Cyclone Yaas: ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ; ಮೇ 23ರ ಸುಮಾರಿಗೆ ಏಳಲಿದೆ ಯಾಸ್

| Updated By: Digi Tech Desk

Updated on: May 19, 2021 | 10:19 AM

Cyclone Yaas Update: ಯಾಸ್ ಚಂಡಮಾರುತವು ಬಂಗಾಳಕೊಲ್ಲಿ ಸಮುದ್ರ ಭಾಗದಿಂದ ಬರಲಿದೆ ಎನ್ನಲಾಗಿದೆ. ಮೇ 23 ರ ಆಸುಪಾಸಿನಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Cyclone Yaas: ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ; ಮೇ 23ರ ಸುಮಾರಿಗೆ ಏಳಲಿದೆ ಯಾಸ್
ಯಾಸ್​ ಚಂಡಮಾರುತ
Follow us on

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಎದ್ದ ತೌಕ್ತೆ ಚಂಡಮಾರುತದ ಪರಿಣಾಮ ಕರ್ನಾಟಕ ಸೇರಿದಂತೆ ನೆರೆಹೊರೆಯ ರಾಜ್ಯಗಳ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ತೌಕ್ತೆ ಬೆನ್ನಲ್ಲೇ ಮತ್ತೊಂದು ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಚಂಡಮಾರುತವು ಬಂಗಾಳಕೊಲ್ಲಿ ಸಮುದ್ರ ಭಾಗದಿಂದ ಬರಲಿದೆ ಎನ್ನಲಾಗಿದೆ. ಮೇ 23 ರ ಆಸುಪಾಸಿನಲ್ಲಿ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಇದಕ್ಕೆ ಯಾಸ್ ಎಂದು ಹೆಸರಿಡಲು ನಿರ್ಧರಿಸಲಾಗಿದೆ.

ನಮ್ಮ ವರದಿಗಳ ಪ್ರಕಾರ ಬಂಗಾಳ ಕೊಲ್ಲಿ ಸಮುದ್ರದ ಕೆಲವೆಡೆ ಮುಂದಿನ ವಾರದಲ್ಲಿ ಕಡಿಮೆ ಒತ್ತಡ ಕಾಣಿಸಿಕೊಳ್ಳಲಿದೆ. ಇದು ತೀವ್ರವಾಗುವ ಸಾಧ್ಯತೆಯೂ ಇರುವುದರಿಂದ ಚಂಡಮಾರುತವನ್ನು ನಿರೀಕ್ಷಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಬೆಳವಣಿಗೆಗಳನ್ನು ನೋಡಿ ಅಧಿಕೃತವಾಗಿ ಹೆಚ್ಚಿನ ಮಾಹಿತಿ ಪ್ರಕಟಿಸಲಾಗುವುದು ಎಂದು ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಅಧಿಕಾರಿ ಸುನಿತಾ ದೇವಿ ತಿಳಿಸಿದ್ದಾರೆ.

ಅರಬ್ಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ಸಮುದ್ರದ ಮೇಲ್ಮೈ ಉಷ್ಣಾಂಶ ಸುಮಾರು ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಿದೆ. ಇದು ಚಂಡಮಾರುತ ರಚನೆಗೆ ಪೂರಕ ವಾತಾವರಣವಾಗಿದ್ದು, ಮೇ 23ರ ಹೊತ್ತಿಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಉದ್ಭವಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಹವಾಮಾನ ಇಲಾಖೆಯ ಸದ್ಯದ ಅಂದಾಜಿನ ಪ್ರಕಾರ ಈ ಚಂಡಮಾರುತವು ಮಯನ್ಮಾರ್​ ಕಡೆಗೆ ಚಲಿಸುವ ಸಾಧ್ಯತೆ ಇದ್ದು, ಭಾರತಕ್ಕೆ ಅಪ್ಪಳಿಸುವ ಸಂಭವ ಕಡಿಮೆ ಇದೆ ಎನ್ನಲಾಗುತ್ತಿದೆ. ಈಗಷ್ಟೇ ತೌಕ್ತೆ ಚಂಡಮಾರುತಕ್ಕೆ ಸಾಕ್ಷಿಯಾಗಿರುವ ಕರ್ನಾಟಕ, ಕೇರಳ ಸೇರಿದಂತೆ ಕೆಲ ಪ್ರದೇಶಗಳ ಜನರಿಗೆ ಇನ್ನೇನು ಹದಿನೈದು ದಿನಗಳೊಳಗೆ ಮುಂಗಾರು ಕೂಡ ಎದುರಾಗಲಿದ್ದು, ಈ ಬಾರಿಯ ಬೇಸಿಗೆಯ ಬೇಗೆಯಿಂದ ಮುಕ್ತಿ ಸಿಕ್ಕಂತಾಗಿದೆ.

ಇದನ್ನೂ ಓದಿ:
Karnataka Weather: ಹವಾಮಾನ ವರದಿ; ಕರ್ನಾಟಕದಲ್ಲಿ ಇಂದು ಸಹ ಮಳೆ ಮುಂದುವರೆಯುವ ಸಾಧ್ಯತೆ; ಹಲವೆಡೆ ಮೋಡ ಕವಿದ ವಾತಾವರಣ

Monsoon 2021: ಅವಧಿಗೂ ಮುನ್ನವೇ ಮುಂಗಾರು ಪ್ರವೇಶ; ಚಂಡಮಾರುತದ ಬೆನ್ನಲ್ಲೇ ಮಳೆಗಾಲ ಶುರುವಾಗುವ ಸಾಧ್ಯತೆ

(Cyclone Yaas likely to be formed in Bay of Bengal around May 23rd will be another one after Cyclone Tauktae)

Published On - 10:16 am, Wed, 19 May 21