
ಅಯೋಧ್ಯೆ, ಅಕ್ಟೋಬರ್ 23: ಚಳಿಗಾಲದಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ (Ram Temple) ದರ್ಶನದ ಸಮಯವನ್ನು ಬದಲಾಯಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಪ್ರತಿದಿನ, ಹೆಚ್ಚಿನ ಸಂಖ್ಯೆಯ ಭಕ್ತರು ರಾಮ ಲಾಲ್ ದರ್ಶನ ಪಡೆಯಲು ಭೇಟಿ ನೀಡುತ್ತಾರೆ. ಆದರೆ, ಈಗ ದೇವಾಲಯದ ಟ್ರಸ್ಟ್ ರಾಮ ಮಂದಿರದಲ್ಲಿ ದರ್ಶನ ಮತ್ತು ಆರತಿಯ ಸಮಯವನ್ನು ಮತ್ತೊಮ್ಮೆ ಬದಲಾಯಿಸಿರುವುದಾಗಿ ಘೋಷಿಸಿದೆ.
ಇತ್ತೀಚೆಗೆ, ಟ್ರಸ್ಟ್ ರಾಮಲಲ್ಲಾ ದರ್ಶನ ಮತ್ತು ಆರತಿ ಸಮಯಕ್ಕಾಗಿ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ, ಮಧ್ಯಾಹ್ನ ಸ್ವಲ್ಪ ಸಮಯದವರೆಗೆ ದೇವಾಲಯದ ಬಾಗಿಲುಗಳು ಮುಚ್ಚಿರುತ್ತವೆ. ದೇವಾಲಯದ ಬಾಗಿಲುಗಳು ಯಾವಾಗ ತೆರೆಯುತ್ತವೆ ಮತ್ತು ಆರತಿಯ ಸಮಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ವಿಶ್ವ ದಾಖಲೆ ಸೃಷ್ಟಿ; ರಾಮ ಜನ್ಮಭೂಮಿಯಲ್ಲಿ ಬೆಳಗಿದ 26 ಲಕ್ಷ ದೀಪಗಳು
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ, ಶರತ್ಕಾಲದ ದೃಷ್ಟಿಯಿಂದ ರಾಮ ದೇವಾಲಯದ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯವನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ. ಈ ಮೊದಲು ದೇವಾಲಯದಲ್ಲಿ ಬೆಳಿಗ್ಗೆ 4 ಗಂಟೆಗೆ ನಡೆಯುತ್ತಿದ್ದ ಮಂಗಳಾರತಿ ಈಗ ಬೆಳಿಗ್ಗೆ 4.30ಕ್ಕೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ನಡೆಯುತ್ತಿದ್ದ ಶೃಂಗಾರ ಆರತಿ ಈಗ ಬೆಳಿಗ್ಗೆ 6.30ಕ್ಕೆ ನಡೆಯಲಿದೆ.
ಇದನ್ನೂ ಓದಿ: Ayodhya Ram Mandir: ಒಂದೂವರೆ ವರ್ಷದಲ್ಲಿ 5.5 ಕೋಟಿ ಭಕ್ತರಿಂದ ಅಯೋಧ್ಯೆ ರಾಮನ ದರ್ಶನ
ದೇವಾಲಯದ ಬಾಗಿಲು ಭಕ್ತರಿಗೆ ಬೆಳಿಗ್ಗೆ 6.30ಕ್ಕೆ ತೆರೆಯುತ್ತಿದ್ದವು. ಆದರೆ, ಇಂದಿನಿಂದ ಅವು ಬೆಳಿಗ್ಗೆ 7 ಗಂಟೆಗೆ ತೆರೆಯುತ್ತವೆ. ರಾತ್ರಿಯ ದೇವಾಲಯದ ಮುಚ್ಚುವ ಸಮಯ ಬದಲಾಗಿಲ್ಲ. ದೇವಾಲಯದ ಬಾಗಿಲುಗಳು ಹಿಂದಿನಂತೆ ರಾತ್ರಿ 9.30ಕ್ಕೆ ಮುಚ್ಚಲ್ಪಡುತ್ತವೆ. ದೇವಾಲಯದ ಬಾಗಿಲುಗಳು ಮಧ್ಯಾಹ್ನ 12.30ರಿಂದ 1ರವರೆಗೆ ಮುಚ್ಚಿರುತ್ತವೆ. ಈ ಸಮಯದಲ್ಲಿ ಯಾವುದೇ ಭಕ್ತರಿಗೆ ರಾಮಲಲ್ಲಾಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