AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​

ಪ್ರಸ್ತುತ ಪ್ರಕರಣ ಸುಬೋಧ್​ ಕುಮಾರ್​ ಅವರು ಮಹಾರಾಷ್ಟ್ರ ಪೊಲೀಸ್​ ನಿರ್ದೇಶಕರಾಗಿದ್ದಾಗಿನದು.  ಆಗ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರಷ್ಮಿ ಶುಕ್ಲಾ, ಮಹಾರಾಷ್ಟ್ರದಲ್ಲಿ ಪೊಲೀಸ್​ ವರ್ಗಾವಣೆ, ಪೋಸ್ಟಿಂಗ್​ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಸಿದ್ಧಪಡಿಸಿದ್ದರು.

ಗುಪ್ತಚರ ದಳದ ಮಾಹಿತಿ ಸೋರಿಕೆ ಕೇಸ್​​; ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್​ ಜೈಸ್ವಾಲ್​ಗೆ ಸಮನ್ಸ್​ ನೀಡಿದ ಮುಂಬೈ ಸೈಬರ್​​ ಪೊಲೀಸ್​
ಸುಬೋಧ್​ ಕುಮಾರ್ ಜೈಸ್ವಾಲ್​
TV9 Web
| Edited By: |

Updated on:Oct 09, 2021 | 8:42 PM

Share

ಪೊಲೀಸ್​ ಸಿಬ್ಬಂದಿ ವರ್ಗಾವಣೆ, ಪೋಸ್ಟಿಂಗ್​ಗೆ ಸಂಬಂಧಪಟ್ಟ ಮಹಾರಾಷ್ಟ್ರ ಗುಪ್ತಚರ ಇಲಾಖೆಯ ಮಾಹಿತಿ ಸೋರಿಕೆ, ಫೋನ್​ ಟ್ಯಾಪಿಂಗ್​​ ಪ್ರಕರಣದಲ್ಲಿ ಸಿಬಿಐ ಮುಖ್ಯಸ್ಥ ಸುಬೋಧ್​ ಕುಮಾರ್ ಜೈಸ್ವಾಲ್​​ರಿಗೆ ಮುಂಬೈ ಸೈಬರ್​ ಶಾಖೆ ಪೊಲೀಸರು ಸಮನ್ಸ್​ ನೀಡಿದ್ದಾರೆ.  ಇ-ಮೇಲ್ ಮೂಲಕ ಸುಬೋಧ್​ರಿಗೆ ಸಮನ್ಸ್​ ನೀಡಲಾಗಿದ್ದು, ಅಕ್ಟೋಬರ್​ 14ರೊಳಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ತಿಳಿಸಿದ್ದಾರೆ ಎಂದು ಎಎನ್​​ಐ ವರದಿ ಮಾಡಿದೆ. 

ಸುಬೋಧ್​ ಕುಮಾರ್ 1985ರ ಬ್ಯಾಚ್​​ನ ಮಹಾರಾಷ್ಟ್ರ ಕೇಡರ್​ನ ಐಪಿಎಸ್​ ಅಧಿಕಾರಿಯಾಗಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಸಿಬಿಐ ಮುಖ್ಯಸ್ಥರಾಗಿ ನೇಮಕವಾಗಿದ್ದು, ಇವರ ಅವಧಿ ಎರಡು ವರ್ಷ. ಸಿಬಿಐ ಮುಖ್ಯಸ್ಥರಾಗಿ ನೇಮಕವಾಗುವುದಕ್ಕೂ ಮೊದಲು ಇವರು ಮುಂಬೈ ಮತ್ತು ಮಹಾರಾಷ್ಟ್ರ ಪೊಲೀಸ್​ ಚೀಫ್​ ಆಗಿ ಕರ್ತವ್ಯ ನಿರ್ವಹಿಸಿದವರಾಗಿದ್ದಾರೆ.  ಪ್ರಸ್ತುತ ಪ್ರಕರಣ ಸುಬೋಧ್​ ಕುಮಾರ್​ ಅವರು ಮಹಾರಾಷ್ಟ್ರ ಪೊಲೀಸ್​ ನಿರ್ದೇಶಕರಾಗಿದ್ದಾಗಿನದು.  ಆಗ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದ ಐಪಿಎಸ್ ಅಧಿಕಾರಿ ರಷ್ಮಿ ಶುಕ್ಲಾ, ಮಹಾರಾಷ್ಟ್ರದಲ್ಲಿ ಪೊಲೀಸ್​ ವರ್ಗಾವಣೆ, ಪೋಸ್ಟಿಂಗ್​ ವೇಳೆ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಸಿದ್ಧಪಡಿಸಿದ್ದರು. ಅದರ ವಿಚಾರಣೆ ವೇಳೆ, ಹಿರಿಯ ರಾಜಕಾರಣಿಗಳು, ಅಧಿಕಾರಿಗಳ ಫೋನ್​ ಕದ್ದಾಲಿಕೆ ನಡೆದಿದೆ. ಗುಪ್ತಚರ ಇಲಾಖೆ ವರದಿಯನ್ನು ಉದ್ದೇಶಪೂರ್ವಕವಾಗಿಯೇ ಸೋರಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿದೆ. ಎಫ್​ಐಆರ್​​ನಲ್ಲಿ ರಷ್ಮಿ ಶುಕ್ಲಾ ಸೇರಿ ಇನ್ಯಾವುದೇ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿಲ್ಲ. ಆದರೆ ಈಗ ಸಿಬಿಐ ಮುಖ್ಯಸ್ಥರಾಗಿರುವ ಸುಬೋಧ್​ ಕುಮಾರ್​ರನ್ನು ವಿಚಾರಣೆಗೆ ಕರೆಯಲಾಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 451 ಜನರಿಗೆ ಕೊರೊನಾ ದೃಢ; 9 ಮಂದಿ ಸಾವು

IPL 2021: ಲೀಗ್ ಸುತ್ತಿನ ಅಂತ್ಯಕ್ಕೆ ಅತಿ ಹೆಚ್ಚು ರನ್​ ಗಳಿಸಿ ಆರೆಂಜ್ ಕ್ಯಾಪ್‌ ರೇಸ್​ನಲ್ಲಿರುವ ಬ್ಯಾಟರ್​ಗಳಿವರು

Published On - 8:24 pm, Sat, 9 October 21

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್