Cyclone Yaas ಪಶ್ಚಿಮ ಬಂಗಾಳ, ಒಡಿಶಾದಲ್ಲಿ 11 ಲಕ್ಷ ಜನರ ಸ್ಥಳಾಂತರ, ನಾಳೆ ಒಡಿಶಾದ ಧಮ್ರಾ ಬಂದರು ಬಳಿ ಯಾಸ್ ಅಪ್ಪಳಿಸುವ ಸಾಧ್ಯತೆ

|

Updated on: May 25, 2021 | 8:02 PM

ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತವು ತೀವ್ರವಾದ ಚಂಡಮಾರುತವಾಗಿ ಮಾರ್ಪಾಟು ಆಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಯಾಸ್ ಅಪ್ಪಳಿಸುವ ಮೊದಲು ಮತ್ತು ನಂತರ ಆರು ಗಂಟೆಗಳ ಕಾಲ ಚಂಡಮಾರುತದ ಪರಿಣಾಮ ತೀವ್ರವಾಗಿರುತ್ತದೆ.

Cyclone Yaas ಪಶ್ಚಿಮ ಬಂಗಾಳ, ಒಡಿಶಾದಲ್ಲಿ 11 ಲಕ್ಷ ಜನರ ಸ್ಥಳಾಂತರ, ನಾಳೆ ಒಡಿಶಾದ ಧಮ್ರಾ ಬಂದರು ಬಳಿ ಯಾಸ್ ಅಪ್ಪಳಿಸುವ ಸಾಧ್ಯತೆ
ಪುರಿ ಬೀಚ್
Follow us on

ಕೊಲ್ಕತ್ತಾ: ಚಂಡಮಾರುತ ಯಾಸ್ ಕರಾವಳಿಯನ್ನು ಸಮೀಪಿಸುತ್ತಿರುವುದರಿಂದ ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ 11 ಲಕ್ಷಕ್ಕೂ ಹೆಚ್ಚು ಜನರನ್ನು ದುರ್ಬಲ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಈ ಚಂಡಮಾರುತ ಭದ್ರಾಕ್ ಜಿಲ್ಲೆಯ ಧಮ್ರಾ ಬಂದರಿನ ಬಳಿ ಬುಧವಾರ ಮುಂಜಾನೆ ಅಪ್ಪಳಿಸುವ ನಿರೀಕ್ಷೆಯಿದೆ.

ಪಶ್ಚಿಮ ಬಂಗಾಳವು ಒಂಬತ್ತು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಿದ್ದು ಒಡಿಶಾ ಸರ್ಕಾರವು ಕರಾವಳಿ ಜಿಲ್ಲೆಗಳ ದುರ್ಬಲ ಪ್ರದೇಶಗಳಿಂದ 2 ಲಕ್ಷ ಜನರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮೂರು ಉತ್ತರ ಕರಾವಳಿ ಜಿಲ್ಲೆಗಳಾದ ವಿಶಾಖಪಟ್ಟಣಂ, ವಿಜಯನಗರಂ ಮತ್ತು ಶ್ರೀಕಾಕುಲಂ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಹೇಳಿದ್ದಾರೆ.

ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತವು ತೀವ್ರವಾದ ಚಂಡಮಾರುತವಾಗಿ ಮಾರ್ಪಾಟು ಆಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಯಾಸ್ ಅಪ್ಪಳಿಸುವ ಮೊದಲು ಮತ್ತು ನಂತರ ಆರು ಗಂಟೆಗಳ ಕಾಲ ಚಂಡಮಾರುತದ ಪರಿಣಾಮ ತೀವ್ರವಾಗಿರುತ್ತದೆ. ಚಾಂದಬಾಲಿ ಗರಿಷ್ಠ ಹಾನಿಗೆ ಸಾಕ್ಷಿಯಾಗಲಿದೆ ಎಂದು ಐಎಂಡಿ ಮಹಾನಿರ್ದೇಶಕ ಡಾ.ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಭಾರತೀಯ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಚಂಡಮಾರುತವು ಪ್ಯಾರಡೀಪ್ (ಒಡಿಶಾ) ದ ಆಗ್ನೇಯಕ್ಕೆ 200 ಕಿ.ಮೀ, ಬಾಲಸೋರ್ (ಒಡಿಶಾ) ದ ಆಗ್ನೇಯಕ್ಕೆ 290 ಕಿ.ಮೀ, ದಿಘಾದ ಆಗ್ನೇಯಕ್ಕೆ (ಪಶ್ಚಿಮ ಬಂಗಾಳ) 290 ಕಿ.ಮೀ ಮತ್ತು ದಕ್ಷಿಣಕ್ಕೆ 280 ಕಿ.ಮೀ. ಸಾಗರ್ ದ್ವೀಪಗಳು (ಪಶ್ಚಿಮ ಬಂಗಾಳ)ಕ್ಕೆ ಸಾಗಲಿದೆ.

ಯಾಸ್ ಚಂಡಮಾರುತ: ಸಿದ್ಧತೆ ಪರಿಶೀಲಿಸಿದ ಒಡಿಶಾ ಸಿಎಂ ನವೀನ್ ಪಟ್ನಾಯಕ್
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ರಾಜ್ಯದಲ್ಲಿ ಯಾಸ್ ಚಂಡಮಾರುತದ ಸನ್ನದ್ಧತೆಯನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮಂಗಳವಾರ ಪರಿಶೀಲಿಸಿದ್ದಾರೆ.


ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲು ನಬನ್ನಾದಲ್ಲಿ ತಂಗಲಿದ್ದೇನೆ: ಮಮತಾ ಬ್ಯಾನರ್ಜಿ
ನಾನು ಯಾಸ್ ಚಂಡಮಾರುತದ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಾನು ಇಂದು ರಾತ್ರಿ ನಬನ್ನಾದಲ್ಲಿಯೇ ಇರುತ್ತೇನೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.


ಪಶ್ಚಿಮ ಬಂಗಾಳ: ತಗ್ಗು ಪ್ರದೇಶಗಳಿಂದ 8 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರ
ಪಶ್ಚಿಮ ಬಂಗಾಳದ 14 ಜಿಲ್ಲೆಗಳಲ್ಲಿ 8,09,830 ಜನರನ್ನು ತಗ್ಗು ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಎನ್​ಡಿಆಎರ್​ಎಫ್ ಹೇಳಿದೆ.

ಇದನ್ನೂ ಓದಿ:  Cyclone Yaas ಅತಿ ತೀವ್ರ ಚಂಡಮಾರುತವಾಗಿ ಯಾಸ್ ನಾಳೆ ಒಡಿಶಾ, ಪಶ್ಚಿಮ ಬಂಗಾಳ ಕರಾವಳಿ ದಾಟಲಿದೆ: ಭಾರತೀಯ ಹವಾಮಾನ ಇಲಾಖೆ

Cyclone Yaas: ಮಲ್ಲಿಗೆ ಚಂಡಮಾರುತ ಯಾಸ್​ ನಾಳೆಗೆ ತೀವ್ರ ಸ್ವರೂಪ, ಕೊರೊನಾ ವೈದ್ಯಕೀಯ ಪರಿಕರಗಳ ಸಾಗಣೆಗೆ ಅಡ್ಡಿ

Published On - 8:00 pm, Tue, 25 May 21