ಪಶ್ವಿಮ ಬಂಗಾಳ: ನಾರದಾ ಲಂಚ ಪ್ರಕರಣ ಸುಪ್ರೀಮ್ ಕೋರ್ಟ್​ ಅಂಗಳ ತಲುಪಿತು!

ಮಂಗಳವಾರದಂದು, ಹಿರಿಯ ವಕೀಲ ಮತ್ತು ಕಾಂಗ್ರೆಸ್ ಧುರೀಣ ಅಭಿಷೇಕ್ ಮನು ಸಿಂಘ್ವಿ ಅವರು ಮೂವರು ತೃಣಮೂಲ ಪಕ್ಷದ ನಾಯಕರ ಪರವಾಗಿ ಅರ್ಜಿ ಸಲ್ಲಿಸಿದರು. ಸೋವನ್ ಚಟರ್ಜಿ ಪರ ವಕೀಲ ಸಿದ್ದಾರ್ಥ ಲುಥ್ರಾ ಮನವಿ ಸಲ್ಲಿಸಿದರು.

ಪಶ್ವಿಮ ಬಂಗಾಳ: ನಾರದಾ ಲಂಚ ಪ್ರಕರಣ ಸುಪ್ರೀಮ್ ಕೋರ್ಟ್​ ಅಂಗಳ ತಲುಪಿತು!
ಮಮತಾ ಬ್ಯಾನರ್ಜಿ
Follow us
|

Updated on:May 19, 2021 | 12:16 AM

ನವದೆಹಲಿ: ನಾರದಾ ಲಂಚ ಪ್ರಕರಣ ಸುಪ್ರೀಮ್ ಕೋರ್ಟ್​ ಅಂಗಳವನ್ನು ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ನಾಲ್ವರು ಟಿಎಮ್​ಸಿ ನಾಯಕರನ್ನು ಬಂಧಿಸಿದ ನಂತರ ಅವರು ತಮಗೆ ಜಾಮೀನು ನೀಡದಂತೆ ಕೊರ್ಟೊಂದು ಸೋಮವಾರದಂದು ನೀಡಿರುವ ತೀರ್ಪನ್ನು ಹಿಂಪಡೆಯುವಂತೆ ಹೈಕೋರ್ಟ್​ ಮೊರೆಹೊಕ್ಕ ನಂತರ ತನಿಖಾ ದಳವು ಅವರ ಮನವಿ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಕೇವಿಯಟ್​ ದಾಖಲಿಸಿದೆ. ಬಂಧಿತ ನಾಯಕರ ವಿಚಾರಣೆ ನಡೆಸದೆ ಯಾವುದೇ ಆದೇಶವನ್ನು ಜಾರಿ ಮಾಡಬಾರದೆಂದು ಸಿಬಿಐ ತನ್ನ ಅರ್ಜಿಯಲ್ಲಿ ವಿನಂತಿಸಿಕೊಂಡಿದೆ.ಬಂಗಾಳ ಸರ್ಕಾರದಲ್ಲಿ ಸಚಿವರಾಗಿರುವ ಫಿರ್ಹದ್ ಹಕೀಮ್ ಮತ್ತು ಸುಬ್ರತಾ ಬ್ಯಾನರ್ಜಿ, ತೃಣಮೂಲ ಪಕ್ಷದ ಶಾಸಕ ಮದನ್ ಮಿತ್ರ ಮತ್ತು ತೃಣಮೂಲ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ ನಂತರ ಆ ಪಕ್ಷವನ್ನೂ ಬಿಟ್ಟು ಹೊರಬಂದ ಸೋವನ್ ಚಟರ್ಜಿ ಅವರನ್ನು ನಾರದಾ ಭ್ರಷ್ಟಾಚಾರ ಪ್ರಕರಣದಲ್ಲಿ ಸೋಮವಾರದಂದು ಬಂಧಿಸಲಾಗಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 7-ಗಂಟೆ ಕಾಲ ಕೊಲ್ಕತ್ತಾದ ಸಿಬಿಐ ಕಚೇರಿಯೆದುರು ಪ್ರತಿಭಟನೆ ನಡೆಸಿದ ನಂತರ ಅವರಿಗೆ ಜಾಮೀನು ಸಿಕ್ಕಿತ್ತು. ‘ಅವರನ್ನು ನಿಯಮಗಳನ್ನು ಉಲ್ಲಂಘಿಸಿ ಬಂಧಿಸಲಾಗಿದೆ, ಸಿಬಿಐ ನನ್ನನ್ನೂ ಬಂಧಿಸಬೇಕು,’ ಎಂದು ಮಮತಾ ಹೇಳಿದ್ದರು.

