Diwali 2022: ಹಬ್ಬ ಆಚರಿಸಲು ಊರಿಗೆ ಮರಳುತ್ತಿರುವವರಿಗೆ ಶುಭಸುದ್ದಿ, ಮೂರು ವಿಶೇಷ ರೈಲುಗಳ ಸಂಚಾರ

ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ದೂರದ ಊರುಗಳಲ್ಲಿ ನೆಲೆಸಿರುವವರು ತಮ್ಮ ಮನೆಗೆ ಮರಳಲು ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಹಬ್ಬದ ಋತುವಿನಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಲು ಮುಂದಾಗಿದೆ.

Diwali 2022: ಹಬ್ಬ ಆಚರಿಸಲು ಊರಿಗೆ ಮರಳುತ್ತಿರುವವರಿಗೆ ಶುಭಸುದ್ದಿ, ಮೂರು ವಿಶೇಷ ರೈಲುಗಳ ಸಂಚಾರ
IRCTC: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೂರು ವಿಶೇಷ ರೈಲುಗಳನ್ನು ಓಡಿಸಲಿರುವ ಭಾರತೀಯ ರೈಲ್ವೆ
Follow us
TV9 Web
| Updated By: Rakesh Nayak Manchi

Updated on:Oct 17, 2022 | 11:49 AM

ಎರಡು ವರ್ಷಗಳ ಕೋವಿಡ್ ಬಾಧೆಯ ನಂತರ ಈ ಬಾರಿ ಭಾರತವು ಮತ್ತೊಮ್ಮೆ ದೇಶದಾದ್ಯಂತ ಪೂರ್ಣ ವೈಭವ ಮತ್ತು ಉತ್ಸಾಹದಿಂದ ಹಬ್ಬಗಳನ್ನು ಆಚರಿಸುತ್ತಿದೆ. ಸದ್ಯ ನವರಾತ್ರಿ ಮುಗಿದು ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ದೂರದ ಊರುಗಳಲ್ಲಿ ನೆಲೆಸಿರುವ ಮಂದಿ ತಮ್ಮ ಊರುಗಳಿಗೆ ಹೋಗಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುಗಮ ಪ್ರಯಾಣವನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೆ ಮೂರು ವಿಶೇಷ ರೈಲುಗಳನ್ನು ಬಿಟ್ಟಿದೆ. ಹಬ್ಬದ ವಿಶೇಷ ರೈಲುಗಳು ಕ್ರಮವಾಗಿ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ನಿ ನಡುವೆ ಸಂಚರಿಸಲಿವೆ ಎಂದು ಕೇಂದ್ರ ರೈಲ್ವೆ ಟ್ವೀಟ್ ಮಾಡಿದೆ.

ಮುಂಬೈ-ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು

01185 ವಿಶೇಷ ರೈಲು ಲೋಕಮಾನ್ಯ ತಿಲಕ್ ಟರ್ಮಿನಲ್​ನಿಂದ ಅಕ್ಟೋಬರ್ 21 ರಿಂದ ನವೆಂಬರ್ 11 ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15ಕ್ಕೆ ಹೊರಡುತ್ತದೆ (ನಾಲ್ಕು ಟ್ರಿಪ್‌ಗಳು) ಮತ್ತು ಮರುದಿನ ಸಂಜೆ 5:05ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ. 01186 ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಅಕ್ಟೋಬರ್ 22 ರಿಂದ ನವೆಂಬರ್ 21 ರವರೆಗೆ ಪ್ರತಿ ಶನಿವಾರ ಸಂಜೆ 6:45 ಕ್ಕೆ ಹೊರಡುತ್ತದೆ (4 ಟ್ರಿಪ್‌ಗಳು) ಮತ್ತು ಮರುದಿನ ಬೆಳಗ್ಗೆ 11.45ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್​ಗೆ ಆಗಮಿಸಲಿದೆ.

