ದ್ರೌಪದಿ ಮುರ್ಮು ಪರ 17 ಸಂಸದರಿಂದ ಕ್ರಾಸ್ ವೋಟಿಂಗ್! ನೂತನ ರಾಷ್ಟ್ರಪತಿಗೆ ಅಭಿನಂದನೆಗಳ ಮಹಾಪೂರ

| Updated By: ಸಾಧು ಶ್ರೀನಾಥ್​

Updated on: Jul 21, 2022 | 9:17 PM

Cross voting: ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಪರ ಕ್ರಾಸ್ ವೋಟಿಂಗ್​ ನಡೆದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಖಚಿತವಾದ ಕ್ರಾಸ್​ ವೋಟಿಂಗ್​ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪರ ವಿರೋಧ ಪಕ್ಷದವರಿಂದ ಅಡ್ಡ ಮತದಾನವಾಗಿದೆ.

ದ್ರೌಪದಿ ಮುರ್ಮು ಪರ 17 ಸಂಸದರಿಂದ ಕ್ರಾಸ್ ವೋಟಿಂಗ್! ನೂತನ ರಾಷ್ಟ್ರಪತಿಗೆ ಅಭಿನಂದನೆಗಳ ಮಹಾಪೂರ
ದ್ರೌಪದಿ ಮುರ್ಮು ಪರ 17 ಸಂಸದರಿಂದ ಕ್ರಾಸ್ ವೋಟಿಂಗ್! ನೂತನ ರಾಷ್ಟ್ರಪತಿಗೆ ಅಭಿನಂದನೆಗಳ ಮಹಾಪೂರ
Follow us on

ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಹುದ್ದೆಗೇರಿದ ಪ್ರಥಮ ಆದಿವಾಸಿ ಮಹಿಳೆ ದ್ರೌಪದಿ ಅವರಾಗಿದ್ದಾರೆ. ಆಡಳಿತಾರೂಢ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ (draupadi murmu) 5,121 ಮತಗಳು (ದ್ರೌಪದಿ ಮುರ್ಮು ಪಡೆದ ಮತಗಳ ಮೌಲ್ಯ 5,77,777) ಮತ್ತು ಪ್ರಮುಖ ಪ್ರತಿಸ್ಪರ್ಧಿ, ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾಗೆ 1,058 ಮತಗಳು (ಯಶವಂತ್ ಸಿನ್ಹಾ ಪಡೆದ ಮತಗಳ ಮೌಲ್ಯ 2,61,062) ದಕ್ಕಿವೆ. ಇನ್ನು ಭಾರತದ 15ನೇ ರಾಷ್ಟ್ರಪತಿಯಾಗಿ ( 15th president of india) ದ್ರೌಪದಿ ಮುರ್ಮು ಆಯ್ಕೆಯಾಗುತ್ತಿದ್ದಂತೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ದ್ರೌಪದಿ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ಹೂಗುಚ್ಛ ನೀಡಿ, ಸಿಹಿ ತಿನ್ನಿಸಿದ ಬಿಜೆಪಿ ಅಧ್ಯಕ್ಷ ನಡ್ಡಾ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಸಹ ಅಭಿನಂದಿಸಿದ್ದಾರೆ. ಕರ್ನಾಟಕದಲ್ಲಿಯೂ ಆಡಳಿತಾರೂಢ ಪಕ್ಷದ ಸದಸ್ಯರು ದ್ರೌಪದಿ ಮುರ್ಮು ಜಯವನ್ನು ಸ್ವಾಗತಿಸಿ, ಸಂಭ್ರಮಪಟ್ಟಿದ್ದಾರೆ.

ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿನಂದಿಸಿದ್ದಾರೆ. ದೆಹಲಿಯಲ್ಲಿರುವ ದ್ರೌಪದಿ ಅವರ ನಿವಾಸಕ್ಕೆ ತೆರಳಿ, ದ್ರೌಪದಿ ಮುರ್ಮುಗೆ ಹೂಗುಚ್ಛ ನೀಡಿ, ಸಿಹಿ ತಿನ್ನಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್:

ಭಾರತದದಲ್ಲಿ ಹೊಸ ಇತಿಹಾಸ. 1.3 ಶತಕೋಟಿ ಭಾರತೀಯರು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಮಯದಲ್ಲಿ ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮಗಳು ನಮ್ಮ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ!

ಈ ಸಾಧನೆ ಮಾಡಿರುವ ಶ್ರೀಮತಿ ದ್ರೌಪದಿ ಮುರ್ಮು ಜಿ ಅವರಿಗೆ ಅಭಿನಂದನೆಗಳು.

ರಾಷ್ಟ್ರಪತಿ ಚುನಾವಣೆ ಪರಾಜಿತ ಅಭ್ಯರ್ಥಿ ಯಶವಂತ್ ಸಿನ್ಹಾ ಟ್ವೀಟ್

2022 ರ ರಾಷ್ಟ್ರಪತಿ ಚುನಾವಣೆಯಲ್ಲಿ ಶ್ರೀಮತಿ ದ್ರೌಪದಿ ಮುರ್ಮು ಅವರ ವಿಜಯವನ್ನು ನಾನೂ ನನ್ನ ಸಹ ನಾಗರಿಕರೊಂದಿಗೆ ಒಗ್ಗೂಡಿ ಅಭಿನಂದಿಸುತ್ತೇನೆ. ಗಣರಾಜ್ಯದ 15 ನೇ ಅಧ್ಯಕ್ಷೆಯಾಗಿ ಅವರು ಸಂವಿಧಾನದ ಪಾಲಕರಾಗಿರುತ್ತಾರೆ ಎಂದು ಇಡೀ ಭಾರತ ಆಶಿಸುತ್ತದೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.

