AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಟೌಡಿ ಮಹಾಪಂಚಾಯತ್​ನಲ್ಲಿ ಪ್ರಚೋದನಕಾರಿ ಭಾಷಣ; ಜಾಮಿಯಾ ಶೂಟರ್ ವಿರುದ್ಧ ಎಫ್ಐಆರ್

ಖಾಸಗಿ ವ್ಯವಹಾರ ಹೊಂದಿರುವ ಗುರ್ಗಾಂವ್‌ನ ಜಮಾಲ್‌ಪುರ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಟೌಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜುಲೈ4 ರಂದು ಪಟೌಡಿಯ ರಾಮ್‌ಲೀಲಾ ಮೈದಾನದಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿತ್ತು.

ಪಟೌಡಿ ಮಹಾಪಂಚಾಯತ್​ನಲ್ಲಿ ಪ್ರಚೋದನಕಾರಿ ಭಾಷಣ; ಜಾಮಿಯಾ ಶೂಟರ್ ವಿರುದ್ಧ ಎಫ್ಐಆರ್
ಜಾಮಿಯಾ ಶೂಟರ್
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on: Jul 12, 2021 | 7:38 PM

Share

ದೆಹಲಿ: ಪಟೌಡಿಯ ಮಹಾಪಂಚಾಯತ್‌ನಲ್ಲಿ ಪ್ರಚೋದನಕಾರಿ ಭಾಷಣ ಮಾಡಿ ದ್ವೇಷವನ್ನು ಉತ್ತೇಜಿಸಿದ್ದಕ್ಕಾಗಿ ಮತ್ತು ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಯುವಕನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಕಳೆದ ವರ್ಷ ಜಾಮಿಯಾದಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ಗುಂಪಿನ ಮೇಲೆ ಗುಂಡು ಹಾರಿಸಿದ ಹದಿಹರೆಯದ ಯುವಕನೇ ಈತ ಎಂದು ವರದಿಯಲ್ಲಿ ಹೇಳಿದೆ. ತನ್ನ ಭಾಷಣದಲ್ಲಿ ಹದಿಹರೆಯದ ಆ ಯುವಕ ಮುಸ್ಲಿಂ ಮಹಿಳೆಯರನ್ನು ಅಪಹರಿಸಲು ಹೇಳಿದ್ದಾರೆ. “ಭಯೋತ್ಪಾದಕ ಮನಸ್ಥಿತಿ” ಇರುವವರಿಗೆ “ಸಿಎಎ ಬೆಂಬಲವಾಗಿ ಜಾಮಿಯಾಕ್ಕೆ ಹೋಗಲು ಸಾಧ್ಯವಾದರೆ”, “ಪಟೌಡಿ ತುಂಬಾ ದೂರದಲ್ಲಿಲ್ಲ” ಎಂದು ಆತ ಹೇಳಿದ್ದನ್ನು ಎನ್ನಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 153 ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295 ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ)ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ) ನಮಗೆ ಬಂದ ದೂರಿನಲ್ಲಿ ಆರೋಪಿಗಳನ್ನು ಹೆಸರಿನಿಂದ ಉಲ್ಲೇಖಿಸಲಾಗಿದೆ ”ಎಂದು ಡಿಸಿಪಿ (ಮನೇಸರ್) ವರುಣ್ ಸಿಂಗ್ಲಾ ಹೇಳಿದ್ದಾರೆ.

ಖಾಸಗಿ ವ್ಯವಹಾರ ಹೊಂದಿರುವ ಗುರ್ಗಾಂವ್‌ನ ಜಮಾಲ್‌ಪುರ ಗ್ರಾಮದ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಟೌಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಜುಲೈ4 ರಂದು ಪಟೌಡಿಯ ರಾಮ್‌ಲೀಲಾ ಮೈದಾನದಲ್ಲಿ ಮಹಾಪಂಚಾಯತ್ ಆಯೋಜಿಸಲಾಗಿತ್ತು. ಅಲ್ಲಿ ಒಬ್ಬ ವ್ಯಕ್ತಿ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ. ಅದು ಗಲಭೆಗೆ ಕಾರಣವಾಗಬಹುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುತ್ತದೆ ಮತ್ತು ಈ ಭಾಷಣವು ಧಾರ್ಮಿಕ ವನೆಗಳನ್ನು ಪ್ರಚೋದಿಸುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಳೆದ ಭಾನುವಾರ ನಡೆದ ಮಹಾಪಂಚಾಯತ್, ಧಾರ್ಮಿಕ ಮತಾಂತರ, ‘ಲವ್ ಜಿಹಾದ್’, ಮತ್ತು ಜನಸಂಖ್ಯಾ ನಿಯಂತ್ರಣ ಕಾನೂನು ಕುರಿತು ಚರ್ಚಿಸಲು ಆಯೋಜಿಸಲಾಗಿತ್ತು.

ಭಾನುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಭಾಷಣದ ವಿಡಿಯೊ ಹರಿದಾಡಿದ್ದು ವಿಡಿಯೊದಲ್ಲಿ 17 ವರ್ಷದ ಯುವಕ, “ಪಟೌಡಿ ಸೆ ಕೆವಾಲ್ ಇತ್ನಿ ಸಿ ಚೇತವಾನಿ ದೇನಾ ಚಾಹ್ತಾ ಹೂ, ಉನ್… ಜಿಹಾದಿಯಾನ್ ಕೋ, ಆತಂಕ್ ವಾದಿ ಮಾನ್ಸಿಕ್ತಾ ಕೆ ಲೋಗೊನ್ ಕೊ, ಜಬ್ (ಮೇ) ಸೌ ಕಿಲೋಮೀಟರ್ ದೂರ್ ಜಾಮಿಯಾ ಜಾ ಸಕ್ತ ಹೂನ್ ಸಿಎಎ ಕೆ ಸಮರ್ಥನ್ ಮೇ, ತೋಹ್ ಪಟೌಡಿ ಜ್ಯಾದಾ ದೂರ್ ನಹಿನ್ ಹೈ. (, ಜಿಹಾದಿಗಳು, ಭಯೋತ್ಪಾದಕ ಮನಸ್ಥಿತಿಯ ಜನರಿಗೆ ನಾನು ಪಟೌಡಿಯಿಂದ ಈ ಎಚ್ಚರಿಕೆಯನ್ನು ಮಾತ್ರ ನೀಡಲು ಬಯಸುತ್ತೇನೆ. ನಾನು ಸಿಎಎಗೆ ಬೆಂಬಲವಾಗಿ ಜಾಮಿಯಾಕ್ಕೆ 100 ಕಿಲೋಮೀಟರ್ ದೂರ ಹೋಗಬಹುದಾದರೆ ಆಗ ಪಟೌಡಿ ತುಂಬಾ ದೂರದಲ್ಲಿಲ್ಲ) ಎಂಬ ಮಾತುಗಳಿವೆ.

ಮುಸ್ಲಿಮರ ಮೇಲೆ ಹಲ್ಲೆ ನಡೆದಾಗ ಅವರು ‘ರಾಮ್ ರಾಮ್’ ಎಂದು ಕೂಗುತ್ತಾರೆ ಎಂದು ಆ ವ್ಯಕ್ತಿ ಹೇಳಿರುವುದು ವಿಡಿಯೊ ತುಣುಕಿನಲ್ಲಿದೆ.

ಜಾಮಿಯಾ ಘಟನೆ ಜನವರಿ 30, 2020 ರಂದು ನಡೆದಿತ್ತು. ಆಗ ಈ ಹದಿಹರೆಯದ ಯುವರ ಪ್ರತಿಭಟನಾಕಾರರ ಮೇಲೆ ಬಂದೂಕನ್ನು ತೋರಿಸಿ “ಯೆ ಲೋ ಅಜಾದಿ (ಇಗೋ, ಅಜಾದಿ ತೆಗೆದುಕೊಳ್ಳಿ)”, “ದೇಶ್ ಮೇ ಜೋ ರೆಹನಾ ಹೊಗಾ, ವಂದೇ ಮಾತರಂ ಕೆಹ್ನಾ ಹೊಗಾ (ನೀವು ದೇಶದಲ್ಲಿರಬೇಕಾದರೆ ವಂದೇ ಮಾತರಂ ಹೇಳಬೇಕು) ಮತ್ತು ದಿಲ್ಲಿ ಪೊಲೀಸ್ ಜಿಂದಾಬಾದ್ ಎಂದು ಹೇಳಿದ್ದನು. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ದೆಹಲಿ ಪೊಲೀಸ್ ಅಧಿಕಾರಿಗಳು ಬಾಲಾಪರಾಧಿ ನ್ಯಾಯ ಮಂಡಳಿಗೆ ಆತನನ್ನು ಕಳುಹಿಸಿದ್ದು ಆತನನ್ನು ಕೆಲವು ತಿಂಗಳ ನಂತರ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ಶಾಸಕ ರೇಣುಕಾಚಾರ್ಯ ಹೋಗಲಾಡಿಸಿದ್ದಾರೆ: ಮುಸ್ಲಿಂ ಮುಖಂಡ

(Provocative speech at a mahapanchayat in Pataudi FIR against Jamia shooter)

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್