ದಲೈ ಲಾಮಾಗೆ ಭಾರತದಾದ್ಯಂತ ಝಡ್ ಕೆಟಗರಿಯ ಭದ್ರತೆ

ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಕೇಂದ್ರ ಗೃಹ ಸಚಿವಾಲಯ ಝಡ್-ಕೆಟಗರಿಯ ಭದ್ರತೆಯನ್ನು ನೀಡಿದೆ. ಅವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 89 ವರ್ಷದ ನಾಯಕ ದಲೈ ಲಾಮಾ ಅವರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಕೇಂದ್ರ ಗೃಹ ಸಚಿವಾಲಯವು ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್​ಪಿಎಫ್) ವಿಐಪಿ ಭದ್ರತಾ ವಿಭಾಗಕ್ಕೆ ಸೂಚನೆ ನೀಡಿದೆ.

ದಲೈ ಲಾಮಾಗೆ ಭಾರತದಾದ್ಯಂತ ಝಡ್ ಕೆಟಗರಿಯ ಭದ್ರತೆ
Dalai Lama

Updated on: Feb 13, 2025 | 7:27 PM

ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಇರುವ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದಾದ್ಯಂತ ಝಡ್-ಕೆಟಗರಿಯ ಭದ್ರತೆ ಒದಗಿಸಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಭದ್ರತೆಯನ್ನು ನೀಡಲಾಗಿದೆ. 89 ವರ್ಷದ ನಾಯಕ ದಲೈ ಲಾಮಾ ಅವರ ರಕ್ಷಣೆಗೆ CRPF ವಿಐಪಿ ಭದ್ರತಾ ವಿಭಾಗವು ಜವಾಬ್ದಾರವಾಗಿರುತ್ತದೆ. ಮೂಲಗಳ ಪ್ರಕಾರ, ದಲೈ ಲಾಮಾ ಅವರಿಗೆ ಝಡ್- ಕೆಟಗರಿಯ ರಕ್ಷಣೆ ನೀಡಲಾಗುವುದು. ಸಿಆರ್​ಪಿಎಫ್ ಕಮಾಂಡೋಗಳು ದೇಶಾದ್ಯಂತ ದಲೈ ಲಾಮಾ ಅವರಿಗೆ ಭದ್ರತೆಯನ್ನು ನೀಡಲಿದ್ದಾರೆ.

30 CRPF ಕಮಾಂಡೋಗಳು ಪಾಳಿಯಲ್ಲಿ ಕೆಲಸ ಮಾಡುತ್ತಾರೆ. ದಲೈ ಲಾಮಾ ಅವರಿಗೆ ಹಿಮಾಚಲ ಪ್ರದೇಶದ ಪೊಲೀಸರಿಂದ ರಕ್ಷಣೆ ಇತ್ತು. ಅವರು ದೆಹಲಿ ಅಥವಾ ಯಾವುದೇ ಇತರ ಸ್ಥಳಕ್ಕೆ ಪ್ರಯಾಣಿಸಿದಾಗ ಸ್ಥಳೀಯ ಪೊಲೀಸರು ಭದ್ರತೆಯನ್ನು ನೀಡುತ್ತಿದ್ದರು. ಆದರೆ, ಕೇಂದ್ರ ಗುಪ್ತಚರ ಸಂಸ್ಥೆಗಳ ಪರಿಶೀಲನೆಯ ನಂತರ ಸರ್ಕಾರ ಈಗ ಅವರಿಗೆ ಏಕರೂಪದ ಭದ್ರತಾ ವ್ಯವಸ್ಥೆಯನ್ನು ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ ಭಾರತದ ಕಿರೀಟ, ಭೂಮಿಯ ಸ್ವರ್ಗ; ಝಡ್-ಮೋಡ್ ಸುರಂಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ದಲೈ ಲಾಮಾ ಅವರ ಭದ್ರತೆಗಾಗಿ ಸುಮಾರು 30 ಸಿಆರ್‌ಪಿಎಫ್ ಕಮಾಂಡೋಗಳ ತಂಡವು ಪಾಳಿಯಲ್ಲಿ ಕೆಲಸ ಮಾಡಲಿದೆ ಎಂದು ಅಧಿಕಾರಿಗಳು ಹೇಳಿದರು. ಇದೇ ರೀತಿಯ ನಿರ್ಧಾರದಲ್ಲಿ, ಗೃಹ ಸಚಿವಾಲಯವು ಮಣಿಪುರದಲ್ಲಿ ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರಿಗೆ ಕೂಡ ಝಡ್-ಕೆಟಗರಿ ಭದ್ರತೆಯನ್ನು ನೀಡಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸುಮಾರು 2 ವರ್ಷಗಳಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದ ಹಿನ್ನೆಲೆಯಲ್ಲಿ ಸಂಬಿತ್ ಪಾತ್ರಾ ಅವರಿಗೆ ಈ ರಕ್ಷಣೆ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