ಆದರೆ, ಕೊಲ್ಕತ್ತಾ ಹೈಕೋರ್ಟ್ ಸಾಯಂಕಾಲದ ಹೊತ್ತು ಅವರ ಜಾಮೀನನ್ನು ತಡೆ ಹಿಡಿಯಿತು. ಬಂಧಿತರಿಗೆ ಜಾಮೀನು ನೀಡಿದ್ದನ್ನು ಸಿಬಿಐ ಇದೇ ನ್ಯಾಯಾಲಯದಲ್ಲಿ ಪ್ರಶ್ನಿಸಿ ಸದರಿ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕೆಂದು ಕೋರಿತ್ತು.

‘ನಮ್ಮ ಕಚೇರಿಯ ಹೊರಗಡೆ ಸುಮಾರು 2,000-3,000 ತೃಣಮೂಲ ಕಾಂಗ್ರೆಸ್​ನ ಕಾರ್ಯಕರ್ತರು ಘೇರಾಯಿಸಿದ್ದಾರೆ ಮತ್ತು ಕಲ್ಲು ತೂರಾಟ ಮಾಡುವುದನ್ನು ಆರಂಭಿಸಿದ್ದಾರೆ, ಕೆಲ ನಾಯಕರು ಕಚೇರಿಯೊಳಗೆ ನುಗ್ಗಿ ಸಿಬ್ಬಂದಿಯನ್ನು ನೂಕಾಡಿದ್ದಾರೆ,’ ಎಂದು ನ್ಯಾಯಾಲಯಕ್ಕೆ ತಿಳಿಸಿದ ಸಿಬಿಐ ಮುಖ್ಯಮಂತ್ರಿ ಸಹ ಧರಣಿ ಕೂತಿದ್ದಾರೆ ಅಂತ ಹೇಳಿತ್ತು.

‘ಇದು ಅಲ್ಲಿಗೆ ನಿಲ್ಲಲಿಲ್ಲ. ಬಂಧಿತರನ್ನು ಹಾಜರುಪಡಿಸಿದ ನ್ಯಾಯಾಲಯಕ್ಕೆ ಸುಮಾರು 3,000 ಬೆಂಬಲಿಗರೊಂದಿಗೆ ತೆರಳಿದ ಕಾನೂನು ಸಚಿವರು ದಿನವಿಡೀ ಕೋರ್ಟಿನಲ್ಲೇ ಕೂತಿದ್ದರು,’ ಎಂದು ಸಿಬಿಐ ಸಲ್ಲಿಸಿರುವ ಮನವಿಯಲ್ಲಿ ಹೇಳಲಾಗಿದೆ.

‘ಇದು ಸಂಬಂಧಪಟ್ಟ ಸಿಬಿಐ ಅಧಿಕಾರಿ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ, ಮುಖ್ಯಮಂತ್ರಿಗಳು, ಕಾನೂನು ಸಚಿವರು ಮತ್ತು ಇತರ ಮಂತ್ರಿಗಳು ನೇರವಾಗಿ ಗುಂಪಿನೊಂದಿಗೆ ಕಚೇರಿಯೆದುರು ಹಾಜರಿದ್ದರು,’ ಅಂತ ಮನವಿಯಲ್ಲಿ ಹೇಳಲಾಗಿದೆ.

ಬಂಧಿತ ನಾಯಕರನ್ನು ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಧೀಶರುಗಳು ಪ್ರಕರಣದ ವಿಚಾರಣೆಯನ್ನು ಬುಧವಾರ ನಡೆಸುವುದಾಗಿ ಹೇಳಿದರು. ವಿವಾದದ ಯೋಗ್ಯತೆಯನ್ನು ಪ್ರಶ್ನಿಸುವ ಗೋಜಿಗೆ ತಾವು ಹೋಗುವುದಿಲ್ಲ ಆದರೆ, ಒತ್ತಡ ಹೇರಲು ನಡೆದಿರುವ ಪ್ರಯತ್ನಗಳು ಕಾನೂನಿನ ಪರಿಪಾಲಕರ ವಿಶ್ವಾಸದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಧೀಶರುಗಳು ಹೇಳಿದರು.

