80ವರ್ಷ ಹಳೆಯ ಬಂಗಲೆಯನ್ನು ಖರೀದಿಸಿದ ಡಿ-ಮಾರ್ಟ್​ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ; ಇದರ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ

D-Mart: ರಾಧಾಕೃಷ್ಣನ್​ ದಮಾನಿ ಅವರಿಗೆ ಈಗ 67 ವರ್ಷ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ... ಹೂಡಿಕೆದಾರರು. ಮುಂಬೈ ಯೂನಿವರ್ಸಿಟಿಯಲ್ಲಿ ಕಾಮರ್ಸ್​ ಅಭ್ಯಾಸ ಮಾಡಿದ್ದಾರೆ. ಆದರೆ ಒಂದೇ ವರ್ಷ ಓದಿ, ಅರ್ಧಕ್ಕೇ ಬಿಟ್ಟರು.

80ವರ್ಷ ಹಳೆಯ ಬಂಗಲೆಯನ್ನು ಖರೀದಿಸಿದ ಡಿ-ಮಾರ್ಟ್​ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ; ಇದರ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ
ರಾಧಾಕೃಷ್ಣನ್​ ದಮಾನಿ
Follow us
Lakshmi Hegde
|

Updated on: Apr 04, 2021 | 12:06 PM

ಮುಂಬೈ: ಡಿ-ಮಾರ್ಟ್ ಸಂಸ್ಥಾಪಕ ರಾಧಾಕೃಷ್ಣನ್​ ದಮಾನಿ ದಕ್ಷಿಣ ಮುಂಬೈನ ನಾರಾಯಣ್​ ಧಾಬೋಲ್ಕರ್​ ರಸ್ತೆಯಲ್ಲಿ ಬಂಗಲೆಯೊಂದನ್ನು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ ಎಂದು ಕೇಳಬೇಡಿ.. ಇದರ ಬೆಲೆ ಕೇಳಿದರೆ ಖಂಡಿತ ನೀವೂ ಹುಬ್ಬೇರಿಸುತ್ತೀರಿ. ಟೋನಿ ಮಲ್​ಬಾರ್​ ಹಿಲ್ಸ್​​ನಲ್ಲಿ 1.5 ಎಕರೆ ಜಾಗದಲ್ಲಿ ಇರುವ ಮಧು ಕುಂಜ್​ ಎಂಬ ಹೆಸರಿನ ಈ ಬಂಗಲೆಯ ಬೆಲೆ ಬರೋಬ್ಬರಿ 1001 ಕೋಟಿ ರೂಪಾಯಿ !

ಬಂಗಲೆ ಅಂದಾಜು 80 ವರ್ಷ ಹಳೆಯದಿರಬಹುದು. ಆರ್ಟ್​ ಡೆಕೋ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ನೆಲ ಮತ್ತು ಒಂದು ಅಂತಸ್ತಿದೆ. ನಮ್ಮ ಪರಂಪರೆಯ ವೈಶಿಷ್ಟ್ಯಗಳನ್ನು ಬಿಂಬಿಸುತ್ತಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ. ರಾಧಾಕೃಷ್ಣನ್​ ದಮಾನಿ ಮತ್ತು ಅವರ ಸೋದರ ಗೋಪಿಕೃಷ್ಣನ್​ ದಮಾನಿ ಸೇರಿ ಮಾರ್ಚ್​ 31ರಂದು ಬಂಗಲೆಯನ್ನು ಖರೀದಿಸಿದ್ದು, ನೋಂದಣಿಯ ಸಂದರ್ಭದಲ್ಲಿ 30 ಕೋಟಿ ರೂಪಾಯಿ ಸ್ಟಾಂಪ್​ ಡ್ಯೂಟಿ ಪಾವತಿಸಿದ್ದಾರೆ ಎಂದು ರಿಯಲ್​ ಎಸ್ಟೇಟ್ ಮಾರುಕಟ್ಟೆ ಮೂಲಗಳು ತಿಳಿಸಿವೆ.

