ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ಶಾಸಕ ರೇಣುಕಾಚಾರ್ಯ ಹೋಗಲಾಡಿಸಿದ್ದಾರೆ: ಮುಸ್ಲಿಂ ಮುಖಂಡ

ಜಾತಿ ಮತ ಧರ್ಮಗಳನ್ನು ಮೀರಿ ಶಾಸಕ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತವಾಗಿ ಕೆಲಸ ಮಾಡುವ ಮೂಲಕ ಎಲ್ಲರಲ್ಲೂ ಹೊಸ ಚೈತನ್ಯವನ್ನು ಶಾಸಕರು ತುಂಬಿದ್ದಾರೆ ಎಂದು ಹೊನ್ನಾ ಮಸೀದಿ ಕಾರ್ಯದರ್ಶಿ ಸನಾವುಲ್ಲಾ‌ಅಭಿಪ್ರಾಯಪಟ್ಟಿದ್ದಾರೆ

ಬಿಜೆಪಿ ಮುಸ್ಲಿಂ ವಿರೋಧಿ ಎಂಬ ತಪ್ಪು ಕಲ್ಪನೆಯನ್ನು ಶಾಸಕ ರೇಣುಕಾಚಾರ್ಯ ಹೋಗಲಾಡಿಸಿದ್ದಾರೆ: ಮುಸ್ಲಿಂ ಮುಖಂಡ
ಮುಸ್ಲಿಂ ಮುಖಂಡರ ಜತೆ ಎಂ ಪಿ ರೇಣುಕಾಚಾರ್ಯ
Follow us
TV9 Web
| Updated By: guruganesh bhat

Updated on:Jul 11, 2021 | 7:52 PM

ದಾವಣಗೆರೆ: ಬಿಜೆಪಿ ಎಂದರೆ ಮುಸ್ಲಿಂ ವಿರೋಧಿ ಎಂದು ತಪ್ಪು ಕಲ್ಪನೆ ನಮ್ಮಲ್ಲಿತ್ತು. ಆದರೆ ಶಾಸಕ ಎಂ.ಪಿ.ರೇಣುಕಾಚಾರ್ಯ ಅದನ್ನು ಹೋಗಲಾಡಿಸಿದ್ದಾರೆ ಎಂದು ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಜಾಮಿಯಾ ಮಸೀದಿ ಕಾರ್ಯದರ್ಶಿ ಸನಾವುಲ್ಲಾ‌ ಹಾಡಿ ಹೊಗಳಿದ್ದಾರೆ. ಶಾಸಕ ರೇಣುಕಾಚಾರ್ಯಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಜಾಮಿಯಾ ಮಸೀದಿ ಕಾರ್ಯದರ್ಶಿ ಸನಾವುಲ್ಲಾ‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಜಾಮೀಯ ಮಸೀದಿ ಶಾಸಕರನ್ನ ಆಹ್ವಾನಿಸಿದ ಮುಸ್ಲಿಂ ಮುಖಂಡರು ಅವರನ್ನ ಸನ್ಮಾನಿಸಿದರು. ಕೊರೊನಾ ಸಂಕಷ್ಟ ಕಾಲದಲ್ಲಿ ಶಾಸಕ ರೇಣುಕಾಚಾರ್ಯ ಮಾಡಿದ ಕಾರ್ಯ ಶ್ಲಾಘನೀಯ. ಮಾನವೀಯತೆ ಇರುವ ಪ್ರತಿಯೊಬ್ಬರು ಅವರನ್ನು ಪ್ರೀತಿಸಬೇಕು. ಬಿಜೆಪಿ ಎಂದರೇ ಮುಸ್ಲಿಂ ವಿರೋಧಿ. ಅವರು ಮುಸ್ಲಿಂ ಸಮುದಾಯದವರನ್ನು ಮನೆ ಬಿಟ್ಟು ಓಡಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಶಾಸಕ ರೇಣುಕಾಚಾರ್ಯ ಅವರನ್ನು ನೋಡಿದ ಮೇಲೆ ಅದು ಸುಳ್ಳು‌ ಎಂದು ತಿಳಿಯಿತು. ಶಾಸಕ ಎಂಪಿ ರೇಣುಕಾಚಾರ್ಯ ಕೊರೊನಾ ಸಂಕಷ್ಟ ಕಾಲದಲ್ಲಿ ಯಾವುದೇ ಜಾತಿ ಧರ್ಮ ಎನ್ನದೇ ಪ್ರತಿಯೊಬ್ಬರ ಸೇವೆ ಮಾಡಿದ್ದಾರೆ‌. ತಾವೇ ಶವ ಸಾಗಿಸಿದ್ದಾರೆ. ಮಾನವೀಯತೆ ಇರುವ ಪ್ರತಿಯೊಬ್ಬರು ಅವರನ್ನು ಪ್ರೀತಿಸಬೇಕು ಎಂದು ಅವರು ಶ್ಲಾಘನೆ ವ್ಯಕ್ತಪಡಿಸಿದರು.

ಜಾತಿ ಮತ ಧರ್ಮಗಳನ್ನು ಮೀರಿ ಶಾಸಕ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೆಲಸ ಮಾಡುತ್ತಿದ್ದಾರೆ. ಜಾತ್ಯಾತೀತವಾಗಿ ಕೆಲಸ ಮಾಡುವ ಮೂಲಕ ಎಲ್ಲರಲ್ಲೂ ಹೊಸ ಚೈತನ್ಯವನ್ನು ಶಾಸಕರು ತುಂಬಿದ್ದಾರೆ. ಬಿಜೆಪಿ ಎಂದರೆ ಮುಸ್ಲಿಂ ವಿರೋಧಿ ಪಕ್ಷ ಅಲ್ಲ, ಎಲ್ಲರನ್ನೂ ಪ್ರೀತಿಸುವ ಪಕ್ಷ ಎಂದು ಶಾಸಕ ರೇಣುಕಾಚಾರ್ಯ ಸಾಬೀತಪಡಿಸಿದ್ದಾರೆ ಎಂದು ಹೊಸಹಳ್ಳಿ ಗ್ರಾಮದ ಜಾಮಿಯಾ ಮಸೀದಿ ಕಾರ್ಯದರ್ಶಿ ಸನಾವುಲ್ಲಾ‌ ಹಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಎಷ್ಟೇ ಕೊರೊನಾ ಅಲೆ ಬರಲಿ..ನೀವಿರುವವರೆಗೂ ನಮಗೆ ಏನೂ ಆಗಲ್ಲ; ಶಾಸಕ ರೇಣುಕಾಚಾರ್ಯಗೆ ಗ್ರಾಮಸ್ಥರಿಂದ ಶ್ಲಾಘನೆ

ಕೊರೊನಾದಿಂದ ಅನಾಥಳಾದ ಬಾಲಕಿಯನ್ನು ದತ್ತು ಪಡೆಯಲು ನಿರ್ಧರಿಸಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ

(Davanagere Honnali MLA MP Renukacharya dismisses misconception of BJP as anti Muslim says Muslim leader)

Published On - 7:39 pm, Sun, 11 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