
ನವದೆಹಲಿ, ಅಕ್ಟೋಬರ್ 28: ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ‘ಮೊಂಥಾ’ ಚಂಡಮಾರುತ(Montha Cyclone)ದ ಪರಿಣಾಮಗಳು ಇಂದಿನಿಂದ ಗೋಚರಿಸಲು ಪ್ರಾರಂಭವಾಗಿದೆ.. ಇಂದು ಸಂಜೆ ವೇಳೆಗೆ ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಹಾಗಾದರೆ ಈ ಚಂಡಮಾರುತಕ್ಕೆ ಮೊಂಥಾ ಎಂದು ಹೆಸರಿಟ್ಟವರು ಯಾರು, ಅದರ ಅರ್ಥವೇನು ಎಂಬುದನ್ನು ತಿಳಿದುಕೊಳ್ಳೋಣ. ಮೊಂಥಾ ಚಂಡಮಾರುತದ ಹೆಸರು ಅದರ ಸ್ವಭಾವಕ್ಕೆ ಹೊಂದಿಕೆಯಾಗುವುದಿಲ್ಲ. ಈ ಚಂಡಮಾರುತಕ್ಕೆ ಮೊಂಥಾ ಎಂದು ಥೈಲೆಂಡ್ ನಾಮಕರಣ ಮಾಡಿದೆ. ಥಾಯ್ ಭಾಷೆಯಲ್ಲಿ ಮೊಂಥಾ ಎಂದರೆ ‘ಪರಿಮಳಯುಕ್ತ ಹೂವು’ ಎಂದರ್ಥ.
ಆದರೆ ಇದು ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು, ಒಡಿಶಾ ಮತ್ತು ತೆಲಂಗಾಣದ ಕರಾವಳಿ ಪ್ರದೇಶಗಳಲ್ಲಿ ಸುಗಂಧ ಹರಡುವ ಹೂವಾಗಿ ಅಲ್ಲ ಬದಲಾಗಿ ಅಲ್ಲ, ಭಯ ಹಾಗೂ ಅನಿಶ್ಚಿತತೆಯನ್ನು ತಂದೊಡ್ಡುವ ಚಂಡಮಾರುತವಾಗಿ ಬರುತ್ತಿದೆ.
ಗಾಳಿಯ ವೇಗ ಗಂಟೆಗೆ 90 ರಿಂದ 100 ಕಿ.ಮೀ. ಆಗುವ ನಿರೀಕ್ಷೆಯಿದೆ. ಚಂಡಮಾರುತದ ಪ್ರಭಾವದಿಂದಾಗಿ ಅಕ್ಟೋಬರ್ 27 ಮತ್ತು 30 ರ ನಡುವೆ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಡಿಶಾ, ತಮಿಳುನಾಡು ಮತ್ತು ತೆಲಂಗಾಣದ ಕೆಲವು ಭಾಗಗಳಲ್ಲಿಯೂ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಮತ್ತಷ್ಟು ಓದಿ: Cyclone Montha: ಬಂತು ಬಂತು ಮೊಂಥಾ ಚಂಡಮಾರುತ, ಆಂಧ್ರ, ಒಡಿಶಾಗೆ ಹೈ ಅಲರ್ಟ್, ಧಾರಾಕಾರ ಮಳೆಯ ಮುನ್ಸೂಚನೆ
ಕೆಲವೊಂದು ಚಂಡಮಾರುತಗಳು ಹೆಚ್ಚು ಅಪಾಯಕಾರಿಯಲ್ಲ. ಉದಾಹರಣೆಗೆ, ನವೆಂಬರ್ 2024 ರಲ್ಲಿ ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡ ಚಂಡಮಾರುತವನ್ನು ಫೆಂಗಲ್ ಎಂದು ಹೆಸರಿಸಲಾಯಿತು. ಅದರ ಅರ್ಥ ಉದಾಸೀನ್ ಅದು ಅರೇಬಿಕ್ ಭಾಷೆಯಿಂದ ಬಂದಿದೆ. ಕತಾರ್ ಅಕ್ಟೋಬರ್ 2024 ರ ಚಂಡಮಾರುತವನ್ನು ಡಾನಾ ಎಂದು ಹೆಸರಿಸಿತು, ಇದರರ್ಥ ಔದಾರ್ಯ. ಆಗಸ್ಟ್ 2024 ರಲ್ಲಿ ಅರೇಬಿಯನ್ ಸಮುದ್ರದಲ್ಲಿ ರೂಪುಗೊಂಡ ಚಂಡಮಾರುತವನ್ನು ಅಸ್ನಾ ಎಂದು ಪಾಕಿಸ್ತಾನ ಕರೆಯಿತು. ಅದರರ್ಥ ಪ್ರಶಂಸನೀಯ ಅಥವಾ ಸ್ವೀಕಾರಾರ್ಹ ಎಂದರ್ಥ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