ದೆಹಲಿ: ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (NCRB) ಮಾಹಿತಿಯ ಪ್ರಕಾರ, 2020 ರಲ್ಲಿ ಭಾರತವು ಸೈಬರ್ ಅಪರಾಧದಲ್ಲಿ ಶೇಕಡಾ 11 ರಷ್ಟು ಜಿಗಿತವನ್ನು ವರದಿ ಮಾಡಿದೆ. ರಾಜ್ಯ ಮತ್ತು ಯುಟಿಗಳಲ್ಲಿ ಸೈಬರ್ ಅಪರಾಧಗಳ(Cyber Crime) ಡೇಟಾ 2017 ರಲ್ಲಿ 21,796 ರಷ್ಟು, 2018 ರಲ್ಲಿ 27,248 ಪ್ರಕರಣಗಳು, 2019 ರಲ್ಲಿ 44735 ಪ್ರಕರಣಗಳು ಮತ್ತು 2020 ರಲ್ಲಿ 50035 ರಷ್ಟು ದಾಖಲಾಗಿವೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಸಮಿತಿಗೆ ತಿಳಿಸಿದೆ.
2020 ರಲ್ಲಿ ಒಟ್ಟು 50,035 ಪ್ರಕರಣಗಳು ಸೈಬರ್ ಅಪರಾಧಗಳ ಅಡಿಯಲ್ಲಿ ದಾಖಲಾಗಿವೆ. ಅದರಲ್ಲಿ 2019 ಕ್ಕಿಂತ (44,735 ಪ್ರಕರಣಗಳು) ಶೇಕಡಾ 11.8 ರಷ್ಟು ಪ್ರಕರಣಗಳು ಹೆಚ್ಚಾಗಿದೆ. ಲೈಂಗಿಕ ಶೋಷಣೆ ಶೇಕಡಾ 6.6 ( 3,293 ಪ್ರಕರಣಗಳು) ಮತ್ತು ಸುಲಿಗೆ 4.9 ಪ್ರತಿಶತದಷ್ಟು (2,440 ಪ್ರಕರಣಗಳು) ದಾಖಲಾಗಿದೆ.
ಸೈಬರ್ ಅಪರಾಧಗಳ ಹೆಚ್ಚಳಕ್ಕೆ ಪ್ರಮುಖ ಕಾರಣ ಅಪರಾಧಿಗಳು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಂಡಿರುವುದೇ ಆಗಿದೆ. ಸದ್ಯ ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದಕ್ಕೆ ಎಂಎಚ್‌ಎ ಸಮಿತಿಯು ತೀವ್ರ ಕಳವಳ ವ್ಯಕ್ತಪಡಿಸಿದೆ.
ಎಂಎಚ್‌ಎ ಸಮಿತಿಯು ಪೊಲೀಸರಿಗೆ ಸಲ್ಲಿಸಿದ ವರದಿಯ ಪ್ರಕಾರ, ಪಂಜಾಬ್, ರಾಜಸ್ಥಾನ, ಗೋವಾ, ಅಸ್ಸಾಂನಂತಹ ಕೆಲವು ರಾಜ್ಯಗಳು ಒಂದೇ ಸೈಬರ್ ಪೊಲೀಸ್ ಠಾಣೆಯನ್ನು ಹೊಂದಿದೆ. ಇನ್ನೂ ಆಂಧ್ರಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶದಲ್ಲಿ ಕೇವಲ ಒಂದು ಅಥವಾ ಎರಡು ಸೈಬರ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿರುವುದೇ ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ. ಹೀಗಾಗಿ ಜಿಲ್ಲೆಗಳಲ್ಲಿ ಸೈಬರ್ ಠಾಣೆಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಎಂಹೆಚ್ಎ ಸಲಹೆ ನೀಡಿದೆ.
ರಾಜ್ಯಗಳು ಸೈಬರ್ ಕ್ರೈಮ್ ಹಾಟ್‌ಸ್ಪಾಟ್‌ಗಳನ್ನು ಮೊದಲು ಗುರುತಿಸಬೇಕು. ಈ ಕ್ರಮವು ಅಪರಾಧಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಎಂಎಚ್‌ಎ ಸಮಿತಿ ತಿಳಿಸಿದೆ.
ಸಾಂಪ್ರದಾಯಿಕ ಪೊಲೀಸ್ ನೇಮಕಾತಿಗಳೊಂದಿಗೆ ವಿವಿಧ ರೀತಿಯ ಸೈಬರ್ ಅನ್ನು ನಿಭಾಯಿಸಲು ಡಾರ್ಕ್ ವೆಬ್ ಮಾನಿಟರಿಂಗ್ ಠಾಣೆಗಳನ್ನು ಸ್ಥಾಪಿಸಬೇಕು. ಜತೆಗೆ ತಾಂತ್ರಿಕ ತಜ್ಞರನ್ನು ಪೊಲೀಸ್ ಪಡೆಗೆ ಸೇರಿಸುವ ಅವಶ್ಯಕತೆಯಿದೆ ಮತ್ತು ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆಗಾಗಿ ಪೊಲೀಸ್ ಠಾಣೆಗಳನ್ನು ಸ್ಥಾಪಿಸಬೇಕು ಎಂದು ಸಮಿತಿಯು ಶಿಫಾರಸು ಮಾಡುತ್ತದೆ.
ಆನಂದ್ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಸ್ಥಾಯಿ ಸಮಿತಿ ನಿನ್ನೆ (ಫೆಬ್ರವರಿ 11, ಗುರುವಾರ) ಪೊಲೀಸ್-ತರಬೇತಿ, ಆಧುನೀಕರಣ ಮತ್ತು ಸುಧಾರಣೆಗಳ ಕುರಿತು ವಿವರವಾದ ವರದಿಯನ್ನು ಸಲ್ಲಿಸಿದೆ ಎಂದು ಎಎನ್ಐ ವರದಿ ಮಾಡಿದೆ.
ಇದನ್ನೂ ಓದಿ:
ಅಪರಾಧ ಸುದ್ದಿಗಳು: ಮಹದೇವಪುರದಲ್ಲಿ ಕೆಲಸ ಮಾಡುತಿದ್ದ ಕಚೇರಿಯಲ್ಲಿ ಯುವತಿ ನೇಣಿಗೆ ಶರಣು