AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dabur India: ಮಧ್ಯಪ್ರದೇಶ ಸಚಿವರಿಂದ ಕಾನೂನು ಕ್ರಮದ ಎಚ್ಚರಿಕೆ; ಸಲಿಂಗಿ ಜೋಡಿಯ ಕರ್ವಾ ಚೌತ್​ ಜಾಹೀರಾತು ವಾಪಸ್​ ಪಡೆದ ಡಾಬರ್​ ಇಂಡಿಯಾ

ಡಾಬರ್ ಇಂಡಿಯಾದ ಫೆಮ್​ ಜಾಹೀರಾತು ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ವಿಪರೀತ ವಿರೋಧ ವ್ಯಕ್ತವಾಗಿತ್ತು. ಹಾಗೇ ಇನ್ನೂ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು.

Dabur India: ಮಧ್ಯಪ್ರದೇಶ ಸಚಿವರಿಂದ ಕಾನೂನು ಕ್ರಮದ ಎಚ್ಚರಿಕೆ; ಸಲಿಂಗಿ ಜೋಡಿಯ ಕರ್ವಾ ಚೌತ್​ ಜಾಹೀರಾತು ವಾಪಸ್​ ಪಡೆದ ಡಾಬರ್​ ಇಂಡಿಯಾ
ವಿವಾದ ಸೃಷ್ಟಿಸಿದ್ದ ಜಾಹೀರಾತು
TV9 Web
| Updated By: Lakshmi Hegde|

Updated on:Oct 26, 2021 | 12:55 PM

Share

ಭೋಪಾಲ್​: ಕರ್ವಾ ಚೌತ್​ ಹಬ್ಬಕ್ಕಾಗಿ ಡಾಬರ್​ ಇಂಡಿಯಾ ಲಿಮಿಟೆಡ್​​ ಜಾಹೀರಾತೊಂದನ್ನು ನಿರ್ಮಿಸಿ, ಬಿಡುಗಡೆ ಮಾಡಿತ್ತು. ಆದರೆ ಅದು ದೊಡ್ಡ ವಿವಾದ ಸೃಷ್ಟಿಸಿದ್ದಲ್ಲದೆ, ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್​ ಮಿಶ್ರಾ ಅವರೂ ಕೂಡ ತೀವ್ರವಾಗಿ ಟೀಕಿಸಿದ್ದರು. ಇದೊಂದು ಆಕ್ಷೇಪಾರ್ಹ ಸಂಗತಿಗಳನ್ನೊಳಗೊಂಡ ಜಾಹೀರಾತಾಗಿದ್ದು, ಕೂಡಲೇ ವಾಪಸ್​ ಪಡೆಯದೆ ಇದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಡಾಬರ್​ ಇಂಡಿಯಾ ಆ ಜಾಹೀರಾತನ್ನು ಇದೀಗ ವಾಪಸ್​ ಪಡೆದಿದೆ. 

ಕರ್ವಾ ಚೌತ್​ ಎಂಬುದು ಪತಿಯ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಪತ್ನಿಯರು ಮಾಡುವ ವ್ರತ. ಆದರೆ ಡಾಬರ್​ ಇಂಡಿಯಾ ಫೆಮ್​ ಫೇರ್​ನೆಸ್​ ಉತ್ಪನ್ನದ ಪ್ರಮೋಶನ್​​ಗಾಗಿ ಕರ್ವಾ ಚೌತ್​ ಕಲ್ಪನೆಯ ಜಾಹೀರಾತಿನಲ್ಲಿ ಸಲಿಂಗಿ ಜೋಡಿಗಳು ಇದ್ದುದೇ ಈ ಆಕ್ಷೇಪಕ್ಕೆ ಕಾರಣ. ಮೊದಲು ಯುವತಿಯರಿಬ್ಬರು ಫೆಮ್​​ ಹಚ್ಚಿ ಮುಖವನ್ನೆಲ್ಲ ಬ್ಲೀಚ್​ ಮಾಡಿಕೊಂಡು ಕರ್ವಾ ಚೌತ್​ ವ್ರತಕ್ಕೆ ಸಿದ್ಧರಾಗುವುದು ಗೊತ್ತಾಗುತ್ತದೆ. ಆದರೆ ಕೊನೆಯಲ್ಲಿ ಜರಡಿಯನ್ನು ಚಂದ್ರನಿಗೆ ಹಿಡಿದ ಬಳಿಕ ಅವರಿಬ್ಬರೂ ಪರಸ್ಪರರ ಮುಖಕ್ಕೆ ಹಿಡಿದುಕೊಂಡಾಗಲೇ ಗೊತ್ತಾಗುತ್ತದೆ ಅವರಿಬ್ಬರೂ ಸಲಿಂಗಿ ಜೋಡಿ ಮತ್ತು ಪರಸ್ಪರರ ಆಯುಷ್ಯ, ಆರೋಗ್ಯಕ್ಕಾಗಿ ವ್ರತ ಹಿಡಿದಿದ್ದರು ಎಂಬುದು. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿತ್ತು.  ಸುಮಾರು 1.06ನಿಮಿಷದ ಜಾಹೀರಾತನ್ನು ಇದೀಗ ಕಂಪನಿ ವಾಪಸ್​ ಪಡೆದಿದೆ. ಅದರ ಸಾಮಾಜಿಕ ಜಾಲತಾಣಗಳಿಂದಲೂ ಡಿಲೀಟ್​ ಮಾಡಿದೆ.

ಜಾಹೀರಾತಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಮಧ್ರಪ್ರದೇಶ ಸಚಿವ ಮಿಶ್ರಾ, ಡಾಬರ್ ಕಂಪನಿಯವರು ಇಂದು ಮಹಿಳೆಯರಿಬ್ಬರು ಕರ್ವಾ ಚೌತ್​ ಆಚರಿಸುತ್ತಿರುವುದನ್ನು ತೋರಿಸಿದ್ದಾರೆ. ನಾಳೆ ಇಬ್ಬರು ಪುರುಷರು ಮದುವೆಯಾಗುವುದನ್ನು ಜಾಹೀರಾತಿನಲ್ಲಿ ಅಳವಡಿಸಿಕೊಳ್ಳುತ್ತಾರೆ. ನಾವು ಇಂಥ ಆಕ್ಷೇಪಣಾ ವಿಚಾರಗಳನ್ನು ಒಳಗೊಂಡ ಆ್ಯಡ್​​ಗಳನ್ನೆಲ್ಲ ಭಿತ್ತರಿಸಲು ಅವಕಾಶ ಕೊಡುವುದಿಲ್ಲ. ಇತರರ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಜಾಹೀರಾತು ಇದು ಎಂದಿದ್ದರು. ಕಾನೂನು ಹೋರಾಟ ಮಾಡುವುದಾಗಿಯೂ ಹೇಳಿದ್ದರು. ಅದಾದ ಕೆಲವೇ ಹೊತ್ತಲ್ಲಿ ಡಾಬರ್​ ಇಂಡಿಯಾ ಫೆಮ್​ ಜಾಹೀರಾತನ್ನು ವಾಪಸ್​ ಪಡೆದಿದೆ. ಬೇಷರತ್ತು ಕ್ಷಮೆ ಕೋರುವುದಾಗಿ ಹೇಳಿದೆ.  ಹಾಗೇ, ಯಾರದ್ದೇ ಭಾವನೆಗೆ ನೋವು ಉಂಟು ಮಾಡುವ ಉದ್ದೇಶ ಇರಲಿಲ್ಲ ಎಂದು ಹೇಳಿಕೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ಇನ್ನು ಡಾಬರ್ ಇಂಡಿಯಾದ ಫೆಮ್​ ಜಾಹೀರಾತು ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲೂ ವಿಪರೀತ ವಿರೋಧ ವ್ಯಕ್ತವಾಗಿತ್ತು. ಹಾಗೇ ಇನ್ನೂ ಹಲವರು ಬೆಂಬಲವನ್ನೂ ವ್ಯಕ್ತಪಡಿಸಿದ್ದರು. ಆದರೆ  BoycottFem ಎಂಬ ಹ್ಯಾಷ್​ಟ್ಯಾಗ್​ ಹೆಚ್ಚಿನ ಸದ್ದು ಮಾಡಿತ್ತು.  ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಲಾಗಿದ್ದರೂ ಭಾರತದಲ್ಲಿ ಅದನ್ನು ಪ್ರತಿಶತ ನೂರಕ್ಕೆ ನೂರರಷ್ಟು ಒಪ್ಪಿಕೊಂಡಿಲ್ಲ. ಈ ಹೊತ್ತಲ್ಲಿ ಇಂಥ ಜಾಹೀರಾತುಗಳು ಬೇಕಾ?, ಹಬ್ಬಕ್ಕೇ ಅವಮಾನ ಎಂಬಿತ್ಯಾದಿ ಕಟು ಕಾಮೆಂಟ್​​ಗಳೂ ಎದುರಾಗಿದ್ದವು.

ಇದನ್ನೂ ಓದಿ: ಮಂಗಳೂರು: ಮೀನಿಗೆ ಹಾಕಿದ ಬಲೆಗೆ ಬಿದ್ದ ತಿಮಿಂಗಿಲ; ಮೀನುಗಾರರು ಶಾಕ್

IND vs NZ: ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮುಂದಿನ ಪಂದ್ಯವೂ ಸೋತರೆ ಏನಾಗಲಿದೆ?: ಇಲ್ಲಿದೆ ಮಾಹಿತಿ

Published On - 12:52 pm, Tue, 26 October 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!