19ನೇ ಶತಮಾನದ ಉದ್ಯಮಿಗೆ ಸೇರಿದ ಬಂಗಲೆ ಈಗ ರಾಧಾಕೃಷ್ಣನ್​ ದಮಾನಿ ಖರೀದಿಸಿರುವ ಈ ಬಂಗಲೆ 19ನೇ ಶತಮಾನದ, ಮುಂಬೈನ ಖ್ಯಾತ ಉದ್ಯಮಿ ಪ್ರೇಮ್​ಚಂದ್​ ರಾಯ್​ಚಂದ್​ ಅವರಿಗೆ ಸೇರಿದ್ದು. ಇವರನ್ನು ಕಾಟನ್ ಕಿಂಗ್​ ಎಂದೇ ಕರೆಯಲಾಗುತ್ತಿತ್ತು. ಪ್ರೇಮ್​ಚಂದ್​ ಅವರ ಪೂರ್ವಜರು ಕಟ್ಟಿಸಿದ್ದ ಮನೆಯಾಗಿತ್ತು ಎಂದು ಸ್ಥಳೀಯರು, ಆ ಬಂಗಲೆಯ ಬಗ್ಗೆ ಗೊತ್ತಿದ್ದವರು ತಿಳಿಸಿದ್ದಾರೆ. ಈ ಬಂಗಲೆ, ದಕ್ಷಿಣ ಮುಂಬೈನ ದುಬಾರಿ ವಸತಿ ಪ್ರದೇಶ ಎನಿಸಿಕೊಂಡಿರುವ ನಾರಾಯಣ ಧಾಬೋಲ್ಕರ್​ ರಸ್ತೆಯ ಮೂಲೆಯಲ್ಲಿ ಇದೆ. ಇಲ್ಲಿನ ಅಪಾರ್ಟ್​ಮೆಂಟ್​ಗಳಲ್ಲೇ, ಚದರ್​ ಅಡಿಗೆ 70 ಸಾವಿರದಿಂದ 80 ಸಾವಿರ ರೂ.ವರೆಗೆ ದರ ನಿಗದಿ ಮಾಡಿವೆ. ಈ ಆಸುಪಾಸಿನ ಹಲವು ವಿಐಪಿಗಳ ಬಂಗಲೆಗಳೂ ಇವೆ.

ರಾಧಾಕೃಷ್ಣನ್​ ದಮಾನಿ ಯಾರು? ರಾಧಾಕೃಷ್ಣನ್​ ದಮಾನಿ ಅವರಿಗೆ ಈಗ 67 ವರ್ಷ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ… ಹೂಡಿಕೆದಾರರು. ಮುಂಬೈ ಯೂನಿವರ್ಸಿಟಿಯಲ್ಲಿ ಕಾಮರ್ಸ್​ ಅಭ್ಯಾಸ ಮಾಡಿದ್ದಾರೆ. ಆದರೆ ಒಂದೇ ವರ್ಷ ಓದಿ, ಅರ್ಧಕ್ಕೇ ಬಿಟ್ಟರು. 2001ರಲ್ಲಿ ಡಿ-ಮಾರ್ಟ್​ ರಿಟೇಲ್​ ಕಂಪನಿಯನ್ನು ಸ್ಥಾಪಿಸಿದ್ದಾರೆ. ಇದರ ಪ್ರಧಾನ ಕಚೇರಿ ಮುಂಬೈನಲ್ಲಿದ್ದು, ದೇಶಾದ್ಯಂತ ಮಾರ್ಟ್​ಗಳಿವೆ. ಜನರ ನಂಬಿಕೆಯನ್ನೂ ಗಳಿಸಿದ ಕಂಪನಿ ಇದು. ಈ ಹಿಂದೆ ಒಂದೇ ಕೋಣೆಯ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ ರಾಧಾಕೃಷ್ಣನ್​ ದಮಾನಿ ಇದೀಗ ಬರೋಬ್ಬರಿ 1001 ಕೋಟಿ ರೂಪಾಯಿ ಮೌಲ್ಯದ ಬಂಗಲೆಯನ್ನೇ ಖರೀದಿಸಿದ್ದಾರೆ.

ಇದನ್ನೂ ಓದಿ: ಕೆ.ಮಂಜು ಯಾರು ಎಂದೇ ನನಗೆ ಗೊತ್ತಿಲ್ಲ; ಸಚಿವ ಡಾ.ಕೆ.ಸುಧಾಕರ್​ ತಿರುಗೇಟು

ಚಹಲ್-ಧನಶ್ರೀ ಮದುವೆ ಮೂವಿ ರಿಲೀಸ್: ಸಖತ್​ ಸ್ಟೆಪ್ಸ್​ ಹಾಕಿದ ಕ್ರಿಕೆಟಿಗರು, ಕಾಮಿಡಿ ಮೂಡ್​ನಲ್ಲಿ ಚಹಲ್.. ವಿಡಿಯೋ ನೋಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