AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cyclone Biparjoy: ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಅಪ್ಪಳಿಸಿದ ಬಿಪೋರ್​​ಜಾಯ್ ಚಂಡಮಾರುತ

ಬಿಪೋರ್‌ಜಾಯ್ ಚಂಡಮಾರುತವು ಭಾರತದ ಹಲವಾರು ಭಾಗಗಳಲ್ಲಿ ವಿಶೇಷವಾಗಿ ಗುಜರಾತ್ ಮತ್ತು ಮುಂಬೈನಲ್ಲಿ ಭಾರೀ ಮಳೆ ಮತ್ತು ಅಬ್ಬರದ ಅಲೆಗಳಿಗೆ ಕಾರಣವಾಗಿದೆ. ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಐಎಂಡಿ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

Cyclone Biparjoy: ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಅಪ್ಪಳಿಸಿದ ಬಿಪೋರ್​​ಜಾಯ್ ಚಂಡಮಾರುತ
ಬಿಪೋರ್‌ಜಾಯ್ ಚಂಡಮಾರುತ
ರಶ್ಮಿ ಕಲ್ಲಕಟ್ಟ
|

Updated on:Jun 15, 2023 | 6:59 PM

Share

ಬಿಪೋರ್​​ಜಾಯ್ ಚಂಡಮಾರುತ ಕರಾಚಿ ಮತ್ತು ಮಾಂಡ್ವಿ ನಡುವಿನ ಕರಾವಳಿಯನ್ನು ಅಪ್ಪಳಿಸಲಿದ್ದು ಗುಜರಾತ್‌ನ ಜಖೌ ಬಂದರಿಗೆ ಸಮೀಪಿಸಲಿದೆ. ಇದು ಈಗ ಅರಬ್ಬೀ ಸಮುದ್ರದ ಜಖೌ ಬಂದರಿನಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿದೆ. ಇದು ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಹೀಗಾಗಿ ಸೌರಾಷ್ಟ್ರ ಮತ್ತು ಕಚ್‌ನ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಆರಂಭವಾಗಿದ್ದು ಮಧ್ಯರಾತ್ರಿಯವರೆಗೆ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಐಎಂಡಿ (India Meteorological Department) ಮಹಾನಿರ್ದೇಶಕ ಡಾ.ಮೃತ್ಯುಂಜಯ್ ಮಹಾಪಾತ್ರ ಹೇಳಿದ್ದಾರೆ. ಕಚ್ ಜಿಲ್ಲೆಯಲ್ಲಿ ಬಿಪೋರ್​​ಜಾಯ್ ಚಂಡಮಾರುತದ ಅಪ್ಪಳಿಸುವ ಮುನ್ನ ಗುಜರಾತ್‌ನ ಕರಾವಳಿ ಪ್ರದೇಶದಿಂದ ಸುಮಾರು ಒಂದು ಲಕ್ಷ ಜನರನ್ನು  ಸ್ಥಳಾಂತರಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ಚಂಡಮಾರುತ ಕರಾವಳಿಗೆ ಅಪ್ಪಳಿಸುವುದಕ್ಕೆ ಕ್ಷಣಗಣನೆ ಶುರುವಾಗಿದ್ದು ಗಾಳಿಯ ವೇಗ ಗಂಟೆಗೆ 100 ಕಿ.ಮೀ ಆಗಿದೆ.

ಗೋಮತಿ ಘಾಟ್‌ನಿಂದ ನೋಡಿದರೆ ಅತ್ಯಂತ ತೀವ್ರ ಚಂಡಮಾರುತ ಬಿಪೋರ್​​ಜಾಯ್ ಸೌರಾಷ್ಟ್ರ ಮತ್ತು ಕಚ್ ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯನ್ನು ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ಇಂದು ಸಂಜೆ( ಗುರುವಾರ) ದಾಟಲಿದೆ. ಬಿಪೋರ್‌ಜಾಯ್ ಚಂಡಮಾರುತವು ಭಾರತದ ಹಲವಾರು ಭಾಗಗಳಲ್ಲಿ ವಿಶೇಷವಾಗಿ ಗುಜರಾತ್ ಮತ್ತು ಮುಂಬೈನಲ್ಲಿ ಭಾರೀ ಮಳೆ ಮತ್ತು ಅಬ್ಬರದ ಅಲೆಗಳಿಗೆ ಕಾರಣವಾಗಿದೆ. ಸೌರಾಷ್ಟ್ರ ಮತ್ತು ಕಚ್ ಕರಾವಳಿಗೆ ಐಎಂಡಿ ಬುಧವಾರ ರೆಡ್ ಅಲರ್ಟ್ ಘೋಷಿಸಿದೆ.

