ಜಮ್ಮು ಕಾಶ್ಮೀರ ಭಾರತದ ಕಿರೀಟ, ಭೂಮಿಯ ಸ್ವರ್ಗ; ಝಡ್-ಮೋಡ್ ಸುರಂಗ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
ಕಾಶ್ಮೀರವು ತನ್ನ 'ಭೂಮಿಯ ಮೇಲಿನ ಸ್ವರ್ಗ' ಗುರುತನ್ನು ಮರಳಿ ಪಡೆಯುತ್ತಿದೆ. ಜಮ್ಮು ಕಾಶ್ಮೀರ ಭಾರತದ ಕಿರೀಟವಾಗಿದೆ ಎಂದು ಝಡ್-ಮೋಡ್ ಸುರಂಗವನ್ನು ಉದ್ಘಾಟಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಪ್ರಾಣ ತ್ಯಾಗ ಮಾಡಿದ ಕಾರ್ಮಿಕರನ್ನು ಗೌರವಿಸಿದರು. ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಸಂಪರ್ಕವನ್ನು ಹೆಚ್ಚಿಸುವ ಯೋಜನೆಯ ಸಾಮರ್ಥ್ಯವನ್ನು ಮೋದಿ ಒತ್ತಿ ಹೇಳಿದರು.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸೋನಾಮಾರ್ಗ್‌ಗೆ ವರ್ಷಪೂರ್ತಿ ಸಂಪರ್ಕವನ್ನು ಕಲ್ಪಿಸುವ ಝಡ್-ಮೋಡ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಜಮ್ಮು ಮತ್ತು ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಲ್ಲಿ ಇಂದು 6.5 ಕಿ.ಮೀ ಉದ್ದದ ಝಡ್-ಮೋಡ್ ಸುರಂಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದು ಸೋನಾಮಾರ್ಗ್ ಪ್ರವಾಸಿ ರೆಸಾರ್ಟ್‌ಗೆ ವರ್ಷಪೂರ್ತಿ ಪ್ರವೇಶವನ್ನು ಒದಗಿಸುತ್ತದೆ. ಹಾಗೇ, ಈ ಹಿಂದೆ ಉಗ್ರರ ದಾಳಿಗೆ ಬಲಿಯಾದವರಿಗೆ ಗೌರವ ಸಲ್ಲಿಸಿದರು.
ಸುರಂಗದ ಉದ್ಘಾಟನೆಯ ನಂತರ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸೋನಾಮಾರ್ಗ್‌ನ ಝಡ್-ಮೋಡ್ ಸುರಂಗದ ಬಳಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ 7 ಜನರಿಗೆ ಇಂದು ಗೌರವ ಸಲ್ಲಿಸಿದರು. ಕಾಶ್ಮೀರ ತನ್ನ ‘ಭೂಮಿ ಮೇಲಿನ ಸ್ವರ್ಗ’ ಗುರುತನ್ನು ಮರಳಿ ಪಡೆಯುತ್ತಿದೆ ಎಂದು ಮೋದಿ ಹೇಳಿದರು.
#WATCH | Sonamarg: On the inauguration of the Z-Morh tunnel, Prime Minister Narendra Modi says, “You can be sure, this is Modi. If he makes a promise, he keeps it. There is a time for every work and the right work is going to be done at the right time. The Sonamarg tunnel will… pic.twitter.com/rSbRz7oBYd
— ANI (@ANI) January 13, 2025
ಇದನ್ನೂ ಓದಿ: Mahakumbh Mela 2025: ಮಹಾಕುಂಭವು ಅನಾದಿ ಕಾಲದ ಆಧ್ಯಾತ್ಮಿಕ ಪರಂಪರೆಯ ಸಂಕೇತ, ನಂಬಿಕೆ, ಸಾಮರಸ್ಯದ ಆಚರಣೆ: ಮೋದಿ
“ದೇಶ ಮತ್ತು ಜಮ್ಮು ಕಾಶ್ಮೀರದ ಪ್ರಗತಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಅತ್ಯಂತ ಕಷ್ಟಕರ ಸಂದರ್ಭಗಳಲ್ಲಿ ಕೆಲಸ ಮಾಡಿದ ಎಲ್ಲಾ ಸಹೋದರರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.” ಅಲ್ಲದೆ, ನಮ್ಮ 7 ಕಾರ್ಮಿಕ ಸಹೋದ್ಯೋಗಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆದರೆ ಬೇರೆಯವರು ಎಲ್ಲಾ ಸವಾಲುಗಳನ್ನು ನಿವಾರಿಸುವ ಮೂಲಕ ಈ ಕಾರ್ಯವನ್ನು ಪೂರ್ಣಗೊಳಿಸಿದರು. ಇಂದು, ನಾವು ಕಳೆದುಕೊಂಡ ಆ 7 ಸಹೋದ್ಯೋಗಿಗಳನ್ನು ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ” ಎಂದು ಪ್ರಧಾನಿ ಹೇಳಿದರು.
