HTT 40 ಟ್ರೈನಿ ಏರ್ ಕ್ರಾಫ್ಟ್ನಲ್ಲಿ ಸಂಸದ ತೇಜಸ್ವಿ ಸೂರ್ಯ ಹಾರಾಟ
ಏರೋ ಇಂಡಿಯಾ 2025ರಲ್ಲಿ, ಸಂಸದ ತೇಜಸ್ವಿ ಸೂರ್ಯ ಅವರು ಹೆಚ್‌ಎಎಲ್ ನಿರ್ಮಿತ HBT-40 ತರಬೇತಿ ವಿಮಾನದಲ್ಲಿ 20 ನಿಮಿಷಗಳ ಕಾಲ ಹಾರಾಟ ನಡೆಸಿದರು. ಪೈಲಟ್ ಸಮವಸ್ತ್ರ ಧರಿಸಿ ಪೈಲಟ್‌ಗಳೊಂದಿಗೆ ಹಾರಾಟ ಮಾಡಿದ ಅವರು, ಈ ವಿಮಾನ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದ್ದಾರೆ.
ಬೆಂಗಳೂರು, ಫೆಬ್ರವರಿ 13: ನಗರದ ಯಲಹಂಕ ವಾಯುನೆಲೆಯಲ್ಲಿ 15ನೇ ಆವೃತ್ತಿಯ ಏಷ್ಯಾದ ಅತಿದೊಡ್ಡ ಏರೋ ಇಂಡಿಯೋ (Aero India 2025) ವೈಮಾನಿಕ ಪ್ರದರ್ಶನ ನಡೆಯುತ್ತಿದೆ. ಈ ಮಧ್ಯೆ ಸಂಸದ ಸಂಸದ ತೇಜಸ್ವಿ ಸೂರ್ಯ ಕೂಡ ಟ್ರೈನಿ ಏರ್ ಕ್ರಾಫ್ಟ್ ಏರಿ ರೌಂಡ್ಸ್ ಹಾಕಿದ್ದಾರೆ. ಹೆಚ್‌ಎಎಲ್ ನಿರ್ಮಾಣದ ಹೆಚ್ಟಿಟಿ 40 ಟ್ರೈನಿ ಏರ್ ಕ್ರಾಫ್ಟ್ನಲ್ಲಿ ಬೆಳಗ್ಗೆ 20 ನಿಮಿಷಗಳ ಕಾಲ ಹಾರಾಟ ಮಾಡಿದ್ದಾರೆ. ಪೈಲಟ್ ಡ್ರೆಸ್ ತೊಟ್ಟು ಪೈಲಟ್ಗಳ ಜೊತೆ ಲೋಹದ ಹಕ್ಕಿಯಲ್ಲಿ ಹಾರಾಡಿದ್ದು, ಹೆಚ್ಬಿಟಿ ಏರ್ ಕ್ರಾಫ್ಟ್ ನಮ್ಮೆಲ್ಲರ ಹೆಮ್ಮೆ ಎಂದು ಹೇಳಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Feb 13, 2025 06:57 PM
Latest Videos