ಬಿಜೆಡಿ ಶಾಸಕಿಯ ಎರಡು ಮನೆಗಳ ಮೇಲೆ ಕಚ್ಚಾ ಬಾಂಬ್​ ದಾಳಿ; ನಾಲ್ವರಿಗೆ ಗಾಯ

Odisha: ಗುರುವಾರ ಕಚ್ಚಾಬಾಂಬ್​ ದಾಳಿ ಮಾಡಲಾಗಿದ್ದು, ಘಟನೆಯಲ್ಲಿ ಪಕ್ಷದ ನಾಲ್ವರು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಿಜೆಡಿ ಶಾಸಕಿಯ ಎರಡು ಮನೆಗಳ ಮೇಲೆ ಕಚ್ಚಾ ಬಾಂಬ್​ ದಾಳಿ; ನಾಲ್ವರಿಗೆ ಗಾಯ
ಶಾಸಕಿಯ ಮನೆಯೆದುರು ಕಚ್ಚಾ ಬಾಂಬ್​ ದಾಳಿ
Edited By:

Updated on: Aug 06, 2021 | 9:16 AM

ಒಡಿಶಾದ ಆಡಳಿತ ಪಕ್ಷ ಬಿಜೆಡಿ ಶಾಸಕಿ (BJD MLA) ಸೂರ್ಯಮಣಿ ಬೈದ್ಯಾ(Suryamani Baidya) ಅವರ ಎರಡು ನಿವಾಸಗಳ ಮೇಲೆ ಕಚ್ಚಾ ಬಾಂಬ್​ (Crude Bombs) ಎಸೆಯಲಾಗಿದೆ. ಗಂಜಮ್​ ಜಿಲ್ಲೆಯಲ್ಲಿರುವ ಎರಡು ಮನೆಗಳ ಮೇಲೆ ಗುರುವಾರ ಕಚ್ಚಾಬಾಂಬ್​ ದಾಳಿ ಮಾಡಲಾಗಿದ್ದು, ಘಟನೆಯಲ್ಲಿ ಪಕ್ಷದ ನಾಲ್ವರು ಬೆಂಬಲಿಗರು ಗಾಯಗೊಂಡಿದ್ದಾರೆ ಎಂದು ಪೊಲೀಸರು(Odisha Police) ಹೇಳಿದ್ದಾರೆ. ಸೂರ್ಯಮಣಿ ಬೈದ್ಯಾ ಖಲಿಕೋಟೆ ಕ್ಷೇತ್ರದ ಶಾಸಕಿಯಾಗಿದ್ದು, ಘಟನೆ ನಡೆಯುವ ವೇಳೆ ಅವರು ಎರಡೂ ಮನೆಗಳಲ್ಲಿ ಇರಲಿಲ್ಲ. ಹಾಗಾಗಿ ಅಪಾಯದಿಂದ ಪಾರಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಸಕಿಯ ಕೇಶಾಪುರ ಗ್ರಾಮದಲ್ಲಿರುವ ಪಾಟನಾ ಸಹಿ ಮನೆ ಮತ್ತು ನಿರ್ಮಲ್​ ಜಿಹಾರ್​ನಲ್ಲಿರುವ ಬಾಡಿಗೆ ಮನೆ ಎರಡರ ಮೇಲೆಯೂ ಕಚ್ಚಾಬಾಂಬ್​ ದಾಳಿಯಾಗಿದೆ. ಈ ಸಮಯದಲ್ಲಿ ಶಾಸಕಿ ಪಕ್ಷದ ಸಭೆಗಾಗಿ ಬರ್ಹಾಪುರಕ್ಕೆ ತೆರಳಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ನಿರ್ಮಲ್​ಜಿಹಾರ್​ನಲ್ಲಿರುವ ಮನೆಗೆ ಕೂಡಲೇ ತೆರಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ಕೇಳುತ್ತಿದ್ದಂತೆ ಪೊಲೀಸರು ಎರಡೂ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಾಗೇ, ಸುತ್ತಮುತ್ತಲಿನವರನ್ನು ವಿಚಾರಣೆ ನಡೆಸಿದ್ದಾರೆ. ರಾಜಕೀಯ ವೈರಿಗಳ್ಯಾರೋ ಈ ರೀತಿ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಎರಡೂ ಪ್ರದೇಶಗಳನ್ನೂ ಪೊಲೀಸರು ನಿಯಂತ್ರಣಕ್ಕೆ ಪಡೆದಿದ್ದಾರೆ. ಸದ್ಯಕ್ಕಂತೂ ಯಾರನ್ನೂ ಬಂಧಿಸಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕಿಗೆ ಸೇರಿದ ಆಸ್ತಿ, ಎರಡು ಮೋಟರ್​ಬೈಕ್​ಗೆ ಹಾನಿಯುಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ದೇವರು ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಇದು: ವಿಡಿಯೋ ನೋಡಿ

ಮಳೆ-ಪ್ರವಾಹದಿಂದ ಪಶ್ಚಿಮ ಬಂಗಾಳದಲ್ಲಿ 23 ಜನರು ಸಾವು; ಡಿವಿಸಿ ವಿರುದ್ಧ ಪ್ರಧಾನಿಗೆ ದೂರು ನೀಡಿದ ಮಮತಾ ಬ್ಯಾನರ್ಜಿ

Crude Bombs attack on Two houses of BJD MLA In Odisha

Published On - 9:08 am, Fri, 6 August 21