AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂಡಮಾರುತ ‘ಅರ್ನಬ್’ ಎಫೆಕ್ಟ್: ಹಲವು ರೈಲುಗಳ ಸಂಚಾರ ರದ್ದು, ಸಂಪೂರ್ಣ ಪಟ್ಟಿ ಇಲ್ಲಿದೆ

'ಅರ್ನಬ್' ಚಂಡಮಾರುತ ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ಕರಾವಳಿ ರೈಲ್ವೆ ಹಲವು ಪ್ರಮುಖ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಬುಧವಾರ ಬೆಳಗ್ಗೆ ಉತ್ತರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ.

ಚಂಡಮಾರುತ ‘ಅರ್ನಬ್’ ಎಫೆಕ್ಟ್: ಹಲವು ರೈಲುಗಳ ಸಂಚಾರ ರದ್ದು, ಸಂಪೂರ್ಣ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರImage Credit source: Getty Images
ಪ್ರಸನ್ನ ಹೆಗಡೆ
|

Updated on: Oct 27, 2026 | 11:39 AM

Share

ನವದೆಹಲಿ, ಅಕ್ಟೋಬರ್​​ 27: ‘ಅರ್ನಬ್’ ಚಂಡಮಾರುತ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾರತೀಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ದಕ್ಷಿಣ ಕರಾವಳಿ ರೈಲ್ವೆ , ಅರ್ನಬ್ ಚಂಡಮಾರುತ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ರೈಲ್ವೆ ಹಲವು ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಲು, ಕೆಲವು ರೈಲುಗಳ ಪ್ರಯಾಣವನ್ನು ನಿಗದಿತ ನಿಲ್ದಾಣಕ್ಕಿಂತ ಮೊದಲೇ ಅಂತ್ಯಗೊಳಿಸಲು ಹಾಗೂ ಕೆಲವು ರೈಲುಗಳ ಆರಂಭಿಕ ನಿಲ್ದಾಣವನ್ನು ಬದಲಿಸಲು ನಿರ್ಧರಿಸಿದೆ ಎಂದು ತಿಳಿಸಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಬುಧವಾರ ಬೆಳಗ್ಗೆ ಉತ್ತರ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆಯಿದೆ. ಅಕ್ಟೋಬರ್ 28ರ ಬೆಳಗಿನ ವೇಳೆಯಲ್ಲಿ ಬಾಪಟ್ಲಾ ಮತ್ತು ವಿಶಾಖಪಟ್ಟಣಂ ನಡುವಿನ ಆಂಧ್ರಪ್ರದೇಶ–ಯಾನಂ ಕರಾವಳಿ ಭಾಗದಲ್ಲಿ ಚಂಡಮಾರುತ ಭೂಭಾಗವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಈ ವೇಳೆ ಗಂಟೆಗೆ 115–125 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 140 ಕಿ.ಮೀ ತಲುಪುವ ಸಾಧ್ಯತೆಯನ್ನೂ ಅಂದಾಜಿಸಲಾಗಿದೆ.

ಇದನ್ನೂ ಓದಿ: ‘ಅರ್ನಬ್ ಚಂಡಮಾರುತ’ ಎಂದರೇನು? ಈ ಹೆಸರು ಬಂದಿದ್ದು ಹೇಗೆ ಇತ್ಯಾದಿ ವಿವರ

ಯಾವೆಲ್ಲ ರೈಲುಗಳ ಸಂಚಾರ ರದ್ದು?