ಬಿಪೋರ್‌ಜಾಯ್ ತೀವ್ರ ಚಂಡಮಾರುತದ ವರ್ಗದಲ್ಲಿದೆ. ಬುಧವಾರದಂದು ಅದರ ಚಲನೆಯು ಈಶಾನ್ಯ ದಿಕ್ಕಿನಲ್ಲಿತ್ತು. ಇದು ಜೂನ್ 15 ರಂದು ಸೌರಾಷ್ಟ್ರ, ಕಚ್ ಮತ್ತು ಗುಜರಾತ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ. ಇದು ಜೂನ್ 16 ರಂದು ರಾಜಸ್ಥಾನದ ಕಚ್‌ಗೆ ಪ್ರವೇಶಿಸುತ್ತದೆ ಎಂದು IMD ನಿರ್ದೇಶಕಿ ರಾಧೆ ಶ್ಯಾಮ್ ಶರ್ಮಾ ಸುದ್ದಿ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: Cyclone Beeper Joy: ಗುಜರಾತ್ ಮಾಂಡವೀ ತೀರಕ್ಕೆ ಇಂದು ಅಪ್ಪಳಿಸಲಿದೆ ಬೀಪರ್ ಜಾಯ್ ಚಂಡಮಾರುತ, ಕರ್ನಾಟಕದ ಮೇಲೂ ಬೀರಲಿದೆ ಪ್ರಭಾವ

ಚಂಡಮಾರುತವನ್ನು ಎದುರಿಸಲು ಗುಜರಾತ್‌ನಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆ ಸಜ್ಜಾಗಿದೆ. ಸಮುದ್ರದಲ್ಲಿ ರಕ್ಷಣಾ ಕಾರ್ಯಗಳಿಗಾಗಿ7 ವಿಮಾನಗಳು, 23 ವಿಪತ್ತು ಪರಿಹಾರ ತಂಡಗಳು 29 ಜೆಮಿನಿ ಬೋಟ್‌ಗಳು, 50 ಒಬಿಎಂಗಳು (ಔಟ್ ಬೋರ್ಡ್ ಮೋಟಾರ್) ಬೋಟ್‌ಗಳಿಗೆ 1000 ಲೈಫ್‌ಜಾಕೆಟ್‌ಗಳು ಮತ್ತು 200 ಲೈಫ್‌ಬಾಯ್‌ಗಳನ್ನು ಸಿವಿಲ್ ಅಧಿಕಾರಿಗಳಿಗೆ ಸಹಾಯಕ್ಕಾಗಿ ಐಸಿಜಿ ಸ್ಟೇಷನ್‌ಗಳಲ್ಲಿ ರಚಿಸಲಾಗಿದೆ. ಬಿಪೋರ್‌ಜಾಯ್ ಚಂಡಮಾರುತವು ಇಂದು ರಾತ್ರಿ 9 ಹೊತ್ತಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಸಂಸ್ಥೆ ಗುರುವಾರ ಸಂಜೆ ಎಚ್ಚರಿಸಿದೆ.

ಸೌರಾಷ್ಟ್ರ ಮತ್ತು ಕಚ್ ಕರಾವಳಿಗಳು ಚಂಡಮಾರುತದ ಎಚ್ಚರಿಕೆಯಲ್ಲಿವೆ. ಬಿಪೋರ್‌ಜಾಯ್, 22.8N ಮತ್ತು 67.9E, ಜಖೌ ಬಂದರಿನ (ಗುಜರಾತ್) ನೈಋತ್ಯಕ್ಕೆ ಸರಿಸುಮಾರು 80km ಮತ್ತು ದೇವಭೂಮಿ ದ್ವಾರಕಾದಿಂದ 130km ವಾಯುವ್ಯದಲ್ಲಿದೆ. ಭೂಕುಸಿತ ಪ್ರಕ್ರಿಯೆಯು ಜಖೌ ಬಂದರಿನ ಬಳಿ ಇಂದು ಸಂಜೆ ಪ್ರಾರಂಭವಾಗುತ್ತದೆ ಮತ್ತು ಮಧ್ಯರಾತ್ರಿಯವರೆಗೆ ಮುಂದುವರಿಯುತ್ತದೆ ಎಂದು ಐಎಂಡಿ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:43 pm, Thu, 15 June 23

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