ಭಾರತ-ಪಾಕ್ ಗಡಿಯಲ್ಲಿ 12ಕೆಜಿ ಸರಕು ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

ಭದ್ರತಾ ಪಡೆಗಳು ಗಮನಿಸಿದ 191 ಡ್ರೋನ್‌ಗಳಲ್ಲಿ 171 ಭಾರತ-ಪಾಕಿಸ್ತಾನ ಗಡಿಯ ಮೂಲಕ ಪಂಜಾಬ್ ವಲಯದ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದರೆ 20 ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿವೆ.

ಭಾರತ-ಪಾಕ್ ಗಡಿಯಲ್ಲಿ 12ಕೆಜಿ ಸರಕು ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್
ಡ್ರೋನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 17, 2022 | 3:25 PM

ದೆಹಲಿ: ಅಮೃತಸರ ವಲಯದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ರಾತ್ರಿ ವೇಳೆ ಮಾದಕ ವಸ್ತು ಸಾಗಿಸುತ್ತಿದ್ದ ಶಂಕಿತ ಕ್ವಾಡ್ ಕಾಪ್ಟರ್ ಡ್ರೋನ್ (quad-copter drone) ಅನ್ನು ಗಡಿ ಭದ್ರತಾ ಪಡೆ (Border Security Force) ಭಾನುವಾರ ಹೊಡೆದುರುಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಗಡಿಯಲ್ಲಿ ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಇದು. 12 ಕೆಜಿ ತೂಕದ ಡ್ರೋನ್‌ನಲ್ಲಿ ನಾಲ್ಕು ಪ್ರೊಪೆಲ್ಲರ್‌ಗಳಿದ್ದವು. ರಾತ್ರಿ 9.15 ರ ಸುಮಾರಿಗೆ ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ಬಿಎಸ್‌ಎಫ್‌ನ 22 ನೇ ಬೆಟಾಲಿಯನ್ ಸೈನಿಕರು ಅದನ್ನು ತಡೆದು ಹೊಡೆದುರುಳಿಸಿದರು ಎಂದು ಅವರು ಹೇಳಿದರು. ಡ್ರೋನ್ ಅಡಿಯಲ್ಲಿ ಹಸಿರು ಬಣ್ಣದ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದ್ದು ಅದರಲ್ಲಿ ಎರಡು ಕೆಜಿ ಮಾದಕವಸ್ತು ಇದೆ ಎಂದು ಶಂಕಿಸಲಾಗಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಸೈನಿಕರ ಗುಂಡಿನ ದಾಳಿಯಿಂದಾಗಿ ಎರಡು ಪ್ರೊಪೆಲ್ಲರ್‌ಗಳಿಗೆ ಹಾನಿಯಾಗಿದೆ. ಅದರ ಜತೆಗಿರುವ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಎರಡು ದಿನಗಳಲ್ಲಿ ಬಿಎಸ್‌ಎಫ್ ಪಡೆಗಳು ಹೊಡೆದುರುಳಿಸಿದ ಎರಡನೇ ಡ್ರೋನ್ ಇದಾಗಿದೆ  ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಕ್ಟೋಬರ್ 13-14 ರ ಮಧ್ಯರಾತ್ರಿ ನಡೆದ ಇದೇ ರೀತಿಯ ಘಟನೆಯಲ್ಲಿ, ಪಂಜಾಬ್‌ನ ಗುರುದಾಸ್‌ಪುರ ಸೆಕ್ಟರ್‌ನಲ್ಲಿ ಬಿಎಸ್‌ಎಫ್ ದೊಡ್ಡ (ಕ್ವಾಡ್‌ಕಾಪ್ಟರ್) ಪಾಕಿಸ್ತಾನಿ ಡ್ರೋನ್ ಅನ್ನು ಹೊಡೆದುರುಳಿಸಿತು. ಕಳೆದ ಒಂಬತ್ತು ತಿಂಗಳುಗಳಲ್ಲಿ, ಭದ್ರತಾ ಪಡೆಗಳು ಪಾಕಿಸ್ತಾನದಿಂದ 191 ಡ್ರೋನ್‌ಗಳು ಭಾರತದ ಭೂಪ್ರದೇಶಕ್ಕೆ ಅಕ್ರಮ ಪ್ರವೇಶವನ್ನು ಗಮನಿಸಿದ್ದು, ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಕಳವಳವನ್ನು ಹೆಚ್ಚಿಸಿವೆ. ಪಾಕಿಸ್ತಾನದ ಕಡೆಯಿಂದ ಇಂತಹ ಕಾನೂನುಬಾಹಿರ ಪ್ರಯತ್ನಗಳನ್ನು ನಿರ್ವಹಿಸಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಭದ್ರತಾ ಪಡೆಗಳ ಮಾಹಿತಿಯನ್ನು ಅನ್ನು ಕೇಂದ್ರ ಇತ್ತೀಚೆಗೆ ಹಂಚಿಕೊಂಡಿದೆ.

ಭದ್ರತಾ ಪಡೆಗಳು ಗಮನಿಸಿದ 191 ಡ್ರೋನ್‌ಗಳಲ್ಲಿ 171 ಭಾರತ-ಪಾಕಿಸ್ತಾನ ಗಡಿಯ ಮೂಲಕ ಪಂಜಾಬ್ ವಲಯದ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಿದರೆ 20 ಜಮ್ಮು ಸೆಕ್ಟರ್‌ನಲ್ಲಿ ಕಂಡುಬಂದಿವೆ ಎಂದು ಎಎನ್‌ಐ ದಾಖಲೆಯಲ್ಲಿ ಉಲ್ಲೇಖಿಸಿದೆ.

ಇಂತಹ ಕಾನೂನುಬಾಹಿರ ಚಟುವಟಿಕೆಗಳ ಮೇಲೆ ನಿಗಾ ಇಡಲು ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಯೋಜಿಸಲಾದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಹೊಡೆದುರುಳಿಸಿದಾಗ ಈ ಡ್ರೋನ್‌ಗಳು ಅಥವಾ ಯುಎವಿಗಳಲ್ಲಿ ಹೆಚ್ಚಿನವು ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ದಾಖಲೆ ಹೇಳಿವೆ.

ಈ ವರ್ಷ ಜನವರಿ 1 ರಿಂದ ಸೆಪ್ಟೆಂಬರ್ 15 ರ ನಡುವೆ ಹೊಡೆದುರುಳಿಸಿದ ಏಳು ಡ್ರೋನ್‌ಗಳಲ್ಲಿ ಪಂಜಾಬ್‌ನ ಅಮೃತಸರ, ಫಿರೋಜ್‌ಪುರ ಮತ್ತು ಅಬೋಹರ್ ಪ್ರದೇಶಗಳಲ್ಲಿ ವೀಕ್ಷಿಸಲಾಗಿದೆ. ಪಾಕಿಸ್ತಾನದಿಂದ ಜಮ್ಮು ಮತ್ತು ಪಂಜಾಬ್‌ನ ಅಂತರಾಷ್ಟ್ರೀಯ ಗಡಿಯುದ್ದಕ್ಕೂ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು ಸಾಗಿಸಲು ಪಾಕಿಸ್ತಾನದ ಕಡೆಯಿಂದ ಡ್ರೋನ್‌ಗಳನ್ನು ಬಳಸಲಾಗುತ್ತಿದೆ ಎಂದು ಬಿಎಸ್‌ಎಫ್‌ನ ಅಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ.

Published On - 3:23 pm, Mon, 17 October 22

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್