ನಿಲ್ದಾಣ: ಥಾಣೆ, ಪನ್ವೇಲ್, ರೋಹಾ, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ತಿವಿಂ, ಕರ್ಮಾಲಿ, ಮಡಗಾಂವ್, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಮುರುಡೇಶ್ವರ, ಭಟ್ಕಳ, ಮೂಕಾಂಬಿಕಾ ರಸ್ತೆ ಬೈಂದೂರು, ಉಡುಪಿ ಕುಂದಾಪುರ, ಮೂಲ್ಕಿ ಮತ್ತು ಸುರತ್ಕಲ್.

ಬೋಗಿಗಳು: ಎಸಿ-2 ಟೈರ್ ಬೋಗಿ ಒಂದು, ಎಸಿ-3 ಟೈರ್ ಬೋಗಿ ಮೂರು, 8 ಸ್ಲೀಪರ್ ಕ್ಲಾಸ್, ಎರಡು ಗಾರ್ಡ್ ಬ್ರೇಕ್ ವ್ಯಾನ್ ಸೇರಿದಂತೆ 5 ಸಾಮಾನ್ಯ ಎರಡನೇ ದರ್ಜೆ ಬೋಗಿಗಳಿರಲಿವೆ.

ಮುಂಬೈ-ಮಡ್ಗಾಂವ್ ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು

01187 ವಿಶೇಷ ರೈಲು ಲೋಕಮಾನ್ಯ ತಿಲಕ್ ಟರ್ಮಿನಲ್​ನಿಂದ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಪ್ರತಿ ಭಾನುವಾರ ರಾತ್ರಿ 10:15ಕ್ಕೆ ಹೊರಡುತ್ತದೆ (5 ಟ್ರಿಪ್‌ಗಳು) ಮತ್ತು ಮರುದಿನ ಮಧ್ಯಾಹ್ನ 12.30 ಕ್ಕೆ ಮಡಗಾಂವ್ ಜಂಕ್ಷನ್‌ಗೆ ಆಗಮಿಸುತ್ತದೆ. 01188 ವಿಶೇಷ ರೈಲುಗಳು ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ಪ್ರತಿ ಸೋಮವಾರ ಮಧ್ಯಾಹ್ನ 1:30 ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡುತ್ತವೆ (5 ಟ್ರಿಪ್‌ಗಳು) ಮತ್ತು ಅದೇ ದಿನ ರಾತ್ರಿ 11:45 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಲ್ ತಲುಪಲಿದೆ.

ನಿಲುಗಡೆ : ಥಾಣೆ, ಪನ್ವೇಲ್, ರೋಹಾ, ಮಂಗಾಂವ್, ಖೇಡ್, ಚಿಪ್ಲುನ್, ಸಂಗಮೇಶ್ವರ ರಸ್ತೆ, ರತ್ನಗಿರಿ, ವೈಭವ್ವಾಡಿ ರಸ್ತೆ, ಕಂಕಾವಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರಸ್ತೆ, ಥಿವಿಮ್ ಮತ್ತು ಕರ್ಮಾಲಿ.

ಬೋಗಿಗಳು: ಎಸಿ-2 ಟೈರ್ ಬೋಗಿ ಒಂದು, ಎಸಿ-3 ಟೈರ್ ಬೋಗಿ ಮೂರು, 8 ಸ್ಲೀಪರ್ ಕ್ಲಾಸ್, ಎರಡು ಗಾರ್ಡ್ ಬ್ರೇಕ್ ವ್ಯಾನ್ ಸೇರಿದಂತೆ 5 ಸಾಮಾನ್ಯ ಎರಡನೇ ದರ್ಜೆ ಬೋಗಿಗಳಿರಲಿವೆ.