ಪ್ರಥಮ ಬುಡಕಟ್ಟು ಮಹಿಳಾ ರಾಷ್ಟ್ರಪತಿಯನ್ನು ಚುನಾಯಿಸಿದ ಭಾರತ:

ಸಾಮಾನ್ಯ ಹಿನ್ನೆಲೆಯಿಂದ ಬಂದು ಇಂದು ರಾಷ್ಟ್ರದ ಉನ್ನತ ಹುದ್ದೆಯನ್ನು ಅಲಂಕರಿಸುತ್ತಿರುವ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾರತದ ವೈವಿಧ್ಯತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿದ್ದಾರೆ. ಭಾರತದ ಪ್ರಥಮ ಪ್ರಜೆಯಾಗಿ ಆಯ್ಕೆಗೊಂಡ ಅವರಿಗೆ ಹಾರ್ದಿಕ ಶುಭಾಶಯಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಪರ ಕ್ರಾಸ್ ವೋಟಿಂಗ್:
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಪರ ಕ್ರಾಸ್ ವೋಟಿಂಗ್​ (Cross voting) ನಡೆದಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಖಚಿತವಾದ ಕ್ರಾಸ್​ ವೋಟಿಂಗ್​ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪರ ವಿರೋಧ ಪಕ್ಷದವರಿಂದ ಅಡ್ಡ ಮತದಾನವಾಗಿದೆ. ಬಿಜೆಪಿ ಲೆಕ್ಕಾಚಾರದ ಪ್ರಕಾರ ದ್ರೌಪದಿಗೆ 523 ಮತ ಬರಬೇಕಿತ್ತು. ಆದರೆ ದ್ರೌಪದಿ ಮುರ್ಮುಗೆ 540 ಸಂಸದರ ಮತಗಳು ಸಿಕ್ಕಿವೆ. ಹೀಗಾಗಿ ವಿಪಕ್ಷದ 17 ಸಂಸದರಿಂದ ಕ್ರಾಸ್ ವೋಟಿಂಗ್ ಆಗಿರುವುದು ದೃಢವಾಗಿದೆ.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ:
ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಅಧಿಕೃತವಾಗಿ ಪ್ರಕಟವಾಗುವ ಸಮಯ ಸಮೀಪಿಸುತ್ತಿದ್ದಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮುಗಿಲುಮುಟ್ಟಿತ್ತು. ಸಂಭ್ರಮಾಚರಣೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಬಿ.ಸಿ.ನಾಗೇಶ್, ಸೋಮಶೇಖರ್, ವಿ.ಸುನಿಲ್ ಕುಮಾರ್​, ಶಾಸಕ ಭರತ್​ ಶೆಟ್ಟಿ ಸೇರಿದಂತೆ ಹಲವರು ಸಂಭ್ರಮಾಚರಣೆಯಲ್ಲಿ ಭಾಗಿಯಾದರು.

ಸಿಎಂ ಬೊಮ್ಮಾಯಿ ಟ್ವೀಟ್:
ದ್ರೌಪದಿ ಮುರ್ಮು ನಾಮಪತ್ರದ ಸೂಚಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ:
ಇಂದು ಪ್ರಜಾಪ್ರಭುತ್ವ ಗೆದ್ದಿದೆ. ಇದು ಪ್ರಜಾಪ್ರಭುತ್ವದ ಶಕ್ತಿ. ಇದಕ್ಕೆ ಕಾರಣ ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಯ. ಮುರ್ಮು ಆಯ್ಕೆ ಮಾಡಲು ಎಲ್ಲರೂ ಒಂದಾಗಿರುವುದಕ್ಕೆ ಕಾರಣ ಅವರ ವ್ಯಕ್ತಿತ್ವ ಎಂದು ವರ್ಣಿಸಿದ್ದಾರೆ.

ಈ ನೂತನ ಹುದ್ದೆಯಲ್ಲಿ ಅವರಿಗೆ ಸಕಲ ಯಶಸ್ಸು ಕೋರಿ, ಅವರ ಅನುಭವ ಸಂಪತ್ತು, ಮುತ್ಸದ್ಧಿತನದ ಪ್ರಯೋಜನ ದೇಶಕ್ಕೆ ದೊರಕುವಂತಾಗಲಿ ಎಂದು ಆಶಿಸುತ್ತೇನೆ.
ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಆಯ್ಕೆಯಾಗಿ ಹೊಸ ದಾಖಲೆ ಬರೆದ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಹಾರ್ದಿಕ ಅಭಿನಂದನೆಗಳು. ಸಮಾಜದ ಕೆಳಸ್ತರದಿಂದ ಬಂದು ರಾಷ್ಟ್ರದ ಪರಮೋನ್ನತ ಹುದ್ದೆಯನ್ನು ಅವರು ಅಲಂಕರಿಸುತ್ತಿರುವುದು ನಮ್ಮ ಪ್ರಜಾಪ್ರಭುತ್ವದ ಯಶಸ್ಸಿನ ಸಂಕೇತ.

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್:

ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮುಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟರ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ: ಭಾರತ ಗಣರಾಜ್ಯದ 15ನೇ ರಾಷ್ಟ್ರಪತಿಗಳಾಗಿ ಆಯ್ಕೆಯಾಗಿರುವ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಬುಡಕಟ್ಟು ಮಹಿಳೆಯೊಬ್ಬರು ದೇಶದ ಅತ್ಯುನ್ನತ ಸ್ಥಾನ ಅಲಂಕರಿಸುತ್ತಿರುವುದು ಐತಿಹಾಸಿಕ ಎಂದಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿ ಅಭಿನಂದನೆ ಸಲ್ಲಸಿದ್ದಾರೆ:

Published On - 8:30 pm, Thu, 21 July 22