ರಾಜಸ್ಥಾನದಲ್ಲಿ ದಲಿತ ಬಾಲಕನ ಸಾವು ಪ್ರಕರಣ: ಶಾಸಕನ ರಾಜೀನಾಮೆ ಬೆನ್ನಲ್ಲೇ 12 ಕೌನ್ಸಿಲರ್​​ಗಳ ರಾಜೀನಾಮೆ

ನಾವು ಬುಧವಾರ ಕೋಟಾ ವಿಭಾಗೀಯ ಕೌನ್ಸಿಲರ್‌ಗೆ ನಮ್ಮ ರಾಜೀನಾಮೆಗಳ ಪ್ರತಿಗಳನ್ನು ಸಲ್ಲಿಸುತ್ತೇವೆ  ಎಂದು ಮೆಹ್ತಾ ಹೇಳಿದ್ದಾರೆ. ಪಕ್ಷದ 25 ಕೌನ್ಸಿಲರ್‌ಗಳು ಮತ್ತು ಇತರ ಆರು ಕೌನ್ಸಿಲರ್ ಜತೆ ಜ್ಯೋತಿ ಪರಾಶರ್ ನೇತೃತ್ವದ ಬರನ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಆಡಳಿತ ಮಂಡಳಿಯನ್ನು ಹೊಂದಿದೆ.

ರಾಜಸ್ಥಾನದಲ್ಲಿ ದಲಿತ ಬಾಲಕನ ಸಾವು ಪ್ರಕರಣ: ಶಾಸಕನ ರಾಜೀನಾಮೆ ಬೆನ್ನಲ್ಲೇ 12 ಕೌನ್ಸಿಲರ್​​ಗಳ ರಾಜೀನಾಮೆ
ಕಾಂಗ್ರೆಸ್ ಪಕ್ಷ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 16, 2022 | 8:16 PM

ಕೋಟಾ: ಮೇಲ್ಜಾತಿಯವರಿಗೆ ಇರಿಸಿದ ನೀರಿನ ಪಾತ್ರೆಯನ್ನು ಮುಟ್ಟಿದ್ದಾನೆ ಎಂದು ಜಲೋರ್ (Jalore) ಜಿಲ್ಲೆಯ ಖಾಸಗಿ ಶಾಲೆಯ ಶಿಕ್ಷಕರಿಂದ ಹಲ್ಲೆಗೊಳಗಾಗಿ ದಲಿತ (Dalit) ಬಾಲಕ ಶನಿವಾರ ಸಾವಿಗೀಡಾಗಿದ್ದ. ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ನೀಡಿದ ಪಕ್ಷದ ಶಾಸಕ ಪನಚಂದ್ ಮೇಘವಾಲ್ (Panachand Meghwal) ಅವರಿಗೆ ಬೆಂಬಲ ವ್ಯಕ್ತಪಡಿಸಿ ಬರನ್ ಮುನ್ಸಿಪಲ್ ಕೌನ್ಸಿಲ್‌ನ 25 ಕಾಂಗ್ರೆಸ್ ಕೌನ್ಸಿಲರ್‌ಗಳ ಪೈಕಿ ಕನಿಷ್ಠ 12 ಮಂದಿ ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಜುಲೈ 20 ರಂದು ದಲಿತ ಬಾಲಕನಿಗೆ ಥಳಿಸಲಾಗಿತ್ತು. ಆಗಸ್ಟ್ 13 ರಂದು ಈ ಬಾಲಕ ಸಾವನ್ನಪ್ಪಿದ್ದ. ರಾಜೀನಾಮೆ ನೀಡಿರುವ ವಾರ್ಡ್ ಸಂಖ್ಯೆ 29 ರ ಕೌನ್ಸಿಲರ್ ಯೋಗೇಂದ್ರ ಮೆಹ್ತಾ, ರಾಜಸ್ಥಾನದಲ್ಲಿ ದಲಿತರು ಮತ್ತು ಸಮಾಜದ ವಂಚಿತ ವರ್ಗಗಳ ಮೇಲಿನ ದೌರ್ಜನ್ಯದ ಬಗ್ಗೆ ದುಃಖ ವ್ಯಕ್ತಪಡಿಸಲು ರಾಜೀನಾಮೆ ನೀಡಲಾಗಿದೆ ಎಂದು ಹೇಳಿದರು. ಕೌನ್ಸಿಲರ್‌ಗಳಾದ ರೋಹಿತಾಶ್ವ ಸಕ್ಸೇನಾ, ರಾಜಾರಾಮ್ ಮೀನಾ, ರೇಖಾ ಮೀನಾ, ಲೀಲಾಧರ್ ನಗರ್, ಹರಿರಾಜ್ ಎರ್ವಾಲ್, ಪಿಯೂಷ್ ಸೋನಿ, ಊರ್ವಶಿ ಮೇಘವಾಲ್, ಯಶವಂತ್ ಯಾದವ್, ಅನ್ವರ್ ಅಲಿ, ಜ್ಯೋತಿ ಜಾತವ್ ಮತ್ತು ಮಯಾಂಕ್ ಮಾಥೋಡಿಯಾ ರಾಜೀನಾಮೆ ನೀಡಿದ್ದಾರೆ ಎಂದು ಮೆಹ್ತಾ ಹೇಳಿದ್ದಾರೆ.