  • ರೈಲು ಸಂಖ್ಯೆ 18515 – ವಿಶಾಖಪಟ್ಟಣಂ–ಕಿರಂಡುಲ್ ನೈಟ್ ಎಕ್ಸ್‌ಪ್ರೆಸ್: ಅಕ್ಟೋಬರ್ 29ರಿಂದ ನವೆಂಬರ್ 4, 2026ರವರೆಗೆ ರದ್ದು.
  • ರೈಲು ಸಂಖ್ಯೆ 18516 – ಕಿರಂಡುಲ್–ವಿಶಾಖಪಟ್ಟಣಂ ನೈಟ್ ಎಕ್ಸ್‌ಪ್ರೆಸ್: ಅಕ್ಟೋಬರ್ 29ರಿಂದ ನವೆಂಬರ್ 4, 2026ರವರೆಗೆ ರದ್ದು.
  • ರೈಲು ಸಂಖ್ಯೆ 58538 – ವಿಶಾಖಪಟ್ಟಣಂ–ಕೋರಾಪುಟ್ ಪ್ಯಾಸೆಂಜರ್: ಅಕ್ಟೋಬರ್ 27ರಿಂದ 30ರ ವರೆಗೆ ರದ್ದು.
  • ರೈಲು ಸಂಖ್ಯೆ 58537 – ಕೋರಾಪುಟ್–ವಿಶಾಖಪಟ್ಟಣಂ ಪ್ಯಾಸೆಂಜರ್: ಅಕ್ಟೋಬರ್ 28ರಿಂದ 31ರ ವರೆಗೆ ರದ್ದು.
  • ರೈಲು ಸಂಖ್ಯೆ 18512 – ವಿಶಾಖಪಟ್ಟಣಂ–ಕೋರಾಪುಟ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್: ಅಕ್ಟೋಬರ್ 30ರಂದು ರದ್ದು.
  • ರೈಲು ಸಂಖ್ಯೆ 18511 – ಕೋರಾಪುಟ್–ವಿಶಾಖಪಟ್ಟಣಂ ಇಂಟರ್‌ಸಿಟಿ ಎಕ್ಸ್‌ಪ್ರೆಸ್: ಅಕ್ಟೋಬರ್ 31ರಂದು ರದ್ದು.
  • ರೈಲು ಸಂಖ್ಯೆ 58501 – ವಿಶಾಖಪಟ್ಟಣಂ–ಕಿರಂಡುಲ್ ಪ್ಯಾಸೆಂಜರ್: ಅಕ್ಟೋಬರ್ 27ರಿಂದ 30ರ ವರೆಗೆ ರದ್ದು.
  • ರೈಲು ಸಂಖ್ಯೆ 58502 – ಕಿರಂಡುಲ್–ವಿಶಾಖಪಟ್ಟಣಂ ಪ್ಯಾಸೆಂಜರ್: ಅಕ್ಟೋಬರ್ 27ರಿಂದ 30ರ ವರೆಗೆ ರದ್ದು.

