ನಾಡ ಬಾಂಬ್ ಸ್ಫೋಟ: ತಪ್ಪೇ ಮಾಡದ ಗೋಮಾತೆಗೇಕೆ ಶಿಕ್ಷೆ?
ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮಪಲ್ಲಿಯಲ್ಲಿ ನಡೆದಿದೆ. ಕಾಡು ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ […]
ಹೈದರಾಬಾದ್: ನಾಡ ಬಾಂಬ್ ಸ್ಫೋಟಗೊಂಡು ಹಸು ಮೃತಪಟ್ಟಿರುವ ಘಟನೆ ಆಂಧ್ರ ಪ್ರದೇಶದ ತಿರುಪತಿ ಮಂಡಲಂನ ಚಂದಮಾಮಪಲ್ಲಿಯಲ್ಲಿ ನಡೆದಿದೆ.
ಕಾಡು ಹಂದಿಗಳಿಗಾಗಿ ಬೇಟೆಗಾರರು ಇಟ್ಟಿದ್ದ ನಾಡ ಬಾಂಬ್ ಸ್ಫೋಟದಿಂದ ತೀವ್ರ ಗಾಯಗೊಳಗಾಗಿದ್ದ ಹಸು ಸಾವನ್ನಪ್ಪಿದೆ. ಮೇಯಲೆಂದು ಹೊರ ಹೋಗಿದ್ದ ಹಸು ನಾಡ ಬಾಂಬ್ ಸ್ಪರ್ಶಿಸಿದೆ. ಈ ವೇಳೆ ಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರ ಛಿದ್ರವಾಗಿದೆ. ಬಾಂಬ್ ಸ್ಫೋಟದಿಂದ ಹಸುವಿನ ದವಡೆ, ನಾಲಿಗೆ, ಮುಂಖವೆಲ್ಲ ಛಿದ್ರಗೊಂಡಿತ್ತು. ಹೀಗಾಗಿ ಪಶು ವೈದ್ಯರು ಹಸುವಿಗೆ ಚಿಕಿತ್ಸೆ ಅಸಾಧ್ಯವೆಂದಿದ್ದರು. ತೀವ್ರ ನೋವಿನಿಂದ ರಕ್ತದ ಮಡುವಿನಲ್ಲಿ ಬಿದ್ದು 4ಗಂಟೆಗಳ ಕಾಲ ಒದ್ದಾಡಿ, ಮೃತ್ಯುವಿನೊಂದಿಗೆ ಹೋರಾಡಿ ಕೊನೆಗೆ ಪ್ರಾಣ ಬಿಟ್ಟಿದೆ.
ಕಳೆದ 2ತಿಂಗಳಲ್ಲಿ ಇದೇ ರೀತಿ ಬಾಂಬ್ ಸ್ಫೋಟಕ್ಕೆ ಸುಮಾರು 6ಹಸುಗಳು ಮೃತಪಟ್ಟಿವೆ. ತಿರುಪತಿ ಬಳಿಯ ವೇದುರುಕುಪ್ಪಂ, ಪೆದ ಪಂಜನಿ, ಶಾಂತಿಪುರಂ ಮಂಡಲಗಳಲ್ಲಿ ಬೇಟೆಗಾರರ ನಾಡ ಬಾಂಬ್ಗಳಿಗೆ ಪದೇ ಪದೇ ಮೂಕ ಜೀವಗಳು ಬಲಿಯಾಗುತ್ತಿವೆ. ಮಾಡದ ತಪ್ಪಿಗೆ ನರಕವನ್ನನುಭವಿಸಿ ಸಾಯುವಂತ ಪರಿಸ್ಥಿತಿಯನ್ನು ಗೋಮಾತೆ ಅನುಭವಿಸುತ್ತಿದ್ದಾಳೆ. ಇನ್ನು ಮುಂದಾದರೂ ಬೇಟೆಗಾರರು ಈ ರೀತಿ ಕ್ರಮಗಳನ್ನು ಅನುಸರಿಸುವುದನ್ನು, ನಾಡ ಬಾಂಬ್ಗಳ ಉಪಯೋಗವನ್ನು ಬಿಡಬೇಕು. ಕೇರಳದಲ್ಲೂ ಇದೇ ರೀತಿ ಗರ್ಭಿಣಿ ಆನೆ ಬಲಿಯಾಗಿತ್ತು.