ಅಪಾಯಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ; ಮನೆ, ಗುಡಿಸಲುಗಳಿಗೆಲ್ಲ ನೀರು

ಅಪಾಯಮಟ್ಟ ಮೀರಿ ಹರಿಯುತ್ತಿರುವ ಯಮುನಾ ನದಿ; ಮನೆ, ಗುಡಿಸಲುಗಳಿಗೆಲ್ಲ ನೀರು
ಜನರನ್ನು ರಕ್ಷಿಸುತ್ತಿರುವ ದೃಶ್ಯ (ಚಿತ್ರ-ಪಿಟಿಐಓ

Yamuna River: ಯಮುನಾ ಮತ್ತು ಚಂಬಲ್​ ನದಿಗಳು ತುಂಬಿ ಹರಿಯುತ್ತಿದ್ದು, ಕೆಳಪಾತ್ರದ ಜನರೀಗ ಅಪಾಯದಲ್ಲಿದ್ದಾರೆ. ಮನೆಗಳಿಗೆ ನೀರು ನುಗ್ಗುತ್ತಿರುವ ಕಾರಣ, ಅಲ್ಲಿಂದ ಅವರನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗುತ್ತಿದೆ.

TV9kannada Web Team

| Edited By: Lakshmi Hegde

Aug 06, 2021 | 10:17 AM

ಹಮೀರ್​ಪುರ: ಯಮುನಾ ನದಿ (Yamuna River) ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನದಿಯ ಕೆಳ ಪಾತ್ರದಲ್ಲಿರುವ ಜನರೆಲ್ಲ ಅಲ್ಲಿಂದ ಬೇರೆಡೆಗೆ ಹೋಗುವಂತೆ, ಹಿಮಾಚಲ ಪ್ರದೇಶದ ಹಮೀರ್​ಪುರ ಜಿಲ್ಲಾಡಳಿತ (Hamirpur District Administration) ಸೂಚನೆ ನೀಡಿದೆ. ಚಂಬಲ್​​ ನದಿಗೆ (Chambal River) ನೀರು ಜಾಸ್ತಿ ಹರಿಬಿಟ್ಟ ಪರಿಣಾಮ ಯಮುನಾ ನದಿಯಲ್ಲೂ ನೀರಿನ ಮಟ್ಟ ಏರಿದೆ. ಈಗಾಗಲೇ ನದಿ ನೀರು ಕೆಳಪಾತ್ರದಲ್ಲಿರುವ ಮನೆಗಳು, ಗುಡಿಸಲುಗಳಿಗೆ ನುಗ್ಗುತ್ತಿದ್ದು, ಜಿಲ್ಲಾಡಳಿತದಿಂದಲೇ ಜನರನ್ನು ಸಾಮೂಹಿಕವಾಗಿ ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ. ಹಾಗೇ, ಇನ್ನೂ ಕೆಲವು ಮನೆಗಳಿಗೆ ಅಪಾಯ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಸದ್ಯ ಯಮುನಾ ನದಿಯ ಕೆಳಪಾತ್ರದಲ್ಲಿರುವ 10 ಹಳ್ಳಿಗಳಿಂದ ಜನರನ್ನ ಬೇರೆಡೆಗೆ ಸ್ಥಳಾಂತರ ಮಾಡುವ ಕೆಲಸ ಭರದಿಂದ ಸಾಗುತ್ತಿದೆ. ಧೌಲ್​ಪುರ ಬ್ಯಾರೇಜ್​​ನಿಂದ ಅತ್ಯಂತ ಹೆಚ್ಚಿನ ನೀರು ಹರಿಯುತ್ತಿರುವುದರಿಂದಲೂ ಯಮುನಾ ನದಿ ಮಟ್ಟ ಏರುತ್ತಿದೆ. ನೀರಿನ ಮಟ್ಟ ಪ್ರತಿ ಗಂಟೆಗೆ 65 ಸಿಎಂ ಏರಿಕೆಯಾಗುತ್ತಿದೆ. ಇದೇ ಪ್ರಮಾಣದಲ್ಲಿ ಹೋದರೆ, ಸ್ಥಳೀಯ ನಿವಾಸಿಗಳಿಗೆ ತುಂಬ ಅಪಾಯವಾಗಲಿದೆ ಎಂದು ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ.

ಚಂಬಲ್​ ನದಿಗೆ 18 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಇನ್ನು ಚಂಬಲ್​ ನದಿಗೆ ಸುಮಾರು ಅಣೆಕಟ್ಟುಗಳಿಂದ 18 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಯಮುನಾ ನದಿಯಲ್ಲಿ ಅಗಸ್ಟ್​ 7ರ ಹೊತ್ತಿಗೆ ಭರ್ಜರಿ ನೀರು ಹರಿಯಲಿದೆ. ಸದ್ಯ ಯಮುನಾ ನದಿ ಉತ್ತರ ಪ್ರದೇಶದ ಇಟವಾ, ಔರಾಯ, ಜಲೌನ್ ಮತ್ತು ಹಮೀರ್‌ಪುರ ಜಿಲ್ಲೆಗಳಲ್ಲಿ ಯಮುನಾ ನದಿ ಅಪಾಯಮಟ್ಟವನ್ನೂ ಮೀರಿ ಹರಿಯುತ್ತಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Corona Vaccine Shortage: ಕೊವಿಡ್ ಲಸಿಕೆ ಸಿಗದೆ ರೊಚ್ಚಿಗೆದ್ದ ಸಾರ್ವಜನಿಕರು, ಹಾಸನ ಡಿಸಿ ಮನೆಗೆ ಮುತ್ತಿಗೆ

ಸಹೋದರನೊಂದಿಗೆ ವ್ಯಾಯಾಮ ಮಾಡುತ್ತಿದ್ದ ಯುವತಿ 10ನೇ ಮಹಡಿಯಿಂದ ನೆಲಕ್ಕೆ ಜಾರಿಬಿದ್ದು ಸಾವು

Yamuna River flows above danger mark after release water into Chambal

Follow us on

Most Read Stories

Click on your DTH Provider to Add TV9 Kannada