Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ವರದಿಂದ ಬಳಲುತ್ತಿದ್ದರೂ ಅಧಿವೇಶನದಲ್ಲಿ ಭಾಗಿಯಾಗಿ ಬೆಂಗಳೂರು ನಿವಾಸಿಗಳ ನೀರಿನ ಬವಣೆ ವಿವರಿಸಿದ ದೇವೇಗೌಡ

ಜ್ವರದಿಂದ ಬಳಲುತ್ತಿದ್ದರೂ ಅಧಿವೇಶನದಲ್ಲಿ ಭಾಗಿಯಾಗಿ ಬೆಂಗಳೂರು ನಿವಾಸಿಗಳ ನೀರಿನ ಬವಣೆ ವಿವರಿಸಿದ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 13, 2025 | 8:01 PM

ಬೆಂಗಳೂರಿನ ನಿವಾಸಿಗಳು ಕುಡಿಯುವ ನೀರಿಗಾಗಿ ಪರಿತಪಿಸುವ ಸನ್ನಿವೇಶ ಸೃಷ್ಟಿಯಾಗಿದೆ, ಗೋದಾವರಿ ಮತ್ತು ಕಾವೇರಿ ನದಿಗಳ ನೀರು ಕುಡಿಯಲು ಸಿಗುವಂತೆ ಮಾಡಲು ತಾನು ಕಳಕಳಿ ಮತ್ತು ಕೈಜೋಡಿಸಿ ಮನವಿ ಮಾಡುತ್ತೇನೆ ಎಂದು ದೇವೇಗೌಡರು ಹಣಕಾಸು ಸಚಿಎವ ನಿರ್ಮಲಾ ಸೀತಾರಾಮನ್ ಅವರಿಗೆ ಹೇಳುತ್ತಾರೆ. ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ಜನ ಮನಬಂದಂತೆ ಹಣ ವಸೂಲಿ ಮಾಡುತ್ತಾ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಗದ್ಗಿತ ಸ್ವರದಲ್ಲಿ ಅವರು ಹೇಳುತ್ತಾರೆ.

ದೆಹಲಿ: ಮಾಜಿ ಪ್ರಧಾನ ಮಂತ್ರಿ ಮತ್ತು ಹಿರಿಯ ಮುತ್ಸದ್ದಿ ಹೆಚ್ ಡಿ ದೇವೇಗೌಡ ಅವರು ಉತ್ತಮ ಸಂಸದೀಯ ಪಟುವೂ ಹೌದು ಅನ್ನೋದರಲ್ಲಿ ಎರಡು ಮಾತಿಲ್ಲ. ನಮಗೆಲ್ಲ ಗೊತ್ತಿದೆ, ಅಧಿವೇಶನಗಳು ನಡೆಯೋದೇ ಎರಡು-ಮೂರು ವಾರಗಳ ಅವಧಿಗೆ ಮಾತ್ರವಾದರೂ ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆ ಅಯ್ಕೆಯಾದ ಬಹಳಷ್ಟು ಜನಪ್ರತಿನಿಧಿಗಳು ಸದನಗಳ ಕಲಾಪದಲ್ಲಿ ಭಾಗಿಯಾಗಲ್ಲ. ರಾಜ್ಯಸಭಾ ಸದಸ್ಯರಾಗಿರುವ ದೇವೇಗೌಡರು 92ರ ಇಳಿವಯಸ್ಸು ಮತ್ತು ಜ್ವರದಿಂದ ಬಳಲುತ್ತಿದ್ದರೂ ಇವತ್ತಿನ ಚರ್ಚೆಯಲ್ಲಿ ಭಾಗಿಯಾಗಿ ರಾಜ್ಯದ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದಿದ್ದಾರೆ. ಸದನಕ್ಕೆ ಗೈರಾಗಲು ತನ್ನ ಆತ್ಮಸಾಕ್ಷಿ ಒಪ್ಪಲಿಲ್ಲ ಎಂದು ಅವರು ಹೇಳುತ್ತಾರೆ. ರಾಜ್ಯಸಭೆಯ ಅಧ್ಯಕ್ಷರಾಗಿರುವ ಜಗದೀಪ್ ಧನ್​ಕರ್ ಅವರು, ಸರ್, ಆಯಾಸ ಮಾಡ್ಕೋಬೇಡಿ, ನಿಮ್ಮ ಪೇಪರ್​ಗಳನ್ನು ಟೇಬಲ್ ಮೇಲಿಡಿ ಸಾಕು ಅನ್ನುತ್ತಾರೆ. ಅದರೂ ದೇವೇಗೌಡರು ತಮ್ಮ ಮಾತನ್ನು ಮಂಡಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸೋಲು-ಗೆಲುವು ರಾಜಕೀಯ ಪಕ್ಷವೊಂದರ ಅಸ್ತಿತ್ವವನ್ನು ನಿರ್ಧರಿಸುವುದಿಲ್ಲ: ಹೆಚ್ ಡಿ ದೇವೇಗೌಡ