ಕೊರೊನಾ ಅಟ್ಟಹಾಸದ ನಡುವೆ ಅಪ್ಪಳಿಸುತ್ತಿದೆ ಅಂಫಾನ್ ಚಂಡಮಾರುತ!

ಮಂಗಳೂರು: ಇಡೀ ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಈ ಮಧ್ಯೆ ಭಾರತದ ಹಲವೆಡೆ ಅಂಫಾನ್ ಚಂಡಮಾರುತ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಅಂಫಾನ್ ಚಂಡಮಾರುತ ಎಫೆಕ್ಟ್ ತೀವ್ರವಾಗಿರಲಿದೆ ಎಂದು ತಿಳಿಸಿದೆ. ಕಡಲನಗರಿ ಮಂಗಳೂರಿನಲ್ಲೂ ಭಾರೀ ಮಳೆ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜೋರಾದ ಗಾಳಿ ಮಳೆಗೆ ಕಡಲನಗರಿ ನಲುಗಿ ಹೋಗಿದೆ. ಸಮುದ್ರದ ಅಲೆಗಳಲ್ಲಿ ಭಾರೀ ಏರಿಳಿತ‌ವಾಗುತ್ತಿದೆ. ಭಾರೀ […]

ಕೊರೊನಾ ಅಟ್ಟಹಾಸದ ನಡುವೆ ಅಪ್ಪಳಿಸುತ್ತಿದೆ ಅಂಫಾನ್ ಚಂಡಮಾರುತ!
ಸಾಧು ಶ್ರೀನಾಥ್​

Updated on: May 18, 2020 | 11:12 AM

ಮಂಗಳೂರು: ಇಡೀ ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದೆ. ಈ ಮಧ್ಯೆ ಭಾರತದ ಹಲವೆಡೆ ಅಂಫಾನ್ ಚಂಡಮಾರುತ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಅಂಫಾನ್ ಚಂಡಮಾರುತ ಎಫೆಕ್ಟ್ ತೀವ್ರವಾಗಿರಲಿದೆ ಎಂದು ತಿಳಿಸಿದೆ.

ಕಡಲನಗರಿ ಮಂಗಳೂರಿನಲ್ಲೂ ಭಾರೀ ಮಳೆ:
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಜೋರಾದ ಗಾಳಿ ಮಳೆಗೆ ಕಡಲನಗರಿ ನಲುಗಿ ಹೋಗಿದೆ. ಸಮುದ್ರದ ಅಲೆಗಳಲ್ಲಿ ಭಾರೀ ಏರಿಳಿತ‌ವಾಗುತ್ತಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶದಲ್ಲಿರುವ ರಸ್ತೆಗಳು ಜಲಾವೃತವಾಗಿದೆ.

ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಸಹ ತಡರಾತ್ರಿ ಮಳೆಯಾಗಿದೆ. ಬೆಳಗಿನ ಜಾವವೂ ಸಹ ನಗರದ ಹಲವೆಡೆ ಮಳೆಯಾಗಿದ್ದು, ಜೋರಾಗಿ ಗಾಳಿ ಬೀಸುತ್ತಿದೆ.

ಮುಂದಿನ 6 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚು:
ಈಗಾಗಲೇ ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಬಿರುಗಾಳಿ ಬೀಸುತ್ತಿದ್ದು, ಮುಂದಿನ 6 ಗಂಟೆಗಳಲ್ಲಿ ಚಂಡಮಾರುತದ ತೀವ್ರತೆ ಹೆಚ್ಚಾಗಲಿದೆ. ತಮಿಳುನಾಡಿನಲ್ಲೂ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಈರೋಡ್, ಸೇಲಂ, ಧರ್ಮಪುರಿ, ಕೃಷ್ಣಗಿರಿ, ಕೊಯಮತ್ತೂರು ಸೇರಿ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.

ಬಿರುಗಾಳಿಯ ರಭಸಕ್ಕೆ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಸೇಲಂ, ಧರ್ಮಪುರಿ, ಕೃಷ್ಣಗಿರಿ ಜಿಲ್ಲೆ ಸೇರಿದಂತೆ ಹಲವೆಡೆ ಇನ್ನು ಭಾರೀ ಪ್ರಮಾಣದಲ್ಲಿ ಮಳೆ‌ಯಾಗಲಿದೆ. ಹೀಗಾಗಿ ಜನರು‌ ಜಾಗೃತರಾಗಿರಬೇಕೆಂದು ಹವಾಮಾನ ಇಲಾಖೆ‌ ಎಚ್ಚರಿಕೆ ನೀಡಿದೆ.

Published On - 8:30 am, Mon, 18 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us