#WATCH | Sonamarg, Jammu & Kashmir: After inaugurating the Z-Morh tunnel, Prime Minister Narendra Modi inspects the tunnel.
CM Omar Abdullah, LG Manoj Sinha and Union Minister Nitin Gadkari are also present.
(Source: DD/ANI) #KashmirOnTheRise pic.twitter.com/FbOP7COfzm
— ANI (@ANI) January 13, 2025
“ಕಷ್ಟದ ದಿನಗಳನ್ನು ದಾಟಿ ನಮ್ಮ ಕಾಶ್ಮೀರ ಮತ್ತೊಮ್ಮೆ ಭೂಮಿಯ ಮೇಲಿನ ಸ್ವರ್ಗ ಎಂಬ ಗುರುತನ್ನು ಮರಳಿ ಪಡೆಯುತ್ತಿದೆ. ಈಗ ಜನರು ಸಂಜೆ ಲಾಲ್ ಚೌಕ್‌ಗೆ ಐಸ್ ಕ್ರೀಮ್ ಸವಿಯಲು ಹೋಗುತ್ತಿದ್ದಾರೆ. ರಾತ್ರಿಯೂ ಸಹ ಅಲ್ಲಿ ರೋಮಾಂಚಕ ವಾತಾವರಣವಿರುತ್ತದೆ. ಇಲ್ಲಿನ ಸಂಗೀತಗಾರರು, ಕಲಾವಿದರು ಮತ್ತು ಗಾಯಕರು ಅಲ್ಲಿ ನಿರಂತರವಾಗಿ ಪ್ರದರ್ಶನ ನೀಡುವುದನ್ನು ನಾನು ಸಾಮಾಜಿಕ ಮಾಧ್ಯಮದಲ್ಲಿ ನೋಡುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.
#WATCH | Sonamarg: On the inauguration of the Z-Morh tunnel, Prime Minister Narendra Modi says, “First of all, I would like to thank all the brothers who worked in the most difficult circumstances, risking their lives, for the progress of the country and Jammu and Kashmir. Also,… pic.twitter.com/zfomP9VgDF
— ANI (@ANI) January 13, 2025
ಇದನ್ನೂ ಓದಿ: Z-Morh tunnel: ಕಾಶ್ಮೀರದಲ್ಲಿಂದು ಝಡ್-ಮೋಡ್ ಸುರಂಗ ಮಾರ್ಗ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
“ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು. ಅದರ ವೀಡಿಯೊ ಕೂಡ ವೈರಲ್ ಆಗಿತ್ತು. ದೆಹಲಿಯಲ್ಲಿ ಅವರನ್ನು ಭೇಟಿಯಾದಾಗ ನಾನು ಅವರನ್ನು ವಿಶೇಷವಾಗಿ ಅಭಿನಂದಿಸಿದ್ದೆ. ಇದು ಜಮ್ಮು ಮತ್ತು ಕಾಶ್ಮೀರದ ಹೊಸ ಯುಗ ಆರಂಭವಾಗಿದೆ ಎಂದಿದ್ದೆ” ಎಂದು ಅವರು ಹೇಳಿದರು.
#WATCH | Sonamarg: On the inauguration of the Z-Morh tunnel, Prime Minister Narendra Modi says, “Two days ago, our CM Omar Abdullah posted some pictures of this place on social media. After seeing those pictures, my eagerness to come here among you increased even more. As the… pic.twitter.com/y14moB7zyy
— ANI (@ANI) January 13, 2025
“ಇಂದು ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ಎಷ್ಟು ರಸ್ತೆಗಳು, ಸುರಂಗಗಳು ಮತ್ತು ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಿ. ನಮ್ಮ ಜಮ್ಮು ಮತ್ತು ಕಾಶ್ಮೀರ ಈಗ ಸುರಂಗಗಳು ಮತ್ತು ಎತ್ತರದ ಕಟ್ಟಡಗಳ ಕೇಂದ್ರವಾಗುತ್ತಿದೆ. ವಿಶ್ವದ ಅತಿ ಎತ್ತರದ ಸುರಂಗ, ವಿಶ್ವದ ಅತಿ ಎತ್ತರದ ರೈಲು ಸೇತುವೆ ಮತ್ತು ವಿಶ್ವದ ಅತಿ ಎತ್ತರದ ರೈಲುಮಾರ್ಗಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಕಾಶ್ಮೀರದಲ್ಲಿ 42,000 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಯೋಜನೆಗಳ ಕೆಲಸ ನಡೆಯುತ್ತಿದೆ. 2024ರಲ್ಲಿ 2 ಕೋಟಿಗೂ ಹೆಚ್ಚು ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು” ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:07 pm, Mon, 13 January 25