವಿದೇಶದಿಂದ ಬರೋರು ವ್ಯಾಕ್ಸಿನ್ ಕಡ್ಡಾಯವಾಗಿ ಪಡೆದಿರಬೇಕು. ಪ್ರಯಾಣದ ವೇಳೆ ಕೊವಿಡ್ ಲಕ್ಷಣ ಕಂಡುಬಂದರೆ ಐಸೋಲೇಷನ್ ಮಾಡಬೇಕು ಎಂದು ಹೇಳಿದೆ.

ಇದನ್ನೂ ಓದಿ: ಸಂಸತ್ತಿನ ಚಳಿಗಾಲದ ಅಧಿವೇಶನ ಯಶಸ್ವಿಯಾಗಿ ಪೂರ್ಣಗೊಂಡಿದೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಅಲ್ಲದೆ ಏರ್​ಪೋರ್ಟ್​ಗಳಲ್ಲಿ ಪಾಸಿಟಿವ್ ಬರೋ ವರದಿಯನ್ನ ಜಿನೋಮಿಕ್ ಸೀಕ್ವೆನ್ಸ್‌ ಒಳಪಡಿಸಬೇಕು. ಜೊತೆಗೆ ಬೂಸ್ಟರ್ ಡೋಸ್ ಚುರುಕುಗೊಳಿಸುವಂತೆ ಸೂಚಿಸಿದ್ದು, ಜನವರಿ 2023ರ ವರೆಗೆ ಶೇಕಡಾ 50 ರಷ್ಟು ಮಂದಿಗೆ ಬೂಸ್ಟರ್ ಡೋಸ್ ನೀಡಬೇಕು. ಅಲ್ದೆ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಆಕ್ಸಿಜನ್ ದಾಸ್ತಾನು ಮೇಲೆ ನಿಗಾ ಇಡುವಂತೆ ಹೇಳಿದೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:57 pm, Fri, 23 December 22