ಪುಣೆ ಜಂಕ್ಷನ್ -ಅಜ್ನಿ ಸೂಪರ್‌ಫಾಸ್ಟ್ ಸಾಪ್ತಾಹಿಕ ವಿಶೇಷ ರೈಲು

01189 ವಿಶೇಷ ರೈಲು ಪುಣೆ ಜಂಕ್ಷನ್‌ನಿಂದ ಅಕ್ಟೋಬರ್ 18 ರಿಂದ ನವೆಂಬರ್ 29 ರವರೆಗೆ ಪ್ರತಿ ಮಂಗಳವಾರ ಮಧ್ಯಾಹ್ನ 3:15ಕ್ಕೆ ಹೊರಡುತ್ತದೆ (7 ಟ್ರಿಪ್‌ಗಳು) ಮತ್ತು ಮರುದಿನ ಬೆಳಗ್ಗೆ 4.50 ಗಂಟೆಗೆ ಅಜ್ನಿ ತಲುಪಲಿದೆ. 01190 ಸಂಖ್ಯೆಯ ವಿಶೇಷ ರೈಲು ಅಕ್ಟೋಬರ್ 19 ರಿಂದ ನವೆಂಬರ್ 30 ರವರೆಗೆ ಪ್ರತಿ ಬುಧವಾರ ರಾತ್ರಿ 7:50ಕ್ಕೆ ಅಜ್ನಿಯಿಂದ ಹೊರಡುತ್ತದೆ (7 ಟ್ರಿಪ್‌ಗಳು) ಮತ್ತು ಮರುದಿನ ಬೆಳಗ್ಗೆ 11.35ಕ್ಕೆ ಪುಣೆ ಜಂಕ್ಷನ್‌ಗೆ ಆಗಮಿಸುತ್ತದೆ.

ನಿಲುಗಡೆಗಳು: ದೌಂಡ್ ಕಾರ್ಡ್ ಲೈನ್, ಕೋಪರ್ಗಾಂವ್, ಮನ್ಮಾಡ್, ಭೂಸಾವಲ್, ನಂದೂರಾ, ಅಕೋಲಾ, ಬದ್ನೇರಾ, ಧಮಂಗಾವ್ ಮತ್ತು ವಾರ್ಧಾ.

ಬೋಗಿಗಳು: 13 AC-3 ಶ್ರೇಣಿ ಮತ್ತು ಎರಡು ಜನರೇಟರ್ ವ್ಯಾನ್ ಬೋಗಿಗಳು ಇರಲಿವೆ.

ಇದಲ್ಲದೆ, 01185/01186 ಮತ್ತು 01187/01188 ವಿಶೇಷ ರೈಲುಗಳು ಅಕ್ಟೋಬರ್ 30 ರವರೆಗೆ ಮಾನ್ಸೂನ್ ಸಮಯಕ್ಕೆ ಮತ್ತು ನವೆಂಬರ್ 6 ರಿಂದ ರೋಹಾ ಮತ್ತು ಮಂಗಳೂರು ಜಂಕ್ಷನ್‌ ಮತ್ತು ಮಡಗಾಂವ್ ನಡುವೆ ಮಾನ್ಸೂನ್ ಅಲ್ಲದ ಸಮಯಗಳಿಗೆ ಚಲಿಸುತ್ತವೆ ಎಂದು ಕೇಂದ್ರ ರೈಲ್ವೆ ಹೈಲೈಟ್ ಮಾಡಿದೆ.

ಪ್ರತಿ ವರ್ಷವೂ ಹಬ್ಬದ ಋತುವಿನಲ್ಲಿ ರೈಲಿನಲ್ಲಿ ಪ್ರಯಾಣಿಸುವರ ಸಂಖ್ಯೆ ಹೆಚ್ಚಿರುವ ಕಾರಣ ರೈಲ್ವೇ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಹಬ್ಬದ ಸಂದರ್ಭಗಲ್ಲಿ ಈ ಹೆಚ್ಚುವರಿ ಹೊರೆಯನ್ನು ನಿರ್ವಹಿಸಲು ಭಾರತೀಯ ರೈಲ್ವೆ ಪ್ರತಿ ವರ್ಷ ಹಬ್ಬಗಳ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಓಡಿಸುತ್ತದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:31 am, Mon, 17 October 22

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