ಪ್ರವಾಸಕ್ಕೆ ಬರುವ ಯುವತಿಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ

| Updated By: ಸುಷ್ಮಾ ಚಕ್ರೆ

Updated on: Aug 17, 2021 | 7:37 PM

ಗಿಡ್ಡ ಡ್ರೆಸ್ ಹಾಕಿಕೊಂಡು ಪ್ರವಾಸಕ್ಕೆ ಬರುತ್ತಿದ್ದ ಯುವತಿಯರ ವಿಡಿಯೋಗಳನ್ನು ತೆಗೆಯುತ್ತಿದ್ದ ವ್ಯಕ್ತಿ ಆ ವಿಡಿಯೋಗಳನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ.

ಪ್ರವಾಸಕ್ಕೆ ಬರುವ ಯುವತಿಯರ ಅಶ್ಲೀಲ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಸಾಂಕೇತಿಕ ಚಿತ್ರ
Follow us on

ಜೈಪುರ: ರಾಜಸ್ಥಾನದ ಜೈಪುರಕ್ಕೆ ಪ್ರವಾಸಕ್ಕೆ ಬರುವ ಪ್ರವಾಸಿಗರನ್ನೇ ಗುರಿಯಾಗಿಸಿಕೊಂಡು ಅವರ ಅಶ್ಲೀಲ ಚಿತ್ರಗಳನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಿಡ್ಡ ಡ್ರೆಸ್ ಹಾಕಿಕೊಂಡು ಪ್ರವಾಸಕ್ಕೆ ಬರುತ್ತಿದ್ದ ಯುವತಿಯರ ವಿಡಿಯೋಗಳನ್ನು ತೆಗೆಯುತ್ತಿದ್ದ ವ್ಯಕ್ತಿ ಆ ವಿಡಿಯೋಗಳನ್ನು ಕೆಟ್ಟದಾಗಿ ಬಳಸಿಕೊಳ್ಳುತ್ತಿದ್ದ. ಅಂಬರ್ ಕೋಟೆಯಲ್ಲಿ ಆ ವ್ಯಕ್ತಿಯನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿರುವ ಪೊಲೀಸರಿಗೆ ಆತನ ಮೊಬೈಲ್​ನಲ್ಲಿ ಆ ರೀತಿಯ ಅಸಭ್ಯ ಹಾಗೂ ಅಶ್ಲೀಲವಾದ 200ಕ್ಕೂ ಹೆಚ್ಚು ವಿಡಿಯೋಗಳು ಸಿಕ್ಕಿವೆ.

ಸಿಕರ್ ಜಿಲ್ಲೆಯ ನಿವಾಸಿಯಾಗಿರುವ ಸುರೇಶ್ ಕುಮಾರ್ ಯಾದವ್ ಎಂಬ 34 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಸುಮಾರು 3 ತಿಂಗಳಿನಿಂದ ಪ್ರವಾಸಕ್ಕೆ ಬರುವ ಯುವತಿಯರ ವಿಡಿಯೋಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ಪ್ರವಾಸಕ್ಕೆ ಬರುವ ಯುವತಿಯರ ಪಕ್ಕದಲ್ಲಿ ಕುಳೀತುಕೊಳ್ಳುತ್ತಿದ್ದ ಸುರೇಶ್ ಆ ಪ್ರವಾಸಿಗರ ಶೂ ಲೇಸ್ ಕಟ್ಟುವ ನೆಪದಲ್ಲಿ ಅಥವಾ ಏನಾದರೂ ಹೆಕ್ಕುವ ನೆಪದಲ್ಲಿ ಕೆಳಗೆ ಬಗ್ಗಿ ಮೊಬೈಲ್​ನಿಂದ ಆ ಯುವತಿಯ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ. ಗಿಡ್ಡ ಉಡುಗೆ ಹಾಕಿಕೊಳ್ಳುವ ಯುವತಿಯರೇ ಈತನ ಟಾರ್ಗೆಟ್ ಆಗಿದ್ದರು. ಈ ವಿಷಯ ಆ ಯುವತಿಯರಿಗೆ ಗೊತ್ತಾಗದಂತೆ ಎಚ್ಚರ ವಹಿಸುತ್ತಿದ್ದ.

ಆದರೆ, ಈ ಬಗ್ಗೆ ಬೇರೆಯವರಿಂದ ಮಾಹಿತಿ ಸಿಕ್ಕಿದ್ದರಿಂದ ಅಂಬರ್ ಕೋಟೆಗೆ ಮಾಮೂಲಿ ಸೀರೆಯುಟ್ಟು ಹೋಗಿದ್ದ ಮಹಿಳಾ ಪೊಲೀಸ್ ಸುರೇಶ್​ನ ಮೊಬೈಲ್ ಚೆಕ್ ಮಾಡಿದ್ದಳು. ಆಗ ಆತನ ಮೊಬೈಲ್​ನಲ್ಲಿ 200ಕ್ಕೂ ಹೆಚ್ಚು ವಿಡಿಯೋಗಳಿರುವುದು ಪತ್ತೆಯಾಗಿತ್ತು. ಆತನ ಚಲನವಲನಗಳನ್ನು ವೀಕ್ಷಿಸುತ್ತಿದ್ದ ಆ ಪೊಲೀಸ್​ ಅನುಮಾನಗೊಂಡು ಆತನ ಮೊಬೈಲ್ ಪರಿಶೀಲಿಸಿದ್ದರು.

ಪ್ರವಾಸಿ ತಾಣಗಳಾದ ದೇವಸ್ಥಾನಗಳು, ಟ್ರೆಕಿಂಗ್ ತಾಣಗಳು, ಪ್ರವಾಸಿ ಸ್ಥಳಗಳಲ್ಲಿಯೇ ಆ ವಿಡಿಯೋಗಳನ್ನು ಚಿತ್ರೀಕರಿಸಲಾಗಿದ್ದು, ಪ್ರವಾಸಿ ಯುವತಿಯರ ವಿಡಿಯೋಗಳಿರುವ ಮೊಬೈಲನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಈ ರೀತಿಯ ವಿಡಿಯೋಗಳನ್ನು ಚಿತ್ರೀಕರಿಸಲೆಂದೇ ತಾನು 3 ತಿಂಗಳಿನಿಂದ ಆಗಾಗ ಜೈಪುರಕ್ಕೆ ಬರುತ್ತಿದ್ದುದಾಗಿ ಆತ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: Crime News: ಪ್ರೀತಿಗಾಗಿ ಗೆಳೆಯನ ತಲೆಯನ್ನೇ ಕತ್ತರಿಸಿದ 17 ವರ್ಷದ ಯುವಕ; ತ್ರಿಕೋನ ಪ್ರೇಮಕತೆಯ ದುರಂತ ಅಂತ್ಯ

Viral News: ಕೆಟ್ಟ ಕೈ ಬರಹವೇ ಶಾಪವಾಯ್ತು; ಬ್ಯಾಂಕ್​ ದರೋಡೆಗೆ ಹೋದವನು ಬರಿಗೈಯಲ್ಲಿ ಬಂದ!

(Crime News: Rajasthan Police arrested man making obscene videos of tourists in Tourist Places)