ವಿಜಯವಾಡ, ಮಚಿಲಿಪಟ್ಟಣಂ ಮತ್ತು ಸುತ್ತಮುತ್ತಲಿನ ಮಾರ್ಗ

  • ರೈಲು ಸಂಖ್ಯೆ 67261 – ರಾಜಮಂಡ್ರಿ–ವಿಜಯವಾಡ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67263 – ವಿಜಯವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67264 – ಮಚಿಲಿಪಟ್ಟಣಂ–ವಿಜಯವಾಡ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67265 – ವಿಜಯವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67271 – ಮಚಿಲಿಪಟ್ಟಣಂ–ಗುಡಿವಾಡ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67272 – ಗುಡಿವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67266 – ಮಚಿಲಿಪಟ್ಟಣಂ–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67275 – ವಿಜಯವಾಡ–ಭೀಮಾವರಂ ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67277 – ಭೀಮಾವರಂ ಜಂಕ್ಷನ್–ನಿಡದವೋಲು ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67278 – ನಿಡದವೋಲು ಜಂಕ್ಷನ್–ಭೀಮಾವರಂ ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67258 – ವಿಜಯವಾಡ–ನರಸಾಪುರ:ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67246 – ನರಸಾಪುರ–ರಾಜಮಂಡ್ರಿ: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 17269 – ವಿಜಯವಾಡ–ನರಸಾಪುರ: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 17264 – ನರಸಾಪುರ–ಭೀಮಾವರಂ ಜಂಕ್ಷನ್: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67251 – ಭೀಮಾವರಂ ಜಂಕ್ಷನ್–ಮಚಿಲಿಪಟ್ಟಣಂ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67252 – ಮಚಿಲಿಪಟ್ಟಣಂ–ಗುಡಿವಾಡ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67253 – ಗುಡಿವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67254 – ಮಚಿಲಿಪಟ್ಟಣಂ–ಗುಡಿವಾಡ:ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67255 – ಗುಡಿವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 67256 – ಮಚಿಲಿಪಟ್ಟಣಂ–ವಿಜಯವಾಡ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 17257 – ವಿಜಯವಾಡ–ಕಾಕಿನಾಡ ಬಂದರು: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67302 – ಕಾಕಿನಾಡ ಬಂದರು–ರಾಜಮಂಡ್ರಿ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67202 – ವಿಜಯವಾಡ–ರಾಜಮಂಡ್ರಿ:ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67257 – ವಿಜಯವಾಡ–ನರಸಾಪುರ: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67244 – ನರಸಾಪುರ–ನಿಡದವೋಲು ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67245 – ನಿಡದವೋಲು ಜಂಕ್ಷನ್–ನರಸಾಪುರ:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 17270 – ನರಸಾಪುರ–ವಿಜಯವಾಡ:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67267 – ವಿಜಯವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67268 – ಮಚಿಲಿಪಟ್ಟಣಂ–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67247 – ನರಸಾಪುರ–ಗುಂಟೂರು ಜಂಕ್ಷನ್ ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67249 – ಗುಂಟೂರು ಜಂಕ್ಷನ್–ರೆಪಲ್ಲೆ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67250 – ರೆಪಲ್ಲೆ–ಗುಂಟೂರು ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67248 – ಗುಂಟೂರು ಜಂಕ್ಷನ್–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67276 – ನರಸಾಪುರ–ವಿಜಯವಾಡ:ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67269 – ವಿಜಯವಾಡ–ಮಚಿಲಿಪಟ್ಟಣಂ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67270 – ಮಚಿಲಿಪಟ್ಟಣಂ–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67281 – ವಿಜಯವಾಡ–ಭೀಮಾವರಂ ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67283 – ಭೀಮಾವರಂ ಜಂಕ್ಷನ್–ನಿಡದವೋಲು ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67284 – ನಿಡದವೋಲು ಜಂಕ್ಷನ್–ಭೀಮಾವರಂ ಜಂಕ್ಷನ್: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67282 – ಭೀಮಾವರಂ ಜಂಕ್ಷನ್–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67262 – ವಿಜಯವಾಡ–ರಾಜಮಂಡ್ರಿ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67301 – ರಾಜಮಂಡ್ರಿ–ಕಾಕಿನಾಡ ಬಂದರು: ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 17267 – ಕಾಕಿನಾಡ ಬಂದರು–ವಿಶಾಖಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 17268 – ವಿಶಾಖಪಟ್ಟಣಂ–ಕಾಕಿನಾಡ ಬಂದರು: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 07267 – ಪಾರ್ವತೀಪುರಂ–ವಿಶಾಖಪಟ್ಟಣಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 07268 – ವಿಶಾಖಪಟ್ಟಣಂ–ಪಾರ್ವತೀಪುರಂ: ಅಕ್ಟೋಬರ್ 27 ಮತ್ತು 28ರಂದು ರದ್ದು.
  • ರೈಲು ಸಂಖ್ಯೆ 17258 – ಕಾಕಿನಾಡ ಬಂದರು–ವಿಜಯವಾಡ: ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67229 – ವಿಜಯವಾಡ–ಗುಂಟೂರು ಜಂಕ್ಷನ್:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67223 – ಗುಂಟೂರು ಜಂಕ್ಷನ್–ರೆಪಲ್ಲೆ:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67224 – ರೆಪಲ್ಲೆ–ತೆನಾಲಿ ಜಂಕ್ಷನ್:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67222 – ತೆನಾಲಿ ಜಂಕ್ಷನ್–ವಿಜಯವಾಡ:ಅಕ್ಟೋಬರ್ 28ರಂದು ರದ್ದು.
  • ರೈಲು ಸಂಖ್ಯೆ 67285 – ರಾಜಮಂಡ್ರಿ–ವಿಶಾಖಪಟ್ಟಣಂ:ಅಕ್ಟೋಬರ್ 27ರಂದು ರದ್ದು.
  • ರೈಲು ಸಂಖ್ಯೆ 67286 – ವಿಶಾಖಪಟ್ಟಣಂ–ರಾಜಮಂಡ್ರಿ:ಅಕ್ಟೋಬರ್ 27ರಂದು ರದ್ದು.

ನಿಲುಗಡೆ ಮತ್ತು ಆರಂಭಿಕ ನಿಲ್ದಾಣದಲ್ಲಿ ಬದಲಾವಣೆ

ರೈಲು ಸಂಖ್ಯೆ 18447 – ಭುವನೇಶ್ವರ–ಜಗದಲ್‌ಪುರ ಹಿರಾಖಂಡ್ ಎಕ್ಸ್‌ಪ್ರೆಸ್: ಅಕ್ಟೋಬರ್ 27ರಿಂದ 30, 2026ರವರೆಗೆ ರೈಲಿನ ಪ್ರಯಾಣವನ್ನು ರಾಯಗಡದಲ್ಲಿ ಅಂತ್ಯಗೊಳಿಸಲಾಗುತ್ತದೆ. ರೈಲು ಸಂಖ್ಯೆ 18448 – ಜಗದಲ್‌ಪುರ–ಭುವನೇಶ್ವರ ಹಿರಾಖಂಡ್ ಎಕ್ಸ್‌ಪ್ರೆಸ್: ಅಕ್ಟೋಬರ್ 28ರಿಂದ 31ರ ವರೆಗೆ ಕೋರಾಪುಟ್ ಬದಲಿಗೆ ರಾಯಗಡದಿಂದ ಪ್ರಯಾಣ ಆರಂಭಿಸಲಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More