ಹೈದರಾಬಾದ್: ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಹೆದ್ದಾರಿಯಲ್ಲೇ ಕಾರಿಗೆ ಬೆಂಕಿ ತಗುಲಿ, ಹೊತ್ತಿ ಉರಿದಿದೆ. ನಗರದ ಮಧ್ಯೆ ಎಕ್ಸ್ಪ್ರೆಸ್ವೇಯಲ್ಲಿ ತೆರಳುತ್ತಿದ್ದಾಗಲೇ ಈ ಬೆಂಕಿ ಅವಘಡ ಸಂಭವಿಸಿದೆ. ಯಾರಿಗೂ ಪ್ರಾಣಾಪಾಯಗಳು ಸಂಭವಿಸಿಲ್ಲ.
ಕಾರು ಚಲಾಯಿಸುತ್ತಿದ್ದ ಮಹಿಳೆಗೆ ಕಾರಿನ ಇಂಜಿನ್ನಲ್ಲಿ ಬೆಂಕಿ ಕಿಡಿಗಳು ಹೊರಬರುತ್ತಿರುವುದು ಕಾಣಿಸಿತು. ಹೀಗಾಗಿ, ತಕ್ಷಣ ಅವರು ನಡುರಸ್ತೆಯಲ್ಲೇ ಕಾರನ್ನು ನಿಲ್ಲಿಸಿ ಕೆಳಗೆ ಇಳಿಯಲು ಪ್ರಯತ್ನಿಸಿದರು. ಆಕೆಯ ಸಹಾಯಕ್ಕೆ ಬಂದ ಅಕ್ಕಪಕ್ಕದ ವಾಹನದವರು ಕಾರಿನಿಂದ ಆಚೆ ಬರಲು ಸಹಾಯ ಮಾಡಿದರು. ಅಷ್ಟರಲ್ಲಿ ಕಾರಿಗೆ ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿತ್ತು.
ಮಾರುತಿ ಸ್ವಿಫ್ಟ್ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಕಾರು ಬಹುಪಾಲು ಸುಟ್ಟುಹೋಗಿತ್ತು. ಮಹಿಳೆ ತನ್ನ ಕಾರಿನಲ್ಲಿ ನೆಲ್ಲೂರಿನಿಂದ ಬುಚ್ಚಿರೆಡ್ಡಿ ಪಾಲೇಂ ಕಡೆಗೆ ಹೊರಟಿದ್ದಾಗ ಇದ್ದಕ್ಕಿದ್ದಂತೆ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಕಾರಿನ ಹಿಂಬದಿ ಸೀಟಿನಲ್ಲಿದ್ದವರು ಕೂಡ ತಕ್ಷಣ ಕೆಳಗೆ ಇಳಿದುಕೊಂಡಿದ್ದಾರೆ. ಹೀಗಾಗಿ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶಾರ್ಟ್ ಸರ್ಕ್ಯೂಟ್ನಿಂದ ಈ ರೀತಿ ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: Fire Accident in Dhaka: ಧಗಧಗನೆ ಹೊತ್ತಿ ಉರಿದ ಬಾಂಗ್ಲಾದೇಶದ ಫುಡ್ ಫ್ಯಾಕ್ಟರಿ, ಬೆಂಕಿ ದುರಂತದಲ್ಲಿ 52 ಜನ ಸಜೀವ ದಹನ
(Car Catches Fire on Hyderabad’s Expressway on Monday)