ಮಂಗಳವಾರದಂದು, ಹಿರಿಯ ವಕೀಲ ಮತ್ತು ಕಾಂಗ್ರೆಸ್ ಧುರೀಣ ಅಭಿಷೇಕ್ ಮನು ಸಿಂಘ್ವಿ ಅವರು ಮೂವರು ತೃಣಮೂಲ ಪಕ್ಷದ ನಾಯಕರ ಪರವಾಗಿ ಅರ್ಜಿ ಸಲ್ಲಿಸಿದರು. ಸೋವನ್ ಚಟರ್ಜಿ ಪರ ವಕೀಲ ಸಿದ್ದಾರ್ಥ ಲುಥ್ರಾ ಮನವಿ ಸಲ್ಲಿಸಿದರು.

ತೃಣಮೂಲ ಕಾಂಗ್ರೆಸ್ ಪಕ್ಷವು ತನ್ನ ನಾಯಕರನ್ನು ಬಂಧಿಸಿರುವ ಸಮಯವನ್ನು ಪ್ರಶ್ನಿಸುತ್ತಿದೆ. ಈ ಬಂಧನಗಳು ಬಂಗಾಳದಲ್ಲಿ ಇತ್ತೀಚಿಗೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ನಡೆದ ನೇರ ಸ್ಪರ್ಧೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ನಡೆದಿವೆ.

ಮೊದಲು ಟಿಎಮ್​ಸಿ ಪಕ್ಷದ ನಾಯಕರಾಗಿದ್ದ ಮತ್ತು ಚುನಾವಣೆಗೆ ಮುಂಚೆ ಬಿಜೆಪಿ ಸೇರಿ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಅವರನ್ನು ಸೋಲಿಸಿದ ಸುವೇಂದು ಅಧಿಕಾರಿ ಅವರ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಯಾಕೆ ಅನುಮತಿ ನೀಡಿಲ್ಲ ಎಂದು ಟಿಎಮ್​ಸಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಸದರಿ ಪ್ರಕರಣದಲ್ಲಿ ಸುವೇಂದು ಸಹ ಒಬ್ಬ ಆರೋಪಿಯಾಗಿದ್ದು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಇನ್ನೂ ಅನುಮತಿ ನೀಡಿಲ್ಲ.

ನಾರದಾ ಲಂಚ ಪ್ರಕರಣವು ನಾರದಾ ಸುದ್ದಿಸಂಸ್ಥೆಯ ಒಬ್ಬ ಪತ್ರಕರ್ತರು 2014 ರಲ್ಲಿ ಒಬ್ಬ ವ್ಯಾಪಾರೋದ್ಯಮಿಯ ಹಾಗೆ ಪೋಸ್​ ನೀಡುತ್ತಾ ಬಂಗಾಳದಲ್ಲಿ ಹೂಡಿಕೆ ಮಾಡುವ ಉತ್ಸುಕತೆ ತೋರಿ ರಾಜಕಾರಣಿಗಳಿಗೆ ಲಂಚ ನೀಡಿದ ಕುಟುಕು ಕಾರ್ಯಾಚರಣೆಯಾಗಿದೆ. ಅವರು ನೋಟಿನ ಕಂತೆಗಳನ್ನು 7 ತೃಣಮೂಲ ಪಕ್ಷದ ಸಂಸದರಿಗೆ, ಬಂಗಾಳದ ನಾಲ್ವರು ಸಚಿವರಿಗೆ, ಒಬ್ಬ ಶಾಸಕ ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ಕಂತೆ ಕಂತೆ ಹಣ ನೀಡಿ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ.

ಆ ವಿಡಿಯೋದ ಟೇಪುಗಳನ್ನು ಬಂಗಾಳದಲ್ಲಿ 2016 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಗೆ ಕೆಲವೇ ದಿನಗಳಷ್ಟು ಮೊದಲು ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: Narada Sting Case: ಸುವೇಂದು ಅಧಿಕಾರಿಯೂ ಲಂಚ ಸ್ವೀಕರಿಸಿದ್ದರು, ಅವರನ್ನೇಕೆ ಬಂಧಿಸಿಲ್ಲ; ಪತ್ರಕರ್ತ ಮ್ಯಾಥ್ಯೂ ಸ್ಯಾಮುಯೆಲ್ ಪ್ರಶ್ನೆ

Published On - 12:14 am, Wed, 19 May 21

ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