ನಾವು ಬುಧವಾರ ಕೋಟಾ ವಿಭಾಗೀಯ ಕೌನ್ಸಿಲರ್‌ಗೆ ನಮ್ಮ ರಾಜೀನಾಮೆಗಳ ಪ್ರತಿಗಳನ್ನು ಸಲ್ಲಿಸುತ್ತೇವೆ  ಎಂದು ಮೆಹ್ತಾ ಹೇಳಿದ್ದಾರೆ. ಪಕ್ಷದ 25 ಕೌನ್ಸಿಲರ್‌ಗಳು ಮತ್ತು ಇತರ ಆರು ಕೌನ್ಸಿಲರ್ ಜತೆ ಜ್ಯೋತಿ ಪರಾಶರ್ ನೇತೃತ್ವದ ಬರನ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಆಡಳಿತ ಮಂಡಳಿಯನ್ನು ಹೊಂದಿದೆ.

ಇದೇ ವಿಚಾರವಾಗಿ ಬರನ್-ಅತ್ರು ಕ್ಷೇತ್ರದ ಶಾಸಕ ಪನಚಂದ್ ಮೇಘವಾಲ್ ಸೋಮವಾರ ಸಿಎಂಗೆ ರಾಜೀನಾಮೆ ಸಲ್ಲಿಸಿದ್ದಾರೆ. ದೇಶ 75 ನೇ ಸ್ವಾತಂತ್ರ್ಯದ ವರ್ಷವನ್ನು ಆಚರಿಸುತ್ತಿರುವಾಗ, ದಲಿತರು ಮತ್ತು ವಂಚಿತರನ್ನು ಇನ್ನೂ ಮಡಿಕೆಯಿದ ನೀರು ಕುಡಿದಿದ್ದಕ್ಕಾಗಿ ಚಿತ್ರಹಿಂಸೆ ನೀಡಿ ಕೊಂದು ಮೀಸೆ ತಿರುವಲಾಗುತ್ತದೆ ಎಂದು ಪನಚಂದ್ ಮೇಘವಾಲ್ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
Image
ನಿನ್ನೆಯ ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಮಾಜಿ ಸಿಎಂ ಹೆಚ್​ ಡಿ ಕುಮಾರಸ್ವಾಮಿ ವ್ಯಂಗ್ಯ; ಬಿಜೆಪಿ ವಿರುದ್ಧ ಆಕ್ರೋಶ
Image
BIG NEWS: ದಲಿತರ ಮೇಲಿನ ದೌರ್ಜನ್ಯ: ರಾಜಸ್ಥಾನದ ಕಾಂಗ್ರೆಸ್ ಶಾಸಕ ಪನಾ ಚಂದ್ ಮೇಘವಾಲ್ ರಾಜೀನಾಮೆ
Image
ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಶಾಲಾ ಶಿಕ್ಷಕನಿಂದ ಥಳಿತಕ್ಕೊಳಗಾದ ದಲಿತ ಬಾಲಕ ಸಾವು; ರಾಜಸ್ಥಾನ ಸರ್ಕಾರದ ವಿರುದ್ಧ ಬಿಜೆಪಿ, ಬಿಎಸ್​​ಪಿ ಕಿಡಿ

“ತನಿಖೆಯ ಹೆಸರಿನಲ್ಲಿ ಕಡತಗಳನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ಸ್ಥಳಾಂತರಿಸುವ ಮೂಲಕ ನ್ಯಾಯಾಂಗದ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚಿನ ಪ್ರಕರಣಗಳನ್ನು ಅಂತಿಮ ವರದಿಯೊಂದಿಗೆ ಮುಚ್ಚಲಾಗಿದೆಯ. ನಾನು ರಾಜ್ಯ ವಿಧಾನಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ನಂತರವೂ ಆಡಳಿತಾಧಿಕಾರಿಗಳು ಕ್ರಮಕ್ಕೆ ಮುಂದಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್