ಗುಜರಾತ್ನಲ್ಲಿ ಬಿಪೋರ್ಜಾಯ್(Biparjoy) ಚಂಡಮಾರುತದ ಅಬ್ಬರ ಹೆಚ್ಚಾಗುತ್ತಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಗುಜರಾತ್‌ನ ಭಾವ್ನಗರದಲ್ಲಿ ಭಾರಿ ಮಳೆಯಲ್ಲಿ ಸಿಲುಕಿ ತಂದೆ-ಮಗ ಮೃತಪಟ್ಟಿದ್ದಾರೆ. ನೀರಿನಲ್ಲಿ ಸಿಲುಕಿದ್ದ ಜಾನುವಾರುಗಳ ರಕ್ಷಣೆಗೆ ತೆರಳಿದ್ದ ತಂದೆ-ಮಗ ಮೃತಪಟ್ಟಿದ್ದಾರೆ. ಜನರು ವಸತಿ ಪ್ರದೇಶದಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಗುರುವಾರ ರಾತ್ರಿಯಿಂದ ಗಾಳಿಯ ವೇಗ ಹೆಚ್ಚಾಗಿದೆ. ಜನರಲ್ಲಿ ಆತಂಕ ಮನೆ ಮಾಡಿದೆ. ಇದು ಈಶಾನ್ಯಕ್ಕೆ ಚಲಿಸುವ ನಿರೀಕ್ಷೆಯಿದೆ ಮತ್ತು ಜೂನ್ 16 ರಂದು ಮುಂಜಾನೆ ಸೈಕ್ಲೋನಿಕ್ ಚಂಡಮಾರುತವಾಗಿ ದುರ್ಬಲಗೊಳ್ಳುತ್ತದೆ ಮತ್ತು ಅದೇ ವೇಳೆಗೆ ದಕ್ಷಿಣ ರಾಜಸ್ಥಾನದ ಮೇಲೆ ಕಡಿಮೆ ಒತ್ತಡಕ್ಕೆ ಒಳಗಾಗಲಿದೆ ಎಂದು ಅದು ಹೇಳಿದೆ.
ಚಂಡಮಾರುತವು ಸಮುದ್ರದಿಂದ ಈಗ ಭೂಮಿಯತ್ತ ಚಲಿಸುತ್ತಿದೆ, ಸೌರಾಷ್ಟ್ರ-ಕಚ್ ಕಡೆಗೆ ಕೇಂದ್ರೀಕೃತವಾಗಿದೆ ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಚಂಡಮಾರುತವು ಈಶಾನ್ಯಕ್ಕೆ ಚಲಿಸಿದೆ ಮತ್ತು ಸೌರಾಷ್ಟ್ರ-ಕಚ್ ಪಕ್ಕದ ಪಾಕಿಸ್ತಾನ ಕರಾವಳಿಯನ್ನು ಗುಜರಾತ್ ಜಖೌ ಬಂದರಿನ ಹತ್ತಿರ ದಾಟಿದೆ.
ಮತ್ತಷ್ಟು ಓದಿ: Cyclone Biparjoy: ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಅಪ್ಪಳಿಸಿದ ಬಿಪೋರ್ಜಾಯ್ ಚಂಡಮಾರುತ
ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿ.ಮೀಗೆ ಕಡಿಮೆಯಾಗಿದೆ. ಅತ್ಯಂತ ತೀವ್ರ ಸೈಕ್ಲೋನಿಕ್ ಚಂಡಮಾರುತದಿಂದ (ವಿಎಸ್‌ಸಿಎಸ್) ತೀವ್ರ ಸೈಕ್ಲೋನಿಕ್ ಚಂಡಮಾರುತಕ್ಕೆ (ಎಸ್‌ಸಿಎಸ್) ಬದಲಾಗಿದೆ. ಇಂದು ರಾಜಸ್ಥಾನದಲ್ಲಿ ಭಾರಿ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
#WATCH | Gujarat: Mandvi witnesses strong winds as an impact of cyclone ‘Biparjoy’ pic.twitter.com/2JKV5Rwhkz
— ANI (@ANI) June 16, 2023
ಚಂಡಮಾರುತವು ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತವನ್ನು ಉಂಟುಮಾಡಿದ ನಂತರ ಗುರುವಾರ ಮತ್ತು ಶುಕ್ರವಾರದ ಮಧ್ಯರಾತ್ರಿಯಲ್ಲಿ ಬಿಪರ್‌ಜಾಯ್‌ನ ತೀವ್ರತೆಯು ಅತಿ ತೀವ್ರದಿಂದ ತೀವ್ರ ವರ್ಗಕ್ಕೆ ಬದಲಾವಣೆಯಾಗಿದೆ.
#WATCH | Dwarka, Gujarat: Rough sea at Gomti Ghat as an impact of ‘Cyclone Biparjoy’ pic.twitter.com/nboDhI4B4Q
— ANI (@ANI) June 16, 2023
ಗುಜರಾತಿನ ಬೇರೆ ಬೇರೆ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಚಂಡಮಾರುತದಿಂದ ಭೂಕುಸಿತ ಪ್ರಕ್ರಿಯೆಯು ಪ್ರಾರಂಭವಾದಾಗ, ಗಂಟೆಗೆ 120 ಕಿಮೀ ವೇಗದಲ್ಲಿ ಬಿರುಗಾಳಿ ಬೀಸಿತು ಮತ್ತು ರಾಜ್ಯದ ಸೌರಾಷ್ಟ್ರ ಮತ್ತು ಕಚ್ ಕರಾವಳಿಯಲ್ಲಿ ಭಾರೀ ಮಳೆ ಸುರಿಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