ಕೇಂದ್ರ ಸಚಿವರ ಕಾಂಗ್ರೆಸ್ ಟೂಲ್​ಕಿಟ್ ಟ್ವೀಟ್​ಗಳನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಗುರುತಿಸುವಂತೆ ಟ್ವಿಟರ್​ಗೆ ಪತ್ರ

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಹರ್ಷವರ್ಧನ್, ರಮೇಶ್ ಪೋಖ್ರಿಯಾಲ್, ರವಿಶಂಕರ್ ಪ್ರಸಾದ್, ಮತ್ತು ಸ್ಮೃತಿ ಇರಾನಿ ಟ್ವೀಟ್‌ಗಳ ಲಿಂಕ್‌ಗಳನ್ನು ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವರ ಕಾಂಗ್ರೆಸ್ ಟೂಲ್​ಕಿಟ್ ಟ್ವೀಟ್​ಗಳನ್ನು ಮ್ಯಾನಿಪುಲೇಟೆಡ್ ಮೀಡಿಯಾ ಎಂದು ಗುರುತಿಸುವಂತೆ ಟ್ವಿಟರ್​ಗೆ ಪತ್ರ
ರಣ​ದೀಪ್ ಸುರ್ಜೇವಾಲಾ
Follow us
| Updated By: ganapathi bhat

Updated on:Aug 21, 2021 | 9:51 AM

ದೆಹಲಿ: ಕಾಂಗ್ರೆಸ್ ಟೂಲ್​ಕಿಟ್​ಗೆ ಸಂಬಂಧಿಸಿದ ಸುಳ್ಳು ಮತ್ತು ದುರುದ್ದೇಶಪೂರಿತ ಸುದ್ದಿ ಹರಡಿದ್ದಕ್ಕಾಗಿ ಬಿಜೆಪಿಯ ಕೇಂದ್ರ ಮಂತ್ರಿಗಳ ಟ್ವೀಟ್​ಗಳನ್ನು ತಿರುಚಿದ (ಮ್ಯಾನಿಪುಲೇಟೆಡ್) ಎಂದು ಟ್ಯಾಗ್ ಮಾಡಲು ಕಾಂಗ್ರೆಸ್ ಮಂಗಳವಾರ ಟ್ವಿಟರ್​ಗೆ ಒತ್ತಾಯಿಸಿದೆ. ಕೊವಿಡ್ -19 ನಿರ್ವಹಣೆ ಮತ್ತು ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷದ ಬಗೆಗಿನ ನಿರೂಪಣೆಯನ್ನು ಕಾಂಗ್ರೆಸ್ ತಯಾರು ಮಾಡಿತ್ತು. ಅದನ್ನು ಬಿಜೆಪಿ ನಾಯಕರು ಕಾಂಗ್ರೆಸ್ ಟೂಲ್​ಕಿಟ್ ಎಂದು ಆರೋಪಿಸಿ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್​ ಸಿಂಗ್​ ಮತ್ತು ಪಕ್ಷದ ವಕ್ತಾರ ಸಂಬಿತ್​ ಪಾತ್ರಾ ವಿರುದ್ಧ ಛತ್ತೀಸ್​ಗಡ್​​ನಲ್ಲಿ ಎಫ್​ಐಆರ್ ದಾಖಲಾಗಿತ್ತು. ಎಐಸಿಸಿ ರಿಸರ್ಚ್​ ಡಿಪಾರ್ಟ್​​ಮೆಂಟ್​​ನ ಲೆಟರ್​ಹೆಡ್​ನ್ನು ಫೋರ್ಜರಿ ಮಾಡಿ, ಅದರಲ್ಲಿ ಸುಳ್ಳು, ಕಲ್ಪಿತ ವಿಷಯ ಪ್ರಿಂಟ್ ಮಾಡಿರುವ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರಿಬ್ಬರಿಗೂ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿದೆ ಎಂದು ರಾಯಪುರ ಸಿವಿಲ್​ ಲೈನ್ಸ್ ಪೊಲೀಸ್ ಎಸ್​ಎಚ್​ಒ ಆರ್​​ಕೆ ಮಿಶ್ರಾ ತಿಳಿಸಿದ್ದರು.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ವಿರುದ್ಧ ಕೂಡ ದೆಹಲಿ ಪೊಲೀಸರಿಗೆ ಕಾಂಗ್ರೆಸ್​ ದೂರು ನೀಡಿತ್ತು.

