ಹಲಿ: ಮೇಲ್ಜಾತಿಯವರಿಗಾಗಿ ಇರಿಸಿದ ನೀರಿನ ಪಾತ್ರೆ ಮುಟ್ಟಿದ್ದಕ್ಕಾಗಿ ಶಾಲಾ ಶಿಕ್ಷಕನಿಂದ ಥಳಿತಕ್ಕೊಳಗಾಗಿ ಸಾವಿಗೀಡಾದ ದಲಿತ ಬಾಲಕನ (Dalit boy) ಕುಟುಂಬಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಗುರುವಾರ ಪರಿಹಾರ ಘೋಷಿಸಿದ್ದಾರೆ. ಪ್ರಸ್ತುತ ಪ್ರಕರಣದ ತ್ವರಿತ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ ಗೆಹ್ಲೋಟ್, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ಧನ ನೀಡುವುದರ ಜತೆಗೆ ಎಐಸಿಸಿಯಿಂದ (AICC) ಸಹಾಯಧನವಾಗಿ 20 ಲಕ್ಷ ನೀಡಲಾಗುವುದು. ಕುಟುಂಬದ ಸದಸ್ಯರೊಬ್ಬರಿಗೆ ಕೆಲಸ ನೀಡುವುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಪ್ರಕರಣವನ್ನು ತ್ವರಿತ ವಿಚಾರಣೆ ಮಾಡಲಾಗುವುದು ಎಂದು ಹೇಳಿದ ಸಿಎಂ 9ರ ಹರೆ ಯ ಮುಗ್ಧ ಬಾಲಕನ ಸಾವಿಗೆ ಇಡೀ ದೇಶವೇ ಮರುಗಿದೆ ಎಂದು ಹೇಳಿದ್ದಾರೆ. ಬಾಲಕನ ಸಾವಿನ ಬಗ್ಗೆ ಇತರ ಪಕ್ಷಗಳ ಜತೆ ಕಾಂಗ್ರೆಸ್ ಪಕ್ಷ ಕೂಡಾ ಆಕ್ರೋಶ ವ್ಯಕ್ತ ಪಡಿಸಿದ ಬೆನ್ನಲ್ಲೇ ಗೆಹ್ಲೋಟ್ ಈ ಪರಿಹಾರ ಘೋಷಿಸಿದ್ದಾರೆ.
ಎಸ್ಸಿ- ಎಸ್ಟಿ ಕಾಯ್ದೆ ಪ್ರಕಾರ ಪರಿಹಾರ ಧನ ಜತೆ ಹೆಚ್ಚುವರಿ ಪರಿಹಾರ ಧನವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ನೀಡಲಾಗುವುದು. ಎಐಸಿಸಿ ನಿರ್ದೇಶದ ಪ್ರಕಾರ ರಾಜ್ಯ ಕಾಂಗ್ರೆಸ್ ಸಮಿತಿಯಿಂದ ಹೆಚ್ಚುವರಿ ₹20 ಲಕ್ಷ ಪರಿಹಾರ ಧನವನ್ನು ಬಾಲಕನ ಕುಟುಂಬಕ್ಕೆ ನೀಡಲಾಗುವುದು ಎಂದು ಗೆಹ್ಲೋಟ್ ಸರಣಿ ಟ್ಲೀಟ್ ನಲ್ಲಿ ಹೇಳಿದ್ದಾರೆ. ಇದಕ್ಕಿಂತ ಮುಂಚೆ ರಾಜ್ಯ ಸರ್ಕಾ 5 ಲಕ್ಷ ಪರಿಹಾಯ ಧನ ಘೋಷಿಸಿತ್ತು. ಪ್ರಸ್ತುತ ಪ್ರಕರಣ ಬಗ್ಗೆ ತ್ವರಿತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
जालौर में 9 साल के मासूम बच्चे की मृत्यु से पूरा देश आहत है। अहमदाबाद में विधायक श्री @jigneshmevani80 ने मिलकर घटना पर चर्चा की। इस दुख में सभी समाज परिवार के साथ है। घटना के बाद आरोपी की त्वरित गिरफ्तारी की गई।
— Ashok Gehlot (@ashokgehlot51) August 18, 2022
ಏತನ್ಮಧ್ಯೆ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಪ್ರಧಾನ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದೆ. ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಬಹು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸರು ಕೆಲವು ಎಎಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
#WATCH | Delhi: Aam Aadmi Party (AAP) workers protesting outside Congress HQ over Jalore (Rajasthan) incident, wherein a 9-year-old Dalit student was beaten to death by his teacher, being detained by Police. pic.twitter.com/AhEwI89p4i
— ANI (@ANI) August 18, 2022
ರಾಜಸ್ಥಾನದ ಜಲೋರ್‌ನಲ್ಲಿ ಜುಲೈ 20 ರಂದು ಶಾಲೆಯಲ್ಲಿ ನೀರಿನ ಪಾತ್ರೆಯನ್ನು ಮುಟ್ಟಿದ ಆರೋಪದ ಮೇಲೆ ಒಂಬತ್ತು ವರ್ಷದ ದಲಿತ ವಿದ್ಯಾರ್ಥಿಯನ್ನು ಶಿಕ್ಷಕರೊಬ್ಬರು ಥಳಿಸಿದ್ದರು. ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಆಗಸ್ಟ್ 13 ರಂದು ಅಸು ನೀಗಿದ್ದು,ಆರೋಪಿ ಶಿಕ್ಷಕ ಚೈಲ್ ಸಿಂಗ್ (40) ನ್ನು ಬಂಧಿಸಲಾಗಿದೆ.
Published On - 2:11 pm, Thu, 18 August 22