ಆಂಧ್ರ ಸಿಎಂ ಪರಿಹಾರ ನಿಧಿ ಮೇಲೆ ಖದೀಮರ ಕಣ್ಣು, ನಕಲಿ ಚೆಕ್ ಬಳಸಿ ಕೋಟಿ ಲಪಟಾಯಿಸಲು ಪ್ಲ್ಯಾನ್!
ಕಷ್ಟದಲ್ಲಿದ್ದವರಿಗೆ ನೆರವಾಗಲೆಂದು ಮುಖ್ಯಮಂತ್ರಿ ಪರಿಹಾರ ನಿಧಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ನಿಧಿಗಳ ಹಣವನ್ನು ಕಷ್ಟದಲ್ಲಿರುವ ಬಡವರಿಗೆ ನೀಡುವುದು ಪ್ರಮುಖ ಉದ್ದೇಶ. ಆದರೆ ಆಂಧ್ರದಲ್ಲಿ ಬಡವರ ನಿಧಿಯ ಹಣ ಲಪಟಾಯಿಸಲು ಯತ್ನ ನಡೆದಿದೆ. ಈ ಪ್ರಕರಣ ಸಂಬಂಧ ತುಳು ಸಿನಿಮಾ ನಿರ್ಮಾಪಕ ಉದಯ್ ಕುಮಾರ್ ಕಾಂತಾವರ ಸೇರಿದಂತೆ ಮೂವರನ್ನು ಮೂಡಬಿದ್ರೆಯಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದಾರೆ. ನಕಲಿ ಚೆಕ್ ನೀಡಿ ಕೋಟಿ ಕೋಟಿ ಲಪಟಾಯಿಸಲು ಪ್ಲ್ಯಾನ್ ಅನಾರೋಗ್ಯ, ಅಪಘಾತ, ನೈಸರ್ಗಿಕ ವಿಪತ್ತಿನಿಂದ ಸಾವು- ನೋವು ಅನುಭವಿಸಿದವರಿಗೆ ನೆರವಾಗಲೆಂದು ರಾಜ್ಯಗಳಲ್ಲಿ ಸಿಎಂ […]
ಕಷ್ಟದಲ್ಲಿದ್ದವರಿಗೆ ನೆರವಾಗಲೆಂದು ಮುಖ್ಯಮಂತ್ರಿ ಪರಿಹಾರ ನಿಧಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಈ ನಿಧಿಗಳ ಹಣವನ್ನು ಕಷ್ಟದಲ್ಲಿರುವ ಬಡವರಿಗೆ ನೀಡುವುದು ಪ್ರಮುಖ ಉದ್ದೇಶ. ಆದರೆ ಆಂಧ್ರದಲ್ಲಿ ಬಡವರ ನಿಧಿಯ ಹಣ ಲಪಟಾಯಿಸಲು ಯತ್ನ ನಡೆದಿದೆ. ಈ ಪ್ರಕರಣ ಸಂಬಂಧ ತುಳು ಸಿನಿಮಾ ನಿರ್ಮಾಪಕ ಉದಯ್ ಕುಮಾರ್ ಕಾಂತಾವರ ಸೇರಿದಂತೆ ಮೂವರನ್ನು ಮೂಡಬಿದ್ರೆಯಲ್ಲಿ ಆಂಧ್ರ ಪೊಲೀಸರು ಬಂಧಿಸಿದ್ದಾರೆ.
ನಕಲಿ ಚೆಕ್ ನೀಡಿ ಕೋಟಿ ಕೋಟಿ ಲಪಟಾಯಿಸಲು ಪ್ಲ್ಯಾನ್ ಅನಾರೋಗ್ಯ, ಅಪಘಾತ, ನೈಸರ್ಗಿಕ ವಿಪತ್ತಿನಿಂದ ಸಾವು- ನೋವು ಅನುಭವಿಸಿದವರಿಗೆ ನೆರವಾಗಲೆಂದು ರಾಜ್ಯಗಳಲ್ಲಿ ಸಿಎಂ ಪರಿಹಾರ ನಿಧಿಯನ್ನು ಸ್ಥಾಪಿಸಲಾಗಿದೆ. ಅದರಂತೆ ಆಂಧ್ರಪ್ರದೇಶದಲ್ಲೂ ಸಿಎಂ ಪರಿಹಾರ ನಿಧಿ ಇದೆ. ಆದ್ರೆ ಸಂಕಷ್ಟದಲ್ಲಿರುವವರಿಗೆ ಸೇರಬೇಕಾದ ಹಣಕ್ಕೂ ಖದೀಮರು ಕನ್ನ ಹಾಕಲು ಯತ್ನಿಸಿದ್ದಾರೆ. ಸಿಎಂ ಪರಿಹಾರ ನಿಧಿಯಿಂದ ನೀಡಿದ್ದ ಚೆಕ್‌ಗಳನ್ನು ತಿರುಚಿ 117 ಕೋಟಿ ರೂಪಾಯಿ ಹಣವನ್ನು ಆಂಧ್ರ ಸಿಎಂ ಪರಿಹಾರ ನಿಧಿಯಿಂದ ವಿತ್ ಡ್ರಾ ಮಾಡಲು ಮಂಗಳೂರು ಕೋಸ್ಟಲ್ ವುಡ್ ಸಿನಿಮಾ ನಿರ್ಮಾಪಕ ಯತ್ನಿಸಿದ್ದಾನೆ.
