ಅಪರಾಧ ಸುದ್ದಿಗಳು: ಮಹದೇವಪುರದಲ್ಲಿ ಕೆಲಸ ಮಾಡುತಿದ್ದ ಕಚೇರಿಯಲ್ಲಿ ಯುವತಿ ನೇಣಿಗೆ ಶರಣು
ಮೃತ ಮಿನಾಕ್ಷಿ ಟೈಲ್ಸ್ ಅಂಗಡಿಯ ಕಚೇರಿಯಲ್ಲಿ ಕೆಲಸ ಮಾಡುತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಯಾರು ಕಾರಣ ಅಲ್ಲ ಎಂದು ಉಲ್ಲೇಖಿಸಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ತಾನು ಕೆಲಸ ಮಾಡುತಿದ್ದ ಕಚೇರಿಯಲ್ಲಿ ಮೀನಾಕ್ಷಿ (21) ಎಂಬ ಯುವತಿಯೊಬ್ಬರು ಗುರುವಾರ ರಾತ್ರಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎ ನಾರಾಯಣಪುರದ ಟೈಲ್ಸ್ ಅಂಗಡಿ ಕಚೇರಿಯಲ್ಲಿ ಘಟನೆ ನಡೆದಿದೆ. ಮೃತ ಮಿನಾಕ್ಷಿ ಟೈಲ್ಸ್ ಅಂಗಡಿಯ ಕಚೇರಿಯಲ್ಲಿ ಕೆಲಸ ಮಾಡುತಿದ್ದರು. ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ಯಾರು ಕಾರಣ ಅಲ್ಲ ಎಂದು ಉಲ್ಲೇಖಿಸಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಆದರೆ ಮೃತ ಯುವತಿಯ ಕುಟುಂಬಸ್ಥರು ಟೈಲ್ಸ್ ಅಂಗಡಿಯವರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಉಪವಿಭಾಗಾಧಿಕಾರಿ ಕಚೇರಿಯ ಗುಮಾಸ್ತ ನೇಣಿಗೆ ಶರಣು: ಕಾರವಾರ: ಸರಕಾರಿ ಉದ್ಯೋಗಿಯೊಬ್ಬರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರವಾರ ನಗರದ ಪ್ರೀಮಿಯರ್ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಈಶ್ವರ ಭಟ್ (38) ಆತ್ಮಹತ್ಯೆ ಮಾಡಿಕೊಂಡ ಸರಕಾರಿ ಉದ್ಯೋಗಿ. ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆನೆ ಎಂದು ಅವರು ಡೆತ್ ನೋಟ್ ಬರೆದಿಟ್ಟಿದ್ದಾರೆ. ನಾನು ನಿಮಗಾಗಿ ಏನೂ ಆಸ್ತಿ ಮಾಡಿಲ್ಲ, ಮಕ್ಕಳನ್ನ ಚೆನ್ನಾಗಿ ನೋಡಿಕೊ, ನನ್ನನ್ನ ಕ್ಷಮಿಸು ಎಂದು ಡೆತ್ ನೋಟ್ ನಲ್ಲಿ ತಿಳಿಸಿದ್ದಾರೆ. ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೂರ್ಯ ಸಿಟಿ ಬಳಿ ಮೃತ ದೇಹ ಪತ್ತೆ ಪ್ರಕರಣ: ಸೂರ್ಯ ಸಿಟಿಯಲ್ಲಿ ಕೆರೆಯ ಬಳಿ ಮೃತ ದೇಹ ಪತ್ತೆ ಪ್ರಕರಣದಲ್ಲಿ ವಿಚಾರಣೆಯ ವೇಳೆ ಅದು ಆತ್ಮಹತ್ಯೆ ಅಲ್ಲ; ಕೊಲೆ ಎಂಬುದು ಬಯಲಿಗೆ ಬಂದಿದೆ. ಪರಪ್ಪನ ಅಗ್ರಹಾರದಿಂದ ಅರೋಪಿಯ ಕಿಡ್ನಾಪ್ ಮಾಡಲಾಗಿತ್ತು. ಸಂಭಂದಿಕರಿಂದಲೇ ಆತನನ್ನು ಕೊಲೆ ಮಾಡಲಾಗಿದೆ. ಮೂಲತಃ ಅಂಧ್ರದವರಾಗಿದ್ದು, ಆಸ್ತಿ ವಿಚಾರಕ್ಕೆ ದ್ವೇಷ ಬೆಳೆದಿತ್ತು ಎಂದು ತಿಳಿದುಬಂದಿದೆ. ಹುಡುಗಿ ವಿಚಾರವಾಗಿ ಮಾತನಾಡಲು ಎಂದು ಕಾರಿನಲ್ಲಿ ಹತ್ತಿಸಿಕೊಂಡಿದ್ರು. ನಂತ್ರ ಅಲ್ಲಿ ಬೆಲ್ಟ್ ನಿಂದ ಗುತ್ತಿಗೆ ಬಿಗಿದು ಕೊಲೆ ಮಾಡಿ, ಕೆರೆ ಹತ್ತಿರ ಎಸೆದುಹೋಗಿದ್ದಾರೆ.
ಮಗಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದರಹಳ್ಳಿಯಲ್ಲಿ ತಾಯಿಯೊಬ್ಬರು ಮಗಳ ಜೊತೆ ತಮ್ಮ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯಾ(32) ಮತ್ತು ತನ್ವಿ(4) ಸಾವಿಗೀಡಾದವರು. ರಿಪ್ಪನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಎರಡೂ ಮೃತದೇಹ ಹೊರತೆಗೆದಿದ್ದಾರೆ. ಆತ್ಮಹತ್ಯೆಗೆ ಕೌಟುಂಬಿಕ ಕಲಹ ಶಂಕೆ ವ್ಯಕ್ತಪಡಿಸಲಾಗಿದೆ.
ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು; ಪತ್ನಿ ಸ್ಥಳದಲ್ಲೇ ಜಲಸಮಾಧಿ
ಶಿವಮೊಗ್ಗ: ಹಾವು ತಪ್ಪಿಸಲು ಹೋಗಿ ಕಾರೊಂದು ತುಂಗಾ ನಾಲೆಗೆ ಬಿದ್ದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಬಳಿ ನಡೆದಿದೆ. ಖೇದಕರ ಸಂಗತಿಯೆಂದರೆ ಈ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿಯ ಪೈಕಿ ಪತ್ನಿ ಸುಷ್ಮಾ (28) ಸಾವನ್ನಪ್ಪಿದ್ದು, ಕಾರ್ ಚಲಾಯಿಸುತ್ತಿದ್ದ ಪತಿ ಚೇತನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತುಂಗಾ ಚಾನಲ್ ಗೆ ಬಿದ್ದು ಒಂದು ಘಂಟೆ ಬಳಿಕ ಸ್ಥಳೀಯರ ಸಹಾಯದಿಂದ ಪತಿ ಚೇತನ್ ನೀರಿಂದ ಹೊರಬಂದಿದ್ದಾರೆ. ಈ ನಡುವೆ ಕಾರು ನೀರಿನಲ್ಲಿ ಮುಳುಗಿದ ಹಿನ್ನೆಲೆ ಪತ್ನಿ ಸ್ಥಳದಲ್ಲೇ ಜಲಸಮಾಧಿಯಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ನೋಡಲು ತುಮಕೂರಿಗೆ ತೆರಳುವ ವೇಳೆ ಇಂದು ಗುರುವಾರ ಬೆಳಗಿನ ಜಾವ ದುರ್ಘಟನೆ ನಡೆದಿದೆ. ಸುಷ್ಮಾ ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಕೆಲಸ ಮಾಡುತ್ತಿದ್ದರು.
Also Read: Brahma Muhurta: ಬ್ರಾಹ್ಮೀ ಮುಹೂರ್ತ ಅಂದ್ರೆ ಯಾವ ಸಮಯ? ಅದಕ್ಕೇಕೆ ಅಷ್ಟು ಮಹತ್ವ?
Also Read: Om: ಸರ್ವೋಚ್ಚ ಸಂತೋಷ ಪಡೆಯಲು ಓಂ ಮಂತ್ರ ಪಠಿಸಿ, ಇದರಿಂದ ಆಧ್ಯಾತ್ಮವಷ್ಟೇ ಅಲ್ಲ ಆರೋಗ್ಯಕರ ಪ್ರಯೋಜವೂ ಇದೆ!
Published On - 11:39 am, Thu, 3 February 22