ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವೇ ನಮ್ಮ ಮುಖ್ಯ ಅಜೆಂಡಾ: ಗುಲಾಂ ನಬಿ ಆಜಾದ್

| Updated By: ರಶ್ಮಿ ಕಲ್ಲಕಟ್ಟ

Updated on: Oct 17, 2022 | 12:50 PM

ಬಿಜೆಪಿ ಸರ್ಕಾರವು (ರಾಜ್ಯ ಸ್ಥಾನಮಾನದ ಮರುಸ್ಥಾಪನೆ) ವಿಷಯದಲ್ಲಿ ವಿಳಂಬ ಮಾಡಬಾರದು. ವಿಧಾನಸಭೆ ಚುನಾವಣೆಗೆ ಮುಂಚೆಯೇ ನಮಗೆ ಅದನ್ನು ಹಿಂತಿರುಗಿಸಬೇಕು, ಇದರಿಂದಾಗಿ ನಮ್ಮದೇ ಜನರು ಆಡಳಿತವನ್ನು..

ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವೇ ನಮ್ಮ ಮುಖ್ಯ ಅಜೆಂಡಾ: ಗುಲಾಂ ನಬಿ ಆಜಾದ್
ಗುಲಾಂ ನಬೀ ಆಜಾದ್
Follow us on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕೆಂದು ಡೆಮಾಕ್ರಟಿಕ್ ಆಜಾದ್ ಪಾರ್ಟಿ (DAP) ಅಧ್ಯಕ್ಷ ಗುಲಾಂ ನಬಿ ಆಜಾದ್ (Ghulam Nabi Azad) ಭಾನುವಾರ ಕರೆ ನೀಡಿದ್ದಾರೆ. ಡೆಮಾಕ್ರಟಿಕ್ ಆಜಾದ್ ಪಕ್ಷಕ್ಕೆ ಸಾರ್ವಜನಿಕ ಬೆಂಬಲವನ್ನು ಒಟ್ಟುಗೂಡಿಸಲು ಸಾಮೂಹಿಕ ಸಂಪರ್ಕ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು ಎಂದು ಅವರು ತಮ್ಮ ಪಕ್ಷದ ಕಾರ್ಯಕರ್ತರನ್ನು ಒತ್ತಾಯಿಸಿದ ಅವರು  ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ರಚನೆಯನ್ನು ಬಲಪಡಿಸಲು ತಮ್ಮ ಪಕ್ಷ ಬದ್ಧವಾಗಿದೆ ಎಂದು ಆಜಾದ್ ಹೇಳಿದ್ದಾರೆ. ಕಥುವಾದಲ್ಲಿ ಡೆಮಾಕ್ರಟಿಕ್ ಆಜಾದ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗುಲಾಂ ನಬಿ ಆಜಾದ್, “ರಾಜ್ಯ ಸ್ಥಾನಮಾನ ಮರುಸ್ಥಾಪನೆ, ಸ್ಥಳೀಯರಿಗೆ ಭೂಮಿ ಮತ್ತು ಉದ್ಯೋಗಗಳ ರಕ್ಷಣೆ ಮತ್ತು ವಲಸಿಗ ಕಾಶ್ಮೀರಿ ಪಂಡಿತರ ಮರಳುವಿಕೆ ಮತ್ತು ಪುನರ್ವಸತಿ ನಮ್ಮ ಪಕ್ಷದ ಪ್ರಮುಖ ಕಾರ್ಯಸೂಚಿಯಾಗಿದೆ” ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವ ವಿಳಂಬದ ಬಗ್ಗೆ ಜಮ್ಮುವಿನಲ್ಲಿ ವಾಸಿಸುವ ಜನರು ಕಳವಳಗೊಂಡಿದ್ದಾರೆ ಎಂದು ಆಜಾದ್ ಹೇಳಿದರು.

ಬಿಜೆಪಿ ಸರ್ಕಾರವು (ರಾಜ್ಯ ಸ್ಥಾನಮಾನದ ಮರುಸ್ಥಾಪನೆ) ವಿಷಯದಲ್ಲಿ ವಿಳಂಬ ಮಾಡಬಾರದು. ವಿಧಾನಸಭೆ ಚುನಾವಣೆಗೆ ಮುಂಚೆಯೇ ನಮಗೆ ಅದನ್ನು ಹಿಂತಿರುಗಿಸಬೇಕು, ಇದರಿಂದಾಗಿ ನಮ್ಮದೇ ಜನರು ಆಡಳಿತವನ್ನು ನಡೆಸಬಹುದು ಎಂದು ಆಜಾದ್ ಹೇಳಿದ್ದಾರೆ.

ಎಲ್ಲಾ ಪ್ರದೇಶಗಳು ಮತ್ತು ಉಪ-ಪ್ರದೇಶಗಳಲ್ಲಿನ ಸಮಾಜದ ಪ್ರತಿಯೊಂದು ವರ್ಗದ  ಆಕಾಂಕ್ಷೆಗಳನ್ನು ಪೂರೈಸಲು ತಮ್ಮ ಪಕ್ಷವು ಬದ್ಧವಾಗಿದೆ ಎಂದು ಅವರು ಹೇಳಿದರು. “ಕೇಡರ್ ಜನರನ್ನು ತಲುಪಬೇಕು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯಲು ಅವರಿಗೆ ಸಹಾಯ ಮಾಡಬೇಕು. ಜನರಿಗೆ ಉತ್ತಮ ಆಡಳಿತ ನೀಡಲು ನಾವು ಬಲವಾದ ಪಕ್ಷ ರೂಪಿಸಲು ಪ್ರಯತ್ನಿಸುತ್ತೇವೆ” ಎಂದು ಆಜಾದ್ ಹೇಳಿದರು.
ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕಾಂಗ್ರೆಸ್ ನಾಯಕ ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆ ಕುಸಿತದ ಅಂಚಿನಲ್ಲಿದೆ ಎಂದಿದ್ದಾರೆ. ಪ್ರವಾಸೋದ್ಯಮ, ತೋಟಗಾರಿಕೆ, ಸಾರಿಗೆ ಅಥವಾ ವ್ಯಾಪಾರ ಕಳೆದ ಎರಡು ವರ್ಷಗಳಲ್ಲಿ ನಷ್ಟವನ್ನು ಅನುಭವಿಸದ ಯಾವುದೇ ಕ್ಷೇತ್ರವಿಲ್ಲ” ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವಿರಾರು ನಿರುದ್ಯೋಗಿ ವಿದ್ಯಾವಂತ ಯುವಕರು ಉದ್ಯೋಗಾವಕಾಶಕ್ಕಾಗಿ ಕಾಯುತ್ತಿದ್ದಾರೆ. “ನಿರುದ್ಯೋಗಿ ಯುವಕರನ್ನು ಕರೆಯಬೇಕಾಗಿದ್ದ ಕೈಗಾರಿಕಾ ವಲಯವು ಹೋರಾಟವನ್ನು ಮುಂದುವರೆಸಿರುವುದರಿಂದ ಪರಿಸ್ಥಿತಿ ತುಂಬಾ ಹದಗೆಟ್ಟಿದೆ ಎಂದು ಅವರು ಹೇಳಿದರು.