ಸಂಬಿತ್ ಪತ್ರಾ ಅವರ ಟ್ವೀಟ್​ನ್ನು ಟ್ಯಾಗ್ ಮಾಡುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರ ಟ್ವಿಟರ್​ಗೆ ಪತ್ರ ಬರೆದಿತ್ತು. ಟ್ಯಾಗಿಂಗ್‌ಗೆ ಸಂಬಂಧಿಸಿದಂತೆ ಟ್ವಿಟರ್‌ನಿಂದ ಸ್ಪಷ್ಟನೆ ಕೋರಿರುವುದಾಗಿ ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದರು. ಪೊಲೀಸ್ ಅಧಿಕಾರಿಗಳು ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದರು ಮತ್ತು ಟೂಲ್​ಕಿಟ್​ನ ತನಿಖೆಗೆ ಸಂಬಂಧಿಸಿ ಟ್ವಿಟರ್ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ಸಮನ್ಸ್ ನೀಡಿದ್ದರು.

ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಲಾ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಹರ್ಷವರ್ಧನ್, ರಮೇಶ್ ಪೋಖ್ರಿಯಾಲ್, ರವಿಶಂಕರ್ ಪ್ರಸಾದ್, ಮತ್ತು ಸ್ಮೃತಿ ಇರಾನಿ ಟ್ವೀಟ್‌ಗಳ ಲಿಂಕ್‌ಗಳನ್ನು ಉಲ್ಲೇಖಿಸಿದ್ದಾರೆ. ಮೇಲೆ ಹೆಸರಿಸಿದ ವಿವಿಧ ಮಂತ್ರಿಗಳು ನಕಲಿ, ಮತ್ತು ದುರುದ್ದೇಶಪೂರಿತರಾಗಿ ಮಾಡಿದ ಟೂಲ್​ಕಿಟ್​ ಟ್ವೀಟ್​ಗಳು ಟ್ವಿಟರ್​ನಲ್ಲಿವೆ. ಅವರ ಟ್ವೀಟ್​ಗಳನ್ನು ಕೂಡ ಮ್ಯಾನಿಪುಲೇಟೆಡ್ ಟ್ವೀಟ್ ಎಂಬ ಟ್ಯಾಗ್​ನೊಂದಿಗೆ ಗುರುತಿಸಬೇಕು. ಕೇಂದ್ರ ಸಚಿವರ ಅಧಿಕೃತ ಖಾತೆಯ ಮೂಲಕ ಮಾಡಿದ ಟ್ವೀಟ್​ನ್ನು ಜನರು ನಿಜವೆಂದು ನಂಬುತ್ತಾರೆ. ಹಾಗಾಗಿ ಈ ಎಲ್ಲಾ ಸಚಿವರ ಟ್ವೀಟ್​ಗಳನ್ನು ವರ್ಗೀಕರಿಸುವುದು ಅಗತ್ಯವಾಗಿದೆ ಎಂದು ಸುರ್ಜೇವಾಲ ವಾದಿಸಿದ್ದಾರೆ.

ಟೂಲ್​ಕಿಟ್ ಬಗ್ಗೆ ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ, ಸ್ಮೃತಿ ಇರಾನಿ ಮತ್ತು ಬಿ.ಎಲ್. ಸಂತೋಷ್ ಟ್ವೀಟ್​ಗಳನ್ನು ತೆಗೆದುಹಾಕಬೇಕು ಮತ್ತು ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಕೋರಿ ಕಾಂಗ್ರೆಸ್ ಕಳೆದವಾರ ಟ್ವಿಟರ್​ಗೆ ಪತ್ರ ಬರೆದಿತ್ತು.

ಇದನ್ನೂ ಓದಿ: ಟೂಲ್​ಕಿಟ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಿಗೆ ನೊಟೀಸ್ ಜಾರಿ, ಬಿಜೆಪಿಯ ಸಂಬಿತ್​ ಪಾತ್ರಾ ವಿಚಾರಣೆ ಸಾಧ್ಯತೆ

Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

Published On - 9:00 pm, Tue, 25 May 21