AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು: ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ

ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕೆಂದು ಪ್ರಧಾನಿಗೆ ಮನವಿ ಮಾಡಿದ ಮಮತಾ ಬ್ಯಾನರ್ಜಿ

ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೌರವ್ ಗಂಗೂಲಿಗೆ ಅವಕಾಶ ನೀಡಬೇಕು: ಪ್ರಧಾನಿಗೆ ಮಮತಾ ಬ್ಯಾನರ್ಜಿ ಮನವಿ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 17, 2022 | 3:15 PM

ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ (Sourav Ganguly) ಅವರ ಅಧಿಕಾರವಧಿ ಮುಗಿದಿದ್ದು ಅವರ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಗಂಗೂಲಿ “ವಂಚಿತರಾಗಿದ್ದಾರೆ” ಎಂದು ಹೇಳಿದ್ದಾರೆ. ಗಂಗೂಲಿ ಅವರನ್ನು ಐಸಿಸಿ (International Cricket Council) ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಮಮತಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಸೌರವ್ ಗಂಗೂಲಿ ಅವರನ್ನು “ಅನ್ಯಾಯವಾಗಿ ಹೊರಗಿಡಲಾಗಿದೆ” ಎಂದು ಬಂಗಾಳ ಮುಖ್ಯಮಂತ್ರಿ ಹೇಳಿದರು. ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ, ನನಗೆ ತುಂಬಾ ದುಃಖವಾಗಿದೆ. ಸೌರವ್ ಬಹಳ ಜನಪ್ರಿಯ ವ್ಯಕ್ತಿ. ಅವರು ಭಾರತ ತಂಡದ ನಾಯಕರಾಗಿದ್ದರು. ಅವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಬಂಗಾಳದ ಹೆಮ್ಮೆ ಮಾತ್ರವಲ್ಲ, ಭಾರತದ ಹೆಮ್ಮೆ. ಅವರನ್ನು ಯಾಕೆ ಅನ್ಯಾಯವಾಗಿ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿ ಅವರಿಗೆ ನನ್ನ ವಿನಯಪೂರ್ವಕ ನಮನಗಳು. ಸೌರವ್ ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮಮತಾ ಹೇಳಿದ್ದಾರೆ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕಿದೆ.

ಬಿಸಿಸಿಐ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಗಮಿತ ಮುಖ್ಯಸ್ಥ ಸೌರವ್ ಗಂಗೂಲಿ ನಂತರ ಆ ಸ್ಥಾನಕ್ಕೆ ರೋಜರ್ ಬಿನ್ನಿ ಬರುವ ಸಾಧ್ಯತೆ ಇದೆ. ಗಂಗೂಲಿ ಅವರು ಮಂಡಳಿಯ ಮುಖ್ಯಸ್ಥರಾಗಿ ಮುಂದುವರಿಯಲು ಬಯಸಿದ್ದರು. ಆದರೆ ಇತರ ಸದಸ್ಯರಿಂದ ಅವರು ಬಯಸಿದ ಬೆಂಬಲ ಸಿಗಲಿಲ್ಲ ಎಂದು ಮಾಧ್ಯಮಗಳ ವರದಿ ಮಾಡಿವೆ.

Published On - 2:41 pm, Mon, 17 October 22

ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಪರಿಸರ ಮಾಲಿನ್ಯ ಹೆಚ್ಚುತ್ತಿರುವ ಬೆಂಗಳೂರಿಗೆ ಬೇಕು ಎಲೆಕ್ಟ್ರಿಕ್ ಬಸ್​ಗಳು
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ಕರಾವಳಿ ಪ್ರಾಂತ್ಯದ ಗಲಭೆಗಳಿಗೆ ಸಾಮಾಜಿಕ ಜಾಲತಾಣ ದೂರಿದ ಗುಂಡೂರಾವ್
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಕುಳಿತು ವ್ಯಕ್ತಿಯ ಹುಚ್ಚಾಟ
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
‘ಸುಧಾರಾಣಿ ಕಣ್ಣಲ್ಲೇ ನಟಿಸ್ತಾರೆ’; ಬಾಯ್ತುಂಬ ಹೊಗಳಿದ ರವಿಚಂದ್ರನ್
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ
ಮೂರುಬಾರಿ ಶಾಸಕನಾದರೆ ಮಂತ್ರಿ ಮಾಡುವ ಪರಿಪಾಠ ಇಲ್ಲವಾಗಿದೆ: ಗೋಪಾಲಕೃಷ್ಣ