₹117ಕೋಟಿ ಡ್ರಾ ಮಾಡಲು ಪ್ಲ್ಯಾನ್! ಸಂಕಷ್ಟದಲ್ಲಿದ್ದ ಆಂಧ್ರದ ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಚೆಕ್ ಅನ್ನು ಸಿಎಂ ಪರಿಹಾರ ನಿಧಿಯಿಂದ ನೀಡಲಾಗಿತ್ತು. ಚೆಕ್ ಪಡೆದ ಖದೀಮ ಅಸಲಿ ಚೆಕ್ ರೀತಿಯೇ ಮತ್ತೊಂದು ನಕಲಿ ಚೆಕ್ ಅನ್ನು ತಯಾರಿಸಿದ್ದಾನೆ. ಬ್ಯಾಂಕ್‌ಗೆ ಹೋಗಿ ಸಿಎಂ ಪರಿಹಾರ ನಿಧಿಯಿಂದ 117 ಕೋಟಿ ರೂಪಾಯಿ ವಿತ್ ಡ್ರಾ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಚೆಕ್‌ನಲ್ಲಿರುವ ಅಮೌಂಟ್ ಬಗ್ಗೆ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ಸಿಎಂ ಪರಿಹಾರ ನಿಧಿಯ ಉಸ್ತುವಾರಿ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಕೋಟಿಗಟ್ಟಲೇ ಹಣ ವಿತ್ ಡ್ರಾಗೆ ಚೆಕ್ ನೀಡಿದ್ದೀರಾ ಎಂದು ವಿಚಾರಿಸಿದ್ದಾರೆ. ಅಧಿಕಾರಿಗಳು ಅಷ್ಟು ದೊಡ್ಡ ಮೊತ್ತದ ಚೆಕ್ ನೀಡಿಲ್ಲ ಎಂದಿದ್ದಾರೆ. ನಕಲಿ ಚೆಕ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ಆಂಧ್ರ ಸರ್ಕಾರವು ಎಚ್ಚೆತ್ತುಕೊಂಡಿದೆ. ಇದೀಗ ಸಿಎಂ ಪರಿಹಾರ ನಿಧಿಯಿಂದ ಯಾರಿಗೂ ಚೆಕ್ ನೀಡುತ್ತಿಲ್ಲ.
ಸಿಐಡಿ ತನಿಖೆಗೆ ಆದೇಶಿಸಿದ ಆಂಧ್ರ ಸರ್ಕಾರ ಇದೇ ರೀತಿ ಸಿಎಂ ಪರಿಹಾರ ನಿಧಿಯ ನಕಲಿ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿ ಕೋಟಿಗಟ್ಟಲೇ ಹಣ ಲಪಟಾಯಿಸಲು ಬೇರೆ ಬೇರೆ ಕಡೆ ಕೂಡ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ನಕಲಿ ಚೆಕ್ ನೀಡಿ ಸಿಎಂ ಪರಿಹಾರ ನಿಧಿಯಿಂದ ಹಣ ಪಡೆಯಲು ಯತ್ನಿಸಿದ ಆರೋಪಿಗಳ ಪತ್ತೆಗೆ ಸಿಐಡಿ ತನಿಖೆಗೆ ಆದೇಶ ನೀಡಲಾಗಿದೆ. ಆಂಧ್ರ ಆರ್ಥಿಕ ಅಪರಾಧ ವಿಭಾಗವು ಈ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದೆ.