ಮುಂದಿನ ವಾರದಿಂದ ಕೊವಿನ್​ ಪೋರ್ಟಲ್​ನಲ್ಲಿ ಹಿಂದಿ ಸೇರಿ 14 ಭಾಷೆಗಳು ಲಭ್ಯ: ಆರೋಗ್ಯ ಸಚಿವ ಹರ್ಷವರ್ಧನ್​

ಭಾರತದಲ್ಲಿ ಕೊವಿಡ್​ 19 ರೂಪಾಂತರ ಪತ್ತೆ, ನಿರ್ವಹಣೆಗಾಗಿ INSACOG (Indian SARS-CoV-2 Genomics Consortium)ನೆಟ್ವರ್ಕ್​​​ಗೆ ಇನ್ನೂ 17 ಪ್ರಯೋಗಾಲಯಗಳನ್ನು ಸೇರ್ಪಡೆ ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಮುಂದಿನ ವಾರದಿಂದ ಕೊವಿನ್​ ಪೋರ್ಟಲ್​ನಲ್ಲಿ ಹಿಂದಿ ಸೇರಿ 14 ಭಾಷೆಗಳು ಲಭ್ಯ: ಆರೋಗ್ಯ ಸಚಿವ ಹರ್ಷವರ್ಧನ್​
ಡಾ. ಹರ್ಷ ವರ್ಧನ್
Lakshmi Hegde

|

May 17, 2021 | 8:42 PM

ದೆಹಲಿ: ಕೊವಿಡ್​ 19 ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳುವ ಕೊವಿನ್​ (CoWin) ಪೋರ್ಟಲ್​​​ನಲ್ಲಿ​ ಮುಂದಿನ ವಾರದಿಂದ ಹಿಂದಿ ಸೇರಿ, 14 ಭಾಷೆಗಳು ಲಭ್ಯವಾಗಲಿದೆ. ಹಾಗೇ ಭಾರತದಲ್ಲಿ ಕೊವಿಡ್​ 19 ರೂಪಾಂತರ ಪತ್ತೆ, ನಿರ್ವಹಣೆಗಾಗಿ INSACOG (Indian SARS-CoV-2 Genomics Consortium)ನೆಟ್ವರ್ಕ್​​​ಗೆ ಇನ್ನೂ 17 ಪ್ರಯೋಗಾಲಯಗಳನ್ನು ಸೇರ್ಪಡೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ತಿಳಿಸಿದೆ. ಕೊವಿಡ್​ 19ಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಚರ್ಚಿಸಲು ಹಲವು ಸಚಿವರು ಸೇರಿ ನಡೆಸಿದ 26ನೇ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನೇತೃತ್ವವನ್ನು ಆರೋಗ್ಯ ಸಚಿವ ಹರ್ಷವರ್ಧನ್​ ವಹಿಸಿದ್ದರು ಎಂದು ಇಲಾಖೆ ಹೇಳಿದೆ.

INSACOG ನೆಟ್ವರ್ಕ್​​ನಲ್ಲಿ ಸದ್ಯ 10 ಲ್ಯಾಬೋರೇಟರಿಗಳು ಮಾತ್ರ ಇವೆ. ಅದನ್ನೀಗ 17ಕ್ಕೆ ಏರಿಸಲಾಗುವುದು. ಕಳೆದ 26ದಿನಗಳಲ್ಲಿ ಇದೇ ಮೊದಲಬಾರಿಗೆ ದೇಶದಲ್ಲಿ ಇಂದು 3 ಲಕ್ಷಕ್ಕಿಂತಲೂ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಂದು ಸಕಾರಾತ್ಮಕ ವಿಚಾರ ಎಂದು ಹರ್ಷವರ್ಧನ್​ ತಿಳಿಸಿದ್ದಾರೆ. ಅಲ್ಲದೆ, ಡಿಆರ್‌ಡಿಒ 2-ಡಿಆಕ್ಸಿ-ಡಿ-ಗ್ಲೂಕೋಸ್ (2ಡಿಜಿ) ಔಷಧವನ್ನು ಅಭಿವೃದ್ಧಿ ಪಡಿಸಿದ್ದರ ಬಗ್ಗೆ ಶ್ಲಾಘಿಸಿದರು. ಡಿಆರ್​ಡಿಒ ಈ ಔಷಧ ಅಭಿವೃದ್ಧಿ ಪಡಿಸುವ ಕೆಲಸವನ್ನು ಕಳೆದ ವರ್ಷ ಏಪ್ರಿಲ್​​ನಿಂದ ಪ್ರಾರಂಭ ಮಾಡಿತ್ತು. ಇಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದರು.

ಇನ್ನು ಕೊವಿಡ್ ಸೋಂಕಿಗೆ ತತ್ತರಿಸಿರುವ ರಾಜ್ಯಗಳಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಹೇಳಿರುವ ಆರೋಗ್ಯ ಸಚಿವರು,ಇಲ್ಲಿಯವರೆಗೆ 4.22 ಕೋಟಿಗೂ ಅಧಿಕ N95 ಮಾಸ್ಕ್​​ಗಳು, 1.76 ಕೋಟಿ ಪಿಪಿಇ ಕಿಟ್​​ಗಳು, 52.64 ಲಕ್ಷ ರೆಮ್​ಡೆಸಿವಿರ್​ ಇಂಜೆಕ್ಷನ್​​ ಮತ್ತು 45,066 ವೆಂಟಿಲೇಟರ್​​ಗಳನ್ನು ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜಕೀಯ ನಾಯಕರು ಕೊರೊನಾ ಔಷಧ ಸಂಗ್ರಹಿಸಿಡುವಂತಿಲ್ಲ, ಆರೋಗ್ಯ ಇಲಾಖೆಗೆ ಒಪ್ಪಿಸಬೇಕು: ದೆಹಲಿ ಹೈಕೋರ್ಟ್ ಸೂಚನೆ

ಡಿಆರ್​ಡಿಒ ಅಭಿವೃದ್ಧಿಪಡಿಸಿರುವ 2ಡಿಜಿ ಔಷಧದ 10 ಸಾವಿರ ಡೋಸ್ ಇಂದು ವಿತರಣೆ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